ETV Bharat / state

ಅಡುಗೆ ಭಟ್ಟ್​ನಿಂದಲೇ​ ಬರೋಬ್ಬರಿ 70 ಲಕ್ಷ ರೂ. ಕಳ್ಳತನ - bangalore crime news

ಬೆಂಗಳೂರಿನ ಪ್ರತಿಷ್ಠಿತರ ಹಾಗೂ ರಾಜಕಾರಣಿಗಳ ಮನೆಯಲ್ಲಿ ಅಡುಗೆ ಭಟ್ಟ್​ನಾಗಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ಶಾಂತಕುಮಾರ್​ನನ್ನು ಬಂಧಿಸಲಾಗಿದೆ. ಈತ ಮಾಜಿ ಸಿಎಂ ಎಸ್​.ಎಂ. ಕೃಷ್ಣ ಅವರ ಮನೆಯಲ್ಲಿಯೂ ಅಡುಗೆ ಮಾಡಿಕೊಂಡಿದ್ದನು ಎಂದು ಪೊಲೀಸರು ಮಾಹಿತಿ ನೀಡಿದರು.

sheaf Arrested on charges of theft in bangalore
ಅಡುಗೆ ಭಟ್ಟ್​ನಿಂದಲೇ​ ಬರೋಬ್ಬರಿ 70 ಲಕ್ಷ ಕಳ್ಳತನ
author img

By

Published : Aug 29, 2020, 11:55 PM IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮನೆ ಸೇರಿದಂತೆ ಪ್ರತಿಷ್ಠಿತ ಸ್ಟಾರ್ ಹೊಟೇಲ್​ಗಳಲ್ಲಿ ಅಡುಗೆ ಕೆಲಸ ಮಾಡುತ್ತಿದ್ದು, ನಂತರ ಉದ್ಯಮಿ ಮನೆಗಳನ್ನು ಟಾರ್ಗೆಟ್​ ಮಾಡಿ, ಲಕ್ಷಾಂತರ ರೂಪಾಯಿ ದೋಚಿದ್ದ ಅಡುಗೆ ಭಟ್ಟನನ್ನು‌ ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.

ಅಡುಗೆ ಭಟ್ಟ್​ನಿಂದಲೇ​ ಬರೋಬ್ಬರಿ 70 ಲಕ್ಷ ಕಳ್ಳತನ

ತಮಿಳುನಾಡು ಮೂಲದ ಶಾಂತಕುಮಾರ್ ಬಂಧಿತ ಆರೋಪಿಯಾಗಿದ್ದಾನೆ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಿಯಲ್‌ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ದೇವಿದಾಸ್ ಎಂಬುವವರ ಮನೆಯಲ್ಲಿ ಕಳೆದ ಒಂದು ವರ್ಷದಿಂದ ಅಡುಗೆ ಭಟ್ಟ​ನಾಗಿ ಕೆಲಸ ಮಾಡುತ್ತಿದ್ದನು. ಮಾಲೀಕರ ವಿಶ್ವಾಸ ಸಂಪಾದಿಸಿಕೊಂಡಿದ್ದ ಶಾಂತಕುಮಾರ್, ನಿಷ್ಠೆಯಿಂದಲೇ ಕೆಲಸ ಮಾಡುವ ನಾಟಕವಾಡಿದ್ದಾನೆ.

ಹಣದ ವ್ಯಾಮೋಹಕ್ಕೆ ಬಿದ್ದ ಶಾಂತಕುಮಾರ್ ಮಾಲೀಕರ ಮನೆಯ ಸುಮಾರು 70 ಲಕ್ಷ ರೂಪಾಯಿ ಕಳ್ಳತನ‌ ಮಾಡಿ, ತಮಿಳುನಾಡಿಗೆ ಪರಾರಿಯಾಗಿದ್ದನು. ಕಳ್ಳತನದ ಹಣದಿಂದಲೇ ಒಂದಷ್ಟು ಸಾಲ ತೀರಿಸಿದ್ದಾನೆ‌. ಬಂಧನ ಭೀತಿಯಿಂದ ತಮಿಳುನಾಡು ಹಾಗೂ ಕೇರಳದಲ್ಲಿ ತಲೆಮರೆಸಿಕೊಂಡು ತಿರುಗಾಡುತ್ತಿದ್ದನು.

ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅವರ ಮನೆಯಲ್ಲಿ ಶಾಂತ ಕುಮಾರ್ ಅಡುಗೆ ಕೆಲಸ‌ ಮಾಡುತ್ತಿದ್ದನು. ಸದ್ಯ ಆರೋಪಿಯಿಂದ 53.70 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.