ETV Bharat / state

ಹಿರಿಯ ನಾಗರಿಕರು ಪರಿಹಾರ ಕೋರಿ ವಕೀಲರ ಮೂಲಕ ಎಸಿ, ಡಿಸಿಗಳ ಮುಂದೆ ಮೇಲ್ಮನವಿ ಸಲ್ಲಿಸಬಹುದು: ಹೈಕೋರ್ಟ್ - ನ್ಯಾಯಮೂರ್ತಿ ಎಂ ನಾಗಪ್ರಸನ್ನ

ಹಿರಿಯ ನಾಗರಿಕ ರಕ್ಷಣಾ ಕಾಯ್ದೆಯಡಿ ಪರಿಹಾರ ಕೋರಿ ಮೇಲ್ಮನವಿ ಸಲ್ಲಿಸುವ ಹಿರಿಯ ನಾಗರಿಕರಿಗೆ ವಕೀಲರ ಮೂಲಕ ಪ್ರತಿನಿಧಿಸಿಕೊಳ್ಳುವ ಹಕ್ಕಿದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಹೈಕೋರ್ಟ್​
ಹೈಕೋರ್ಟ್​
author img

By

Published : Jul 6, 2023, 8:58 AM IST

ಬೆಂಗಳೂರು: ಪಾಲಕರ ಪೋಷಣೆ, ಸಂರಕ್ಷಣೆ ಮತ್ತು ಹಿರಿಯ ನಾಗರಿಕ ರಕ್ಷಣಾ ಕಾಯ್ದೆಯಡಿ ಪರಿಹಾರ ಕೋರಿ ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಮುಂದೆ ಅರ್ಜಿ ಅಥವಾ ಮೇಲ್ಮನವಿ ಸಲ್ಲಿಸುವ ಹಿರಿಯ ನಾಗರಿಕರು ವಕೀಲರ ಮೂಲಕ ಪ್ರತಿನಿಧಿಸಿಕೊಳ್ಳುವ ಹಕ್ಕು ಹೊಂದಿರುತ್ತಾರೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ತಮ್ಮ ಆಸ್ತಿಯನ್ನು ಮಕ್ಕಳು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ ಮೇಲ್ಮನವಿಯ ಸಂಬಂಧ ತಮ್ಮನ್ನು ವಕೀಲರು ಪ್ರತಿನಿಧಿಸಲು ಅನುಮತಿ ನೀಡಬೇಕೆಂಬ ಮನವಿಯನ್ನು ಉಡುಪಿ ಜಿಲ್ಲಾಧಿಕಾರಿಗಳು ತಿರಸ್ಕರಿಸಿ ಆದೇಶಿಸಿದ್ದರು. ಈ ಆದೇಶ ರದ್ದು ಕೋರಿ ಪುತ್ತೂರು ತಾಲೂಕಿನ ನಿವಾಸಿ ಕೆ. ಶ್ರೀನಿವಾಸ್ ಗಾಣಿಗ (82) ಎಂಬವರು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ.

ಅಲ್ಲದೆ, ಪಾಲಕರ ಪೋಷಣೆ, ಸಂರಕ್ಷಣೆ ಮತ್ತು ಹಿರಿಯ ನಾಗರಿಕ ರಕ್ಷಣಾ ಕಾಯ್ದೆಯ ಸಲ್ಲಿಕೆಯಾದ ಅರ್ಜಿ ಮತ್ತು ಮೇಲ್ಮನವಿಯ ಸಂಬಂಧ ಪಕ್ಷಗಾರರಾದ ಹಿರಿಯ ನಾಗರಿಕರು ನೇರವಾಗಿ ಮನವಿ ಸಲ್ಲಿಸಬೇಕು. ಯಾವುದೇ ವಕೀಲರನ್ನು ಪ್ರತಿನಿಧಿಸಬಾರದು ಎಂಬುದನ್ನು ಕಡ್ಡಾಯಗೊಳಿಸಿರುವ ಕಾಯ್ದೆಯ ಸೆಕ್ಷನ್ 17, ವಕೀಲರ ಕಾಯ್ದೆ ಸೆಕ್ಷನ್ 30ಕ್ಕೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ಘೋಷಿಸಿದೆ.

