ETV Bharat / state

ಸಿದ್ದರಾಮಯ್ಯ ಬಣದಿಂದ ಕುರುಬ ಎಸ್​​ಟಿ‌ ಮೀಸಲಾತಿಗಾಗಿ ಪ್ರತ್ಯೇಕ ಪ್ರತಿಭಟನೆ

ಸದ್ಯ ನಡೆಯುತ್ತಿರುವ ಕುರುಬ ಎಸ್​​ಟಿ ಹೋರಾಟಕ್ಕೆ ಪರ್ಯಾಯವಾಗಿ ಸಿದ್ದರಾಮಯ್ಯರ ಬೆಂಬಲಿಗರ ಬಣ ಇಂದು ಪ್ರತಿಭಟನೆ ನಡೆಸಿತು. ಸಿದ್ದರಾಮಯ್ಯರೇ ಇಂದಿನ ಪ್ರತಿಭಟನೆಗೆ‌ ಕರೆ ನೀಡಿದ್ದಾರೆ ಎನ್ನಲಾಗಿದ್ದು, ಆ ಮೂಲಕ ಸಚಿವ ಕೆ.ಎಸ್‌. ಈಶ್ವರಪ್ಪ ನೇತೃತ್ವದಲ್ಲಿ ನಡೆದ ಮೀಸಲಾತಿ ಹೋರಾಟಕ್ಕೆ ತಿರುಗೇಟು ನೀಡಿ ಪರ್ಯಾಯ ವೇದಿಕೆ ಸಿದ್ಧಪಡಿಸುತ್ತಿದ್ದಾರೆ ಎನ್ನಲಾಗಿದೆ.

separate-protest-from-siddaramaiah
ಸಿದ್ದರಾಮಯ್ಯ ಬಣದಿಂದ ಕುರುಬ ಎಸ್​​ಟಿ‌ ಮೀಸಲಾತಿಗಾಗಿ ಪ್ರತ್ಯೇಕ ಪ್ರತಿಭಟನೆ
author img

By

Published : Feb 19, 2021, 5:26 PM IST

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರ ಕುರುಬ ಸಮುದಾಯದ ಬಣ ಇಂದು ನಗರದ ಆನಂದ ರಾವ್ ವೃತ್ತದ ಬಳಿ‌ ಎಸ್​​​ಟಿ ಮೀಸಲಾತಿಗೆ ಆಗ್ರಹಿಸಿ ಪ್ರತ್ಯೇಕ ಪ್ರತಿಭಟನೆ ನಡೆಸಿತು. ಇದು ಸಾಂಕೇತಿಕ ಪ್ರತಿಭಟನೆಯಾದರೂ, ಪ್ರತ್ಯೇಕ ಪ್ರತಿಭಟನೆಯ ಸಂದೇಶ ಸ್ಪಷ್ಟವಾಗಿತ್ತು.

ಸಿದ್ದರಾಮಯ್ಯ ಬಣದಿಂದ ಕುರುಬ ಎಸ್​​ಟಿ‌ ಮೀಸಲಾತಿಗಾಗಿ ಪ್ರತ್ಯೇಕ ಪ್ರತಿಭಟನೆ

ಓದಿ: ರಾಮ ಮಂದಿರ ದೇಣಿಗೆಯ ಪಕ್ಕಾ ಲೆಕ್ಕ ಕೊಡುತ್ತೇವೆ: ಹೆಚ್​ಡಿಕೆಗೆ ಅಶ್ವತ್ಥ ನಾರಾಯಣ ಟಾಂಗ್​

ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ನಡೆದ ಎಸ್​​ಟಿ ಸೇರ್ಪಡೆ ಪ್ರತಿಭಟನೆಯಲ್ಲಿ, ಕುರುಬ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ‌ ಪರವಾದ ದನಿ ಜೋರಾಗಿ ಕೇಳಿ ಬಂದಿದೆ. ಸಿಎಂ ಯಡಿಯೂರಪ್ಪ, ಸಚಿವ ಕೆ.ಎಸ್‌‌. ಈಶ್ವರಪ್ಪ ಹಾಗೂ‌ ಮೊನ್ನೆ ನಡೆದ ಕುರುಬರ ಎಸ್​​ಟಿ ಸಮಾವೇಶದ ವಿರುದ್ಧ ಆಕ್ರೋಶ ಹೆಚ್ಚಾಗಿರುವುದು ಈ ಪ್ರತಿಭಟನೆಯಲ್ಲಿ ಕಂಡು ಬಂದಿತು.

