ಬೆಂಗಳೂರು : ಮೂಕಪ್ರಾಣಿ ಜೊತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ ವ್ಯಕ್ತಿಯೊಬ್ಬ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ. ತನ್ನ ಕಾಮುಕತೆಗೆ ಮೂಕಪ್ರಾಣಿ ಶ್ವಾನ ಬಳಸಿಕೊಂಡಿದ್ದ ಮಂಡ್ಯ ಮೂಲದ ಮರಿಗೌಡ ಎಂಬಾತನನ್ನು ತಿಲಕ್ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಶುಪಾಲನ ಭವನದ ಪ್ರಾಣಿ ಕಲ್ಯಾಣ ಉಸ್ತುವಾರಿ ತೇಜೇಶ್ವರ್ ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಸೆ. 23ರಂದು ಜಯನಗರ ಟಿ ಬ್ಲಾಕ್ನ 34ನೇ ಕ್ರಾಸ್ ಬಳಿ ಆರೋಪಿಯು ನಾಯಿಯ ಗುದನಾಳಕ್ಕೆ ಕೈ ಹಾಕಿ ವಿಕೃತಿ ಮೆರೆದಿದ್ದಾನೆ. ಸ್ಥಳೀಯ ವ್ಯಕ್ತಿಯೊಬ್ಬರು ಮೊಬೈಲ್ನಲ್ಲಿ ವಿಡಿಯೋ ಸೆರೆಹಿಡಿದಿದ್ದರು. ಈ ಸಂಬಂಧ ಪ್ರಾಣಿ ಕಲ್ಯಾಣ ಉಸ್ತುವಾರಿ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಲಾಗಿದೆ.
ವಿದ್ಯಾರ್ಥಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ : 15 ವರ್ಷದ ವಿದ್ಯಾರ್ಥಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿರುವ ಆಘಾತಕಾರಿ ಘಟನೆ ಶಹವಾಡಿ ತಾಲೂಕಿನ ಕರಂಜೋಶಿ ಗ್ರಾಮದಲ್ಲಿ (ಸೆಪ್ಟೆಂಬರ್ -5 -2023) ಬೆಳಕಿಗೆ ಬಂದಿತ್ತು. ಇಲ್ಲಿನ ಅಕಾಡೆಮಿಯೊಂದರ ಅಧ್ಯಕ್ಷ, ವಿದ್ಯಾರ್ಥಿಯೊಂದಿಗೆ ಅಸಹಜ ಕೃತ್ಯ ಎಸಗಿದ್ದು, ಈ ಸಂಬಂಧ ಶಾಹುವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಕಾಡೆಮಿ ಅಧ್ಯಕ್ಷ ಸಂಜಯ್ ಬಲಿರಾಮ್ ಲೋಕ್ರೆ, ಕಾಲು ಮಸಾಜ್ ಮಾಡಿಸಿಕೊಳ್ಳಲು ನನ್ನನ್ನು ತನ್ನ ಕೋಣೆಗೆ ಕರೆದು ಬಲವಂತವಾಗಿ ಅಸಹಜ ಲೈಂಗಿಕ ಕ್ರಿಯೆ ಎಸಗಿದ್ದಾರೆ ಎಂದು ದೂರಿನಲ್ಲಿ ವಿದ್ಯಾರ್ಥಿ ಆರೋಪಿಸಿದ್ದ.