ಅಷ್ಟೇ ಅಲ್ಲದೆ, ಆ ಸೆಕ್ಷನ್‌ ಜಾರಿಗೊಳಿಸದಂತೆ ಆದೇಶಿಸಿದೆ. ಪ್ರಕರಣದಲ್ಲಿ ಶ್ರೀನಿವಾಸ್​ ಅವರನ್ನು ವಕೀಲರು ಪ್ರತಿನಿಧಿಸುವಂತಿಲ್ಲ ಎಂದು ತಿಳಿಸಿ ಜಿಲ್ಲಾಧಿಕಾರಿ 2023ರ ಫೆ.21ರಂದು ನೀಡಿದ್ದ ಹಿಂಬರಹವನ್ನೂ ರದ್ದುಪಡಿಸಿ ಆದೇಶಿಸಿದ್ದು, ಅರ್ಜಿಯಲ್ಲಿನ ಅಂಶಗಳನ್ನು ಆಧರಿಸಿ ಕಾನೂನು ಪ್ರಕಾರ ಸೂಕ್ತ ಆದೇಶ ಮಾಡಬೇಕು ಎಂದು ನಿರ್ದೇಶನ ನೀಡಿದೆ.

ಪ್ರಕರಣದ ಹಿನ್ನೆಲೆ : ಶ್ರೀನಿವಾಸ್​ ಗಾಣಿಗ ಪುತ್ತೂರು ತಾಲೂಕಿನಲ್ಲಿ 1972 ಮತ್ತು 2003ರಲ್ಲಿ ಸ್ಥಿರಾಸ್ತಿ ಖರೀದಿಸಿದ್ದರು. ಆಗ ಅವರು ತಮ್ಮ ಪುತ್ರ ನಾಗರಾಜ್ ಜೊತೆಗೆ ನೆಲೆಸಿದ್ದರು. 2014ರ ನ.26 ರಂದು ಮೋಸದಿಂದ ಒಪ್ಪಂದ ಪತ್ರ ಮಾಡಿಕೊಂಡು ಪುತ್ರರಾದ ನಾಗರಾಜ್ ಮತ್ತು ವಾದಿರಾಜ್ ತಮ್ಮ ಹೆಸರಿಗೆ ಆಸ್ತಿಯನ್ನು ವರ್ಗಾಯಿಸಿಕೊಂಡಿದ್ದಾರೆ. ನಂತರ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಶ್ರೀನಿವಾಸ್, ಪಾಲಕರ ಪೋಷಣೆ, ಸಂರಕ್ಷಣೆ ಮತ್ತು ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ-2007 ಅಡಿ ಉಪ ವಿಭಾಗಾಧಿಕಾರಿ (ಎಸಿ) ಮುಂದೆ ಅರ್ಜಿ ಸಲ್ಲಿಸಿದ್ದರು. ತಮ್ಮ ಹೆಸರಿಗೆ ಸ್ಥಿರಾಸ್ತಿಯನ್ನು ವರ್ಗಾಯಿಸಲು ಆದೇಶಿಸಬೇಕು ಎಂದು ಕೋರಿದ್ದರು. ಅರ್ಜಿದಾರರು ಮತ್ತವರ ಪತ್ನಿಯು ಪುತ್ರ ನಾಗರಾಜ್ ಜೊತೆಗೆ ಬಂದುವಾಸ ಮಾಡಬೇಕು. ದಂಪತಿಯ ಯೋಗಕ್ಷೇಮವನ್ನು ಮಕ್ಕಳು ನೋಡಿಕೊಳ್ಳಬೇಕು ಎಂದು 2012ರ ಡಿ.12ರಂದು ಎಸಿ ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ವಕೀಲರ ಮೂಲಕ ಜಿಲ್ಲಾಧಿಕಾರಿಗೆ (ಡಿಸಿ)ಮೇಲ್ಮನವಿ ಸಲ್ಲಿಸಿದ್ದರು. ಆದರೆ, 2023ರ ಫೆ.21ರಂದು ಹಿಂಬರಹ ನೀಡಿದ್ದ ಡಿಸಿ, ಕಾಯ್ದೆಯ ಸೆಕ್ಷನ್ 17ಪ್ರಕಾರ ಪಕ್ಷಗಾರರನ್ನು ವಕೀಲರು ಪ್ರತಿನಿಧಿಸಲು ಅವಕಾಶವಿಲ್ಲ ಎಂದು ತಿಳಿಸಿದ್ದರು. ಆ ಹಿಂಬರಹ ಪ್ರಶ್ನಿಸಿ ಶ್ರಿನಿವಾಸ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: Divorce case: ಪತ್ನಿ ದುಡಿಯಲು ಸಮರ್ಥರಿರುವಾಗ ಪತಿಯಿಂದ ಹೆಚ್ಚಿನ ಜೀವನಾಂಶ ಕೋರಲಾಗದು : ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.