ಸದ್ಯ ನಡೆಯುತ್ತಿರುವ ಕುರುಬ ಎಸ್​​ಟಿ ಹೋರಾಟಕ್ಕೆ ಪರ್ಯಾಯವಾಗಿ ಸಿದ್ದರಾಮಯ್ಯರ ಬೆಂಬಲಿಗರ ಬಣ ಇಂದಿನ ಪ್ರತಿಭಟನೆ ನಡೆಸಿತು. ಸಿದ್ದರಾಮಯ್ಯರೇ ಇಂದಿನ ಪ್ರತಿಭಟನೆಗೆ‌ ಕರೆ ನೀಡಿದ್ದಾರೆ ಎನ್ನಲಾಗಿದ್ದು, ಆ ಮೂಲಕ ಸಚಿವ ಕೆ.ಎಸ್‌. ಈಶ್ವರಪ್ಪ ನೇತೃತ್ವದಲ್ಲಿ ನಡೆದ ಮೀಸಲಾತಿ ಹೋರಾಟಕ್ಕೆ ತಿರುಗೇಟು ನೀಡಿ ಪರ್ಯಾಯ ವೇದಿಕೆ ಸಿದ್ಧಪಡಿಸುತ್ತಿದ್ದಾರೆ ಎನ್ನಲಾಗಿದೆ.

ಸುಮಾರು 200 ಜನ ಕುರುಬ ಸಮುದಾಯದವರು ಪಾಲ್ಗೊಂಡು ಎಸ್​​ಟಿ ಮೀಸಲಾತಿಗೆ ಒತ್ತಾಯಿಸಿದರು.‌ ಬಹುತೇಕ ಸಿದ್ದರಾಮಯ್ಯ ಬೆಂಬಲಿಗರೇ ಇಂದಿನ‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕುರುಬರ ಎಸ್​​ಟಿ ಮೀಸಲಾತಿಗೆ ಸೇರ್ಪಡೆ, ಕುಲಶಾಸ್ತ್ರ ಅಧ್ಯಯನ ತಯಾರಿಸಿ ಶೀಘ್ರ ಸಲ್ಲಿಸುವಂತೆ, ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮೂರ್ತಿ, ಸಿದ್ದರಾಮಯ್ಯ ಆಪ್ತ ಮರೀಗೌಡ ಸೇರಿ ಕರ್ನಾಟಕ ಪ್ರದೇಶ ಕುರುಬರ ಸಂಘ ನೂರಾರು ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ತಮ್ಮ ಬೆಂಬಲಿಗರ ಮೂಲಕ ತಾವೇ ಪ್ರಬಲ ಕುರುಬ ನಾಯಕನೆಂಬುದನ್ನು ಸಾಬೀತು ಪಡಿಸುವುದರ ಜೊತೆಗೆ ಹಿಂದ ಹೋರಾಟಕ್ಕೂ ಮುನ್ನುಡಿ ಹಾಡುತ್ತಿದ್ದಾರೆ ಎನ್ನಲಾಗಿದೆ.

ಸಿದ್ದು ಪರ ಜಪ: ಸಿಎಂ, ಕೆಎಸ್​​ಈ ವಿರುದ್ಧ ಕಿಡಿ:

