ETV Bharat / state

ಜುಲೈ ಮೊದಲ ವಾರದಲ್ಲಿ  ಪಿಯು ಫಲಿತಾಂಶ: ಇಂದಿನ ಪರೀಕ್ಷೆಗೆ 27,022 ವಿದ್ಯಾರ್ಥಿಗಳು ಗೈರು

ಇಂದು ನಡೆದ ಇಂಗ್ಲಿಷ್ ಪರೀಕ್ಷೆಗೆ ಕಲಾ ವಿಭಾಗದಿಂದ 1,72,350, ವಾಣಿಜ್ಯ ವಿಭಾಗದಿಂದ 2,34,926, ವಿಜ್ಞಾನ ವಿಭಾಗದಿಂದ 1,88,721 ಸೇರಿದಂತೆ ಒಟ್ಟು 5,96,300 ವಿದ್ಯಾರ್ಥಿಗಳು ಹಾಜರಾಗಬೇಕಿದ್ದು, ಇಂದು ರಾಜ್ಯಾದ್ಯಂತ 5,72,665 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 27,022 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ವಿದ್ಯಾರ್ಥಿಗಳು
ವಿದ್ಯಾರ್ಥಿಗಳು
author img

By

Published : Jun 18, 2020, 7:33 PM IST

ಬೆಂಗಳೂರು: ಕೊರೊನಾದಿಂದ ಮುಂದೂಡಲ್ಪಟ್ಟ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಇಂದು ನಡೆದಿದ್ದು, ನಾಳೆಯಿಂದ ಮೌಲ್ಯಮಾಪನ ಕಾರ್ಯ ಆರಂಭವಾಗಲಿದೆ. ಜುಲೈ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಇಂದು ನಡೆದ ಇಂಗ್ಲಿಷ್ ಪರೀಕ್ಷೆಗೆ ಕಲಾ ವಿಭಾಗದಿಂದ 1,72,350, ವಾಣಿಜ್ಯ ವಿಭಾಗದಿಂದ 2,34,926, ವಿಜ್ಞಾನ ವಿಭಾಗದಿಂದ 1,88,721 ಸೇರಿದಂತೆ ಒಟ್ಟು 5,96,300 ವಿದ್ಯಾರ್ಥಿಗಳು ಹಾಜರಾಗಬೇಕಿದ್ದು, ಇಂದು ರಾಜ್ಯಾದ್ಯಂತ 5,72,665 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 27,022 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ಕಲಬುರ್ಗಿ ಜಿಲ್ಲೆಯಲ್ಲಿ ಅತಿ ಗರಿಷ್ಠ ಸಂಖ್ಯೆಯ 1,748 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಕೊಡಗು ಜಿಲ್ಲೆಗಳಲ್ಲಿ ಕನಿಷ್ಠ 99 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಗೈರು ಹಾಜರಿಯ ಕಾರಣವನ್ನು ಗುರುತಿಸಿ ಮುಂದೆ ಅವರು ಪರೀಕ್ಷೆ ಬರೆಯಲು ಇಚ್ಛಿಸಿದಲ್ಲಿ ಅಂತಹ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ನಡೆಯುವ ಪೂರಕ ಪರೀಕ್ಷೆಗೆ ಹಾಜರಾಗಬಹುದಾಗಿದೆ. ಇದರಿಂದ ಯಾವುದೇ ವಿದ್ಯಾರ್ಥಿ ಪೋಷಕರು ಆತಂಕ ಪಡಬೇಕಾಗಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಹಲವೆಡೆ ವಿಫಲ

ಪರೀಕ್ಷಾ ಕೇಂದ್ರದ ಸುತ್ತಮುತ್ತ ಬ್ಯಾರಿಕೇಡ್​ ಹಾಕಿರುವ ಕಡೆ ಹಾಗೂ ಕೊಠಡಿ ಸಂಖ್ಯೆ ಇರುವ ನೋಟಿಸ್ ಬೋರ್ಡ್ ಬಳಿ ಸಾಮಾಜಿಕ ಅಂತರ ಇಲ್ಲದೇ ಇರುವುದು ಗಮನಕ್ಕೆ ಬಂದಿದೆ. ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲವಾಗಿರುವ ಕೆಲ ಪರೀಕ್ಷಾ ಕೇಂದ್ರಗಳ ಸಿಬ್ಬಂದಿಯ ಮೇಲೆ ಕ್ರಮವಹಿಸಲಾಗುವುದು.‌ ಇಲಾಖೆಯಿಂದ ಅವರಿಗೆ ನೊಟಿಸ್ ಜಾರಿ ಮಾಡಲಾಗುವುದು. ಇನ್ನು ಈ ಸಮಸ್ಯೆಯನ್ನು ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಆಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ನಾಳೆಯಿಂದ ಬಾಕಿ ಇರುವ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭ

ದ್ವಿತೀಯ ಪಿಯು ಪರೀಕ್ಷೆಯ ಒಟ್ಟು 39 ವಿಷಯಗಳಲ್ಲಿ ಈಗಾಗಲೇ 26 ವಿಷಯಗಳ ಮೌಲ್ಯಮಾಪನ ಸಂಪೂರ್ಣವಾಗಿದೆ. ಉಳಿದ 9 ವಿಷಯಗಳು ಮುಕ್ತಾಯ ಹಂತಕ್ಕೆ ಬಂದಿದ್ದು, 7 ವಿಷಯಗಳಾದ ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತ , ಜೀವಶಾಸ್ತ್ರ, ಸ್ಟಾಟಿಸ್ಟಿಕಲ್, ಕಂಪ್ಯೂಟರ್‌ ಸೈನ್ಸ್, ಇಂಗ್ಲಿಷ್ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆಗಬೇಕಿದೆ. 20 ಜಿಲ್ಲೆಗಳಲ್ಲಿ ಮೌಲ್ಯಮಾಪನ ನಡೆಯಲಿದ್ದು, ಮೌಲ್ಯಮಾಪಕರಿಗೆ ನೀಡಬೇಕಾದ ಹಣ ಬೇಗ ತಲುಪಲಿದೆ ಎಂದರು.

ಕಂಟೈನ್ಮೆಂಟ್ ಜೋನ್‌ನಲ್ಲಿ ಪರೀಕ್ಷೆ ಬರೆದವರು 223 ವಿದ್ಯಾರ್ಥಿಗಳು

  • ರಾಮನಗರ- 1
  • ಬಳ್ಳಾರಿ- 1
  • ಬಿಜಾಪುರ- 5
  • ದಾವಣಗೆರೆ- 13
  • ಧಾರವಾಡ- 162
  • ಚಿಕ್ಕಬಳ್ಳಾಪುರ- 5
  • ಮೈಸುರು- 5
  • ಮಂಡ್ಯ -2
  • ಉಡುಪಿ- 9
  • ಶಿವಮೊಗ್ಗ - 15
  • ತುಮಕೂರು- 05
  • ಒಟ್ಟು- 223

ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆದವರು ಎಷ್ಟು ಜನ

  • ಬೆಂಗಳೂರು ಸೌತ್- 2
  • ಮೈಸೂರು- 12
  • ಮಂಡ್ಯ- 1
  • ದಕ್ಷಿಣಕನ್ನಡ- 2
  • ಉಡುಪಿ- 1
  • ಶಿವಮೊಗ್ಗ- 2
  • ಒಟ್ಟು -20

ETV Bharat Logo

Copyright © 2024 Ushodaya Enterprises Pvt. Ltd., All Rights Reserved.