ETV Bharat / state

ಹಿರಿಯ ಪತ್ರಕರ್ತ ಕೆ ಸತ್ಯನಾರಾಯಣ ನಿಧನಕ್ಕೆ ಮುಖ್ಯಮಂತ್ರಿ ಸೇರಿ ಗಣ್ಯರಿಂದ ಸಂತಾಪ..

ಅನಾರೋಗ್ಯದ ಹಿನ್ನೆಲೆ ಹಿರಿಯ ಪತ್ರಕರ್ತ ಕೆ ಸತ್ಯನಾರಾಯಣ ಭಾನುವಾರ ನಿಧನ- ರಾಜ್ಯದ ವಿವಿಧ ಪತ್ರಿಕೆಗಳ ಪತ್ರಕರ್ತರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ನಿವೃತ್ತಿ ನಗರಪ್ರದಕ್ಷಣೆ ವ್ಯಕ್ತಿ ವಿಚಾರ ಎಂಬ ಅಂಕಣಗಳು ಬರೆದು ಓದುಗರ ಮನಗೆದ್ದಿದ್ದರು- ಹರ್ಮನ್ ಮೊಗ್ಲಿಂಗ್ ಜೀವಮಾನ ಸಾಧನೆ ಪುರಸ್ಕಾರ, ಖಾದ್ರಿ ಶಾಮಣ್ಣ ಪ್ರಶಸ್ತಿಗೆ ಭಾಜನ

author img

By

Published : Jan 8, 2023, 7:59 PM IST

journalist k Satyanarayana
ಹಿರಿಯ ಪತ್ರಕರ್ತ ಕೆ ಸತ್ಯನಾರಾಯಣ

ಬೆಂಗಳೂರು: ಅನಾರೋಗ್ಯದ ಹಿನ್ನೆಲೆ ಹಿರಿಯ ಪತ್ರಕರ್ತ ಹಾಗೂ ಕನ್ನಡಪ್ರಭ ದಿನಪತ್ರಿಕೆ ನಿವೃತ್ತ ಸಂಪಾದಕ ಕೆ. ಸತ್ಯನಾರಾಯಣ ಅವರು ಭಾನುವಾರ ನಿಧನರಾದರು. ಜಯನಗರದ ಎಲ್ಐಸಿ ಕಾಲೋನಿಯಲ್ಲಿ ವಾಸವಾಗಿದ್ದ ಸತ್ಯನಾರಾಯಣ ಅವರು ಇಹಲೋಕ ತ್ಯಜಿಸಿದ್ದಾರೆ. ಇವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಸೇರಿ ಹಲವು ಗಣ್ಯಾತಿಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಈ ಬಗ್ಗೆ ಸಂತಾಪ ಸೂಚಿಸಿರುವ ಬೊಮ್ಮಾಯಿ ಅವರು, ಕೆ.ಸತ್ಯನಾರಾಯಣ ಅವರು ತಾಯಿನಾಡು ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿರಿಸಿ ಕನ್ನಡಪ್ರಭ ಪತ್ರಿಕೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದರು. ಸತ್ಯನಾರಾಯಣ ಅವರು ಇಳಿವಯಸ್ಸಿನಲ್ಲೂ ಬರೆಯುತ್ತಿದ್ದ ಅಂಕಣಗಳ ಮೂಲಕ ಸಮಕಾಲೀನ ರಾಜಕೀಯ, ವಾಣಿಜ್ಯ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಿದ್ದರು. ಮೌಲ್ಯಾಧಾರಿತ ಪತ್ರಿಕೋದ್ಯಮದ ಸಂಕೇತವಾಗಿದ್ದ ಅವರು ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆಗಾಗಿ ಟಿಎಸ್ಆರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅವರ ನಿಧನ ಕನ್ನಡ ಪತ್ತಿಕೋದ್ಯಮಕ್ಕೆ ದೊಡ್ಡ ನಷ್ಟವಾಗಿದ್ದು ಹಳೆ ತಲೆಮಾರಿನ ಪತ್ರಿಕೋದ್ಯಮದ ಕೊಂಡಿಯೊಂದು ಕಳಚಿಕೊಂಡಂತಾಗಿದೆ ಎಂದು ತಮ್ಮ ಶೋಕ‌ ಸಂದೇಶದಲ್ಲಿ ತಿಳಿಸಿದ್ದಾರೆ.