ಬಾಲಕ ನೀಡಿದ ದೂರಿನಲ್ಲಿ ಏನಿತ್ತು? : ಆರೋಪಿ ಸಂಜಯ್ ಬಲಿರಾಮ್ ಲೋಕ್ರೆ ಶಾಹುವಾಡಿ ತಾಲೂಕಿನ ಕರಂಜೋಶಿ ಗ್ರಾಮದಲ್ಲಿರುವ ಕೆರಿಯರ್ ಅಕಾಡೆಮಿಯ ಅಧ್ಯಕ್ಷನಾಗಿದ್ದು, ವಿದ್ಯಾರ್ಥಿಗಳಿಗೆ ಸೇನಾ ನೇಮಕಾತಿ ಪೂರ್ವ ತರಬೇತಿ ನೀಡುತ್ತಿದ್ದ. ಅನೇಕ ವಿದ್ಯಾರ್ಥಿಗಳು ಇಲ್ಲಿ ವಾಸಿಸುವ ಮೂಲಕ ತರಬೇತಿ ಪಡೆಯುತ್ತಿದ್ದಾರೆ. ಆಗಸ್ಟ್ 26ರಂದು ಆರೋಪಿ ವಿದ್ಯಾರ್ಥಿಯನ್ನು ತನ್ನ ಕೋಣೆಗೆ ಕರೆಸಿಕೊಂಡು ಕಾಲುಗಳಿಗೆ ಮಸಾಜ್ ಮಾಡಿಸಿಕೊಂಡ ಬಳಿಕ ವಿದ್ಯಾರ್ಥಿಯನ್ನು ತನ್ನ ಕೋಣೆಯಲ್ಲಿಯೇ ಮಲಗಲು ಹೇಳಿದ್ದ. ಬಳಿಕ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಎಸಗಿದ್ದಾನೆ ಎಂದು ವಿದ್ಯಾರ್ಥಿ ದೂರಿನಲ್ಲಿ ತಿಳಿಸಿದ್ದ.
ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ : ಅಪ್ರಾಪ್ತ ಬಾಲಕನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿರುವ ಆರೋಪದ ಮೇಲೆ ರಾಜೇಶ್ ಕಾಶಿನಾಥ್(55) ಅಲಿಯಾಸ್ ಸೋನಾರ್ ಬಾಬಾನನ್ನು ಜನರು ಥಳಿಸಿ, ಕೊಂದಿರುವ ಘಟನೆ ಮಹಾರಾಷ್ಟ್ರದ ಅಹಮದ್ನಗರದಲ್ಲಿ (ಜೂನ್ 10-2022) ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತನ ತಾಯಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ಏನಿದು ಪ್ರಕರಣ : ರಾತ್ರಿ ವೇಳೆ ಮಗು ಮನೆ ಮುಂದೆ ಆಡುತ್ತಿದ್ದ ವೇಳೆ ತಾಯಿ ಬಳಿ ಹಣ ಪಡೆದುಕೊಂಡು ಕಿರಾಣಿ ಅಂಗಡಿಗೆ ಹೋಗಿದೆ. 10 ರಿಂದ 15 ನಿಮಿಷ ಕಳೆದರೂ ಬಾಲಕ ವಾಪಸ್ ಆಗಿಲ್ಲ. ಹೀಗಾಗಿ, ತಾಯಿ ಹುಡುಕಾಟ ನಡೆಸಿದ್ದಾಳೆ. ಈ ವೇಳೆ ನಿಮ್ಮ ಮಗನನ್ನು ಸೋನಾರ್ ಬಾಬಾ ಕರೆದುಕೊಂಡು ಹೋಗಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಈ ವೇಳೆ ಮಹಿಳೆ ಅಲ್ಲಿಗೆ ತೆರಳಿದ್ದಾಳೆ. ಮನೆಯಲ್ಲಿ ಸೋನಾರ್ ಬಾಬಾ ಮಗುವಿನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುತ್ತಿರುವುದು ಕಂಡು ಬಂದಿತ್ತು. ತಕ್ಷಣವೇ ತಾಯಿ ಕೂಗಾಡಿ, ಜನರನ್ನು ಕೂಡಿಸಿದ್ದರು. ಈ ವೇಳೆ, ಆತನ ಮೇಲೆ ಹಲ್ಲೆ ನಡೆಸಲಾಗಿತ್ತು.
ಇದನ್ನೂ ಓದಿ: ವಿಕೃತ ಕಾಮಿಯ ಅಸ್ವಾಭಾವಿಕ ಲೈಂಗಿಕತೆಗೆ ಇಬ್ಬರು ಬಾಲಕರು ಬಲಿ!