ಬೆಂಗಳೂರು: ನಗರದಲ್ಲಿ ಹೊರರಾಜ್ಯದ ಸಂಪರ್ಕದಿಂದ ಮೂವರಿಗೆ ಹಾಗೂ ಪಾದರಾಯನಪುರದ ನಾಲ್ವರಿಗೆ ಸೇರಿ ಒಟ್ಟು ಏಳು ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ.
P-1495 ಇವರಿಗೆ 60 ವರ್ಷ ವಯಸ್ಸಾಗಿದ್ದು, ಆಂಧ್ರದ ಹಿಂದೂಪುರಂ ನಿವಾಸಿಯಾಗಿದ್ದಾರೆ. ಚಿಕಿತ್ಸೆಗಾಗಿ ಕರ್ನೂಲ್ಗೆ ಕೂಡಾ ಹೋಗಿದ್ದರು. ಆದರೆ, ಯಲಹಂಕ ನ್ಯೂ ಟೌನ್ನಲ್ಲಿ ದಾಖಲಾಗಲು ತಿಳಿಸಿದ್ದರಿಂದ ನಿನ್ನೆ ಬೆಳಗ್ಗೆ ಯಲಹಂಕದ ನವಚೇತನ ಆಸ್ಪತ್ರೆಯಲ್ಲಿ ದಾಖಲಾದರು. ಬಿ.ಪಿ, ಶುಗರ್, ನ್ಯೂಮೋನಿಯಾ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದ ಈತನಿಗೆ ಕೊರೊನಾ ಪರೀಕ್ಷೆ ಕೂಡಾ ನಡೆಸಿದ್ದಾರೆ. ಈ ವೇಳೆ, ಕೋವಿಡ್-19 ಇರುವುದು ದೃಢಪಟ್ಟಿದೆ. ಕೂಡಲೇ ಕೋವಿಡ್ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನವಚೇತನ ಆಸ್ಪತ್ರೆಯ 10 ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಯಲಹಂಕ ವಿಭಾಗದ ಆರೋಗ್ಯ ಅಧಿಕಾರಿ ಡಾ.ರಮೇಶ್ ತಿಳಿಸಿದ್ದಾರೆ.
ಇನ್ನು ತಮಿಳುನಾಡಿನ ಪ್ರಯಾಣದ ಹಿಸ್ಟರಿ ಇದ್ದ ಕೇಸ್ ನಂ 1208 ನಿಂದ ಹೆಂಡತಿ ಮತ್ತು ಮಗನಿಗೂ ಕೊರೊನಾ ಸೊಂಕು ಹರಡಿದೆ. ಈತ ಹೂಡಿ ನಿವಾಸಿ ಹಾಗೂ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರು. ಇವರು ತಮಿಳುನಾಡಿನಿಂದ ಪ್ರಯಾಣ ಬೆಳೆಸಿದ್ದರು. ಹೀಗಾಗಿ ಕ್ವಾರಂಟೈನ್ನಲ್ಲಿಡಲಾಗಿತ್ತು. ಈಗ ಪರೀಕ್ಷೆ ನಡೆಸಿದಾಗ ಬಳಿಕ ರೋಗಿ- 1463, (ಹೆಂಡತಿ) 40 ವರ್ಷದ ಮಹಿಳೆ ಹಾಗೂ ರೋಗಿ 1464 , 11 ವರ್ಷದ ಮಗನಿಗೂ ಕೊರೊನಾ ದೃಢಟ್ಟಿದೆ.
ಇನ್ನು ಪಾದರಾಯನಪುರದ ರ್ಯಾಂಡಮ್ ಟೆಸ್ಟ್ನ ರೋಗಿ 738ರ ಸಂಪರ್ಕದಿಂದ P- 1550 ಹೆಣ್ಣು (15) ಹಾಗೂ ರೋಗಿ 1551 ಗಂಡು (40) ಇಬ್ಬರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. 707 ರೋಗಿಯ ಸಂಪರ್ಕದಿಂದ 17 ವರ್ಷದ ಹೆಣ್ಣು, (ರೋಗಿ 1552) ಹಾಗೂ 14 ವರ್ಷದ ಬಾಲಕ (1553) ನಲ್ಲಿ ಕೊರೊನಾ ಕಂಡುಬಂದಿದೆ.