  • ಹಿರಿಯ ಪತ್ರಕರ್ತರು, ಕನ್ನಡಪ್ರಭ ದಿನಪತ್ರಿಕೆಯ ಸಂಪಾದಕರಾಗಿದ್ದ ಕೆ.ಸತ್ಯನಾರಾಯಣರವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ಅತ್ಯಂತ ದುಃಖವಾಯಿತು. ಕನ್ನಡ ಪತ್ರಿಕೋದ್ಯಮದಲ್ಲಿ ವಿಶಿಷ್ಟ ಛಾಪು ಮೂಡಿಸಿ, ಹಲವಾರು ಜನರಿಗೆ ಪ್ರೇರಣೆಯಾಗಿದ್ದ ಶ್ರೀಯುತರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ.
    1/2 pic.twitter.com/7LJTLUAXYB

    — Basavaraj S Bommai (@BSBommai) January 8, 2023 " class="align-text-top noRightClick twitterSection" data=" ">

ಪತ್ರಕರ್ತರ ಪಾಲಿಗೆ ದಂತಕಥೆ ಆಗಿದ್ರು: ಕೆ.ಸತ್ಯನಾರಾಯಣ (ಸತ್ಯ) ಅವರು ನಿಧನದ ಸುದ್ದಿ ಕೇಳಿ ದುಃಖವಾಯಿತು. ಕನ್ನಡ ಮಾಧ್ಯಮಲೋಕದ ಆಸ್ತಿ, ಸತ್ಯನಿಷ್ಠ ಪತ್ರಿಕೋದ್ಯಮದ ಅನನ್ಯಕೊಂಡಿ ಆಗಿದ್ದ ಅವರು, ಹೊಸ ತಲೆಮಾರಿನ ಪತ್ರಕರ್ತರ ಪಾಲಿಗೆ ನಿಜಕ್ಕೂ ದಂತಕಥೆ. ಅವರು ಅಷ್ಟು ಸ್ವಚ್ಛವಾಗಿ ವೃತ್ತಿ ಜೀವನವನ್ನು ನಿಭಾಯಿಸಿದ್ದರು. ನಾನು ಅವರ 'ಸಮಕಾಲೀನ ' ಅಂಕಣದ ಓದುಗ. ಬದುಕಿನ ಕೊನೆ ದಿನಗಳಲ್ಲೂ ಅವರು ಬರೆಯುತ್ತಿದ್ದರು ಎಂದು ಕೇಳಿದ್ದೆ. ಅವರ ಬರಹಗಳು ಸಕಾಲಿಕ ಮತ್ತು ವಿಚಾರಪೂರ್ಣವಾಗಿರುತ್ತಿದ್ದವು. ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

  • ಕನ್ನಡಪ್ರಭ ಪತ್ರಿಕೆಯ ವಿಶ್ರಾಂತ ಸಂಪಾದಕರಾಗಿದ್ದ ಶ್ರೀ ಕೆ.ಸತ್ಯನಾರಾಯಣ (ಸತ್ಯ) ಅವರು ನಿಧನರಾದ ಸುದ್ದಿ ಕೇಳಿ ದುಃಖವಾಯಿತು. ಕನ್ನಡ ಮಾಧ್ಯಮಲೋಕದ ಆಸ್ತಿ, ಸತ್ಯನಿಷ್ಠ ಪತ್ರಿಕೋದ್ಯಮದ ಅನನ್ಯ ಕೊಂಡಿ ಆಗಿದ್ದ ಅವರು, ಹೊಸ ತಲೆಮಾರಿನ ಪತ್ರಕರ್ತರ ಪಾಲಿಗೆ ನಿಜಕ್ಕೂ ದಂತಕಥೆ. ಅವರು ಅಷ್ಟು ಸ್ವಚ್ಛವಾಗಿ ವೃತ್ತಿ ಜೀವನವನ್ನು ನಿಭಾಯಿಸಿದ್ದರು.1/2 pic.twitter.com/ml8G7jHA5M

    — ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) January 8, 2023 " class="align-text-top noRightClick twitterSection" data=" ">
  • ನಾನು ಅವರ 'ಸಮಕಾಲೀನ ' ಅಂಕಣದ ಓದುಗ. ಬದುಕಿನ ಕೊನೆ ದಿನಗಳಲ್ಲೂ ಅವರು ಬರೆಯುತ್ತಿದ್ದರು ಎಂದು ಕೇಳಿದ್ದೆ. ಅವರ ಬರಹಗಳು ಸಕಾಲಿಕ ಮತ್ತು ವಿಚಾರಪೂರ್ಣವಾಗಿರುತ್ತಿದ್ದವು.
    ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ.2/2 ಎಂದು ಪ್ರಾರ್ಥಿಸುತ್ತೇನೆ.