ಇಂದು ನಡೆದ ಪ್ರತಿಭಟನೆ ಸಿದ್ದರಾಮಯ್ಯರ ಹೊಗಳಿಕೆಗೆ ಸೀಮಿತವಾದರೆ, ಸಿಎಂ ಹಾಗೂ ಕೆ.ಎಸ್‌. ಈಶ್ವರಪ್ಪ ವಿರುದ್ಧದ ಆಕ್ರೋಶಕ್ಕೆ ವೇದಿಕೆಯಾಗಿ ಪರಿಣಮಿಸಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ, ಯಡಿಯೂರಪ್ಪನವರೆ ಕುರುಬರನ್ನ ಹಗುರವಾಗಿ ತೆಗೆದುಕೊಳ್ಬೇಡಿ. ಹಲವು ಕ್ಷೇತ್ರಗಳಲ್ಲಿ ನಾವೇ ನಿರ್ಣಾಯಕ ಮತದಾರರು. ಯಡಿಯೂರಪ್ಪನವರೇ, ನೀವು ಮುಖ್ಯಮಂತ್ರಿಗಳಾದ ಮೇಲೆ ಕುರುಬರನ್ನು ನೀವು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ರಾಜ್ಯದ 60 ಲಕ್ಷ ಕುರುಬರ ಪರವಾಗಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಒಂದು ವೇಳೆ ನಮ್ಮ ಬೇಡಿಕೆಗಳನ್ನ ಈಡೇರಿಸದಿದ್ದರೆ. ಮುಂದೆ ನಮ್ಮ ಕೋಪ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಮಾತನಾಡಿದ ಮಾಜಿ‌ ಮೇಯರ್ ರಾಮಚಂದ್ರಪ್ಪ, ಕುರುಬ ಸಮುದಾಯವನ್ನು ಎಸ್​​ಟಿಗೆ ಸೇರಿಸಬೇಕು ಅನ್ನೋದಷ್ಟೆ ನಮ್ಮ ಮುಖ್ಯ ಉದ್ದೇಶ. ನಮ್ಮ ಸಮಾಜ ಒಡೆಯೋ ಕೆಲಸ ಆಗ್ತಾ ಇದೆ. ಹಾಗಾಗಿ ನಾವೆಲ್ಲಾ ಒಗ್ಗಟ್ಟಾಗಿರಬೇಕು. ನಮ್ಮ ಸಮಾಜ ಒಡೆಯಲು ಬಿಡಬಾರದು. ಕುರುಬ ಸಮುದಾಯದ ಎಸ್​​ಟಿ ಮೀಸಲಾತಿ ಹೋರಾಟಕ್ಕೆ ಸಿದ್ದರಾಮಯ್ಯ ನಾಯಕತ್ವ ವಹಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಮೇಯರ್ ಹುಚ್ಚಪ್ಪ ಮಾತನಾಡಿ ಸಮುದಾಯದಲ್ಲಿ ಪ್ರಶ್ನಾತೀತ ನಾಯಕ ಸಿದ್ದರಾಮಯ್ಯ. ಸಮಾವೇಶ ಮಾಡಿದ ಈಶ್ವರಪ್ಪ ಎಲ್ಲಿ ಹೋದರು. ಬರೀ ಮಾಧ್ಯಮಗಳ ಮುಂದೆ ಹೇಳಿಕೆಗೆ ಸೀಮಿತರಾದ್ರಾ?. ಸಮಾವೇಶದ ಬಳಿಕ ಯಾಕೆ ಮಾತನಾಡುತ್ತಿಲ್ಲ?. ಸಮುದಾಯದ ಪರ ಯಾವಾಗಲೂ ಇರೋದು ಸಿದ್ದರಾಮಯ್ಯ. ಸಿದ್ದರಾಮಯ್ಯನ ಜ್ಞಾನಕ್ಕೆ ಬೇರೆ ಸಮುದಾಯದವರೇ ಹಾಡಿ ಹೊಗಳುತ್ತಾರೆ. ಸಿದ್ದರಾಮಯ್ಯ ನಾಯಕ ಅಂತ ಎಲ್ಲ ಸಮುದಾಯಗಳು ಒಪ್ಪಿಕೊಂಡಿವೆ. ಅಹಿಂದ ಸಮುದಾಯಗಳು ಸಿದ್ದರಾಮಯ್ಯ ನಾಯಕ ಅಂತ ಒಪ್ಪಿಕೊಂಡಿದ್ದಾರೆ. ಆ ಸಮುದಾಯಗಳನ್ನ ನಾವು ಜೊತೆ ಸೇರಿಸಿಕೊಂಡು ಹೋಗಬೇಕು. ಭಾಷಣ ಸಾಕು, ದೆಹಲಿಗೆ ಹೋಗಿ ಒತ್ತಾಯ ಮಾಡಿ ಎಂದು ಸಚಿವ ಈಶ್ವರಪ್ಪಗೆ ಟಾಂಗ್ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.