ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೊಕ್ಕಾಂ ಹೂಡಿದ್ದ ಜಿಹಾದಿಗಳು ಹಾಗೂ ಸಂಸದ ತೇಜಸ್ವಿಸೂರ್ಯ, ವಾಗ್ಮಿ ಸೂಲಿಬೆಲೆ ಅವರ ಹತ್ಯೆಗೆ ಸಂಚು ರೂಪಿಸಿದ್ದ ಎಸ್ಡಿಪಿಐ ಸಂಘಟನೆಯ ಕೆಲ ಕಾರ್ಯಕರ್ತರು ಸಿಸಿಬಿ ವಶದಲ್ಲಿದ್ದು, ಈ ಎಲ್ಲಾ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.
ಮೆಹಬೂಬ್ ಪಾಷ ಹಾಗೂ ಈತನ ಸಹಚರರು ವಿಧ್ವಂಸಕ ಕೃತ್ಯ ಹಾಗೂ ಪೌರತ್ವ ಕಿಚ್ಚು ಸಂದರ್ಭದಲ್ಲಿ ಅಹಿತಕರ ಘಟನೆ ಸೃಷ್ಟಿಸಲು ಯೋಜನೆ ರೂಪಿಸಿದ್ದರು. ಹಾಗೆಯೇ ಎಸ್ಡಿಪಿಐ ಕಾರ್ಯಕರ್ತರಾದ ಇರ್ಫಾನ್, ಅಕ್ಬರ್, ಸಿದ್ದಿಕ್, ಅಕ್ಬರ್ ಪಾಶಾ, ಸನಾವುಲ್ಲಾ ಹಾಗು ಸಾದಿಕ್ ಪೌರತ್ವ ಪರ ಧ್ವನಿ ಎತ್ತುತ್ತಿರುವ ತೇಜಸ್ವಿ ಸೂರ್ಯ ಹಾಗೂ ಸೂಲಿಬೆಲೆ ಅವರನ್ನು ಹತ್ಯೆ ಮಾಡಲು ಮುಂದಾಗಿ ವಿಚಾರಣೆಯಿಂದ ಗೊತ್ತಾಗಿದೆ. ಈ ಎರಡೂ ಪ್ರಕರಣಗಳಿಗೆ ನಂಟು ಇರುವ ಶಂಕೆಯ ಮೇರೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಈ ಎಲ್ಲಾ ಆರೋಪಿಗಳ ಪೂರ್ವಾಪರದ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರಿಗೆ ಪ್ರಕರಣದ ಪ್ರಮುಖ ರೂವಾರಿಗಳು ಬೇರೆ ಅನ್ನೋದು ಗೊತ್ತಾಗಿದೆ. ಹೀಗಾಗಿ ಅವರ ಬೆನ್ನತ್ತಿ ಸಿಸಿಬಿ ಹೊರಟಿದೆ.