ETV Bharat / state

ದೇಶ ದ್ರೋಹ ಪ್ರಕರಣ : ಎನ್ಐಎ ಅಧಿಕಾರಿಗಳಿಂದ ಅಮೂಲ್ಯ ವಿಚಾರಣೆ.. - ಪಾಕ್ ಪರ ಘೋಷಣೆ

ಪಾಕಿಸ್ತಾನ ಪರ ಘೋಷಣೆ ಕೂಗಿ ದೇಶದ್ರೋಹ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಅಮೂಲ್ಯಳನ್ನು ಎನ್ಐಎ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.

Basaveshwaranagar Police Station
ಬಸವೇಶ್ವರ ನಗರ ಪೊಲೀಸ್ ಠಾಣೆ
author img

By

Published : Feb 29, 2020, 12:05 PM IST

ಬೆಂಗಳೂರು : ಕಳೆದ‌ ಮೂರು ದಿನಗಳಿಂದ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಿಚಾರಣೆಗೊಳಪಡಿಸಿದೆ.

ಪೊಲೀಸ್ ಕಸ್ಟಡಿಗೆ ಕೊನೆ ದಿನವಾಗಿದ್ದರಿಂದ ನಿನ್ನೆಯಿಂದಲೇ ಎನ್ಐಎ ಅಧಿಕಾರಿಗಳು ಅಮೂಲ್ಯಳಿಂದ ಹೇಳಿಕೆ ಪಡೆಯುತ್ತಿದ್ದಾರೆ. ರಾಷ್ಟ್ರೀಯತೆ ವಿಚಾರಕ್ಕೆ ಸಂಬಂಧಿಸಿದಂತೆ ಯಾರೊಂದಿಗಾದರೂ ನಂಟು ಹೊಂದಿದ್ದಾರೆಯೇ? ಸಮಾಜಘಾತುಕ ವ್ಯಕ್ತಿಗಳೊಂದಿಗೆ ಸಂಬಂಧ‌ ಇದೆಯಾ ಹಾಗೂ ನಕ್ಸಲ್ ನಂಟಿನ ಬಗ್ಗೆಯೂ ಅಮೂಲ್ಯಳಿಂದ ಹೇಳಿಕೆ ಪಡೆದುಕೊಂಡಿದ್ದಾರೆ.‌

ಬಸವೇಶ್ವರ ನಗರ ಪೊಲೀಸ್ ಠಾಣೆ

ಈ ಪ್ರಕರಣದಲ್ಲಿ ಕಳೆದ ಒಂದು ವಾರದಿಂದ ನಡೆದ ಪೊಲೀಸ್ ತನಿಖೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಪೊಲೀಸ್ ಕಸ್ಟಡಿ ಅವಧಿ ಅಂತ್ಯ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 3 ಗಂಟೆ ಬಳಿಕ ಅಮೂಲ್ಯಳನ್ನು‌ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.