ಕೆ ಸತ್ಯಾನಾರಾಯಣ ಬೆಳೆದು ಬಂದ ದಾರಿ: 1956-57ರಲ್ಲಿ ಸ್ವತಂತ್ರ ಪತ್ರಿಕೆಯಲ್ಲಿ ವೃತ್ತಿ ಆರಂಭಿಸಿದ್ದ ಕೆ.ಸತ್ಯ ನಾರಾಯಣ ಅವರು 1960ರಲ್ಲಿ ತಾಯಿನಾಡು ಪತ್ರಿಕೆಗೆ ಸೇರಿಕೊಂಡರು. ನಂತರ ಪತ್ರಿಕೋದ್ಯಮದಲ್ಲಿ ವಿವಿಧ ಆಯಾಮಗಳಲ್ಲಿ ವಿಶಿಷ್ಟ ಛಾಪು ಮೂಡಿಸುವದರೊಂದಿಗೆ ಜನರ ಮನ ಗೆದ್ದರು. ಕನ್ನಡ ಪ್ರಭ ಪತ್ರಿಕೆಯಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲವಿವಿಧ ಹಂತಗಳಲ್ಲಿ ದುಡಿದವರು. ಕನ್ನಡಪ್ರಭದಲ್ಲಿ ನಗರಪ್ರದಕ್ಷಣೆ, ವ್ಯಕ್ತಿ ವಿಚಾರ ಎಂಬ ಅಂಕಣ ಬರೆಯುತ್ತ ಓದುಗರ ಮನ ಸೆಳೆದಿದ್ದರು. ತಮ್ಮ ಬದುಕನ್ನು ಸುದ್ದಿ ಮನೆಗೆ ಸಮರ್ಪಣೆ ಮಾಡಿದ್ದ ಹಿರಿಯ ಚೇತನ. ಇಳಿವಯಸ್ಸಿನಲ್ಲೂ ಅಂಕಣ ಬರೆಯುತ್ತಾ ತಮ್ಮೊಳಗಿನ ಪತ್ರಕರ್ತನನ್ನು ಜಾಗೃತವಾಗಿ ಕಾಪಿಟ್ಟುಕೊಂಡಿದ್ದವರು.

ಕೆ.ಸತ್ಯನಾರಾಯಣ ಅವರು ರಾಜಕಾರಣಿಗಳಿರಲಿ, ಸಾಂಸ್ಕೃತಿಕ ರಂಗದವರೇ ಇರಲಿ ಎಲ್ಲರಿಗೂ ಸತ್ಯ ಅವರೆಂದರೆ ಅಚ್ಚುಮೆಚ್ಚು. ಅದಕ್ಕೆ ಕಾರಣ ಅವರ ಸರಳ ಸಜ್ಜನಿಕೆಯ ನಡವಳಿಕೆ. ಇಂಗ್ಲಿಷ್‌ನಲ್ಲಿ ಅಪಾರ ಪಾಂಡಿತ್ಯ ಗಳಿಸಿದ್ದ ಅವರು ವಾಣಿಜ್ಯ, ವ್ಯವಹಾರ ವರದಿಗಾರಿಕೆಗೆ ಹೆಸರಾಗಿದ್ದರು. ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಾರರಾಗಿ ಕೆಲಸ ಮಾಡಿದ್ದರು. ಬಜೆಟ್, ಅಧಿವೇಶನ ಕುರಿತಂತೆ ವರದಿಗಾರಿಕೆಯಲ್ಲಿ ಅಪಾರ ಪಳಗಿದ್ದರು. ಪತ್ರಕರ್ತ ವೃತ್ತಿಗೆ ತಕ್ಕಂತೆ ಆದರ್ಶ ಜೀವನ ನಡೆಸಿದವರು. ಕನ್ನಡದ ಹಲವು ಹೆಸರಾಂತ ಪತ್ರಕರ್ತರನ್ನು ಬೆಳೆಸಿದವರು. ಸತ್ಯನಾರಾಯಣ ಅವರ ನಿಧನದಿಂದ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ.

ಸರಳ ವ್ಯಕ್ತಿತ್ವ: ರಾಜ್ಯ ಮಟ್ಟದ ಪತ್ರಿಕೆಯ ಸಂಪಾದಕರಾಗಿ ನಿವೃತ್ತರಾಗಿದ್ದರೂ ತಾನು ಇಷ್ಟಪಟ್ಟಂತೆ ಸರಳ ಜೀವನ ನಡೆಸಿದ್ದರು. ಕೆ.ಸತ್ಯನಾರಾಯಣ ಅವರು ಜನಸಾಮಾನ್ಯರಂತೆ ಬಸ್​, ಆಟೊಗಳಲ್ಲೇ ಓಡಾಡುತ್ತಿದ್ದರು. ಅವರು ಧರಿಸುತ್ತಿದ್ದ ಬಿಳಿ ವಸ್ತ್ರ ಮತ್ತು ಬಟ್ಟೆ ಚೀಲ ಅವರ ಆದರ್ಶ ಪ್ರಾಮಾಣಿಕ ಪತ್ರಕರ್ತನೊಬ್ಬನ ಬದುಕಿಗೆ ದಿಕ್ಸೂಚಿಯಾಗಿತ್ತು. ಸುದ್ದಿ ವೃತ್ತಿ ಬದುಕಿಗೆ ಯಾವತ್ತೂ ಕಳಂಕ ತಂದುಕೊಂಡವರಲ್ಲ. 2017ರಲ್ಲಿ ಅವರು ಹರ್ಮನ್ ಮೊಗ್ಲಿಂಗ್ ಜೀವಮಾನ ಸಾಧನೆ ಪುರಸ್ಕಾರವೂ ಅವರಿಗೆ ದಕ್ಕಿತ್ತು. ಖಾದ್ರಿ ಶಾಮಣ್ಣ ಪ್ರಶಸ್ತಿಗೂ ಅವರು ಭಾಜನರಾಗಿದ್ದರು.

ಇದನ್ನೂ ಓದಿ:ಕನ್ನಡನಾಡಿನ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ : ಸಿಎಂ ಬಸವರಾಜ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.