ETV Bharat / state

ಲೇಡಿ ಕಾನ್ಸ್​​ಟೇ​​ಬಲ್​ ಕೋವಿಡ್​​​ ವರದಿ ನೆಗೆಟಿವ್: ಸಹಜ ಸ್ಥಿತಿಗೆ ಗೃಹ ಕಚೇರಿ ಕೃಷ್ಣಾ! - sealdown revoked in krishna

ಗೃಹ ಕಚೇರಿ ಕೃಷ್ಣಾದಲ್ಲಿ ನಿಯೋಜಿಸಿದ್ದ ಮಹಿಳಾ ಕಾನ್ಸ್​​​​​ಟೇಬಲ್ ಕೊರೊನಾ ವರದಿ ನೆಗೆಟಿವ್ ಬಂದ ಹಿನ್ನೆಲೆ ಸೀಲ್​ಡೌನ್​ ತೆರವುಗೊಳಿಸಲಾಗಿದ್ದು, ಇದೀಗ ಸಿಎಂ ಗೃಹಕಚೇರಿಯಲ್ಲಿ ಎಲ್ಲ ಚಟುವಟಿಕೆಗಳು ಸಹಜವಾಗಿ ನಡೆಯುತ್ತಿವೆ.

sealdown-revoked-in-krishna
ಸಹಜ ಸ್ಥಿತಿಗೆ ಗೃಹ ಕಚೇರಿ ಕೃಷ್ಣಾ!
author img

By

Published : Jun 20, 2020, 11:16 AM IST

ಬೆಂಗಳೂರು: ಗೃಹ ಕಚೇರಿ ಕೃಷ್ಣಾದಲ್ಲಿ ನಿಯೋಜಿಸಿದ್ದ ಮಹಿಳಾ ಕಾನ್ಸ್​ಟೇಬಲ್ ಕೊರೊನಾ ವರದಿ ನೆಗೆಟಿವ್ ಬಂದ ಹಿನ್ನೆಲೆ ಇದೀಗ ಸಿಎಂ ಗೃಹಕಚೇರಿ ಸಹಜ ಸ್ಥಿತಿಗೆ ಬಂದಿದೆ. ಗೃಹ ಕಚೇರಿ ಕೃಷ್ಣಾದ ಸೀಲ್​ಡೌನ್ ತೆರವು ಮಾಡಲಾಗಿದ್ದು, ಎಂದಿನಂತೆ ರಾಜಕೀಯ ಚಟುವಟಿಕೆಗಳು ಮುಂದುವರೆದಿವೆ.

ಸಹಜ ಸ್ಥಿತಿಗೆ ಗೃಹ ಕಚೇರಿ ಕೃಷ್ಣಾ!
ಕೊರೊನಾ ವರದಿ ನೆಗೆಟಿವ್ ಬಂದ ಹಿನ್ನೆಲೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಗೃಹ ಕಚೇರಿ ಕೃಷ್ಣಾ ಸಿಬ್ಬಂದಿ ನಿರಾಳರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೆಲಸ ನಿರ್ವಹಿಸುವ ಲೇಡಿ ಕಾನ್ಸ್​​ಟೇಬಲ್ ಪತಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಲೇಡಿ ಕಾನ್ಸ್​​ಟೇಬಲ್​​ಗೂ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಇತ್ತ ನಿನ್ನೆ ಗೃಹ ಕಚೇರಿ ಕೃಷ್ಣಾ ಬಂದ್ ಮಾಡಿ ಸಂಪೂರ್ಣ ಸ್ಯಾನಿಟೈಸಿಂಗ್ ಮಾಡಲಾಗಿತ್ತು. ಈ ಹಿನ್ನೆಲೆ ಗೃಹ ಕಚೇರಿ ಕೃಷ್ಣಾದಲ್ಲಿದ್ದ ಮುಖ್ಯಮಂತ್ರಿಗಳ ಎಲ್ಲ ಸಭೆಗಳನ್ನು ನಿನ್ನೆ ವಿಧಾನಸೌಧಕ್ಕೆ ಶಿಫ್ಟ್ ಮಾಡಲಾಗಿತ್ತು.ಇದೀಗ ಮಹಿಳಾ ಕಾನ್ಸ್​ಟೇಬಲ್ ಕೋವಿಡ್​​-19 ಟೆಸ್ಟ್ ವರದಿ ನೆಗೆಟಿವ್ ಬಂದಿದ್ದು, ಗೃಹ ಕಚೇರಿ ಕೃಷ್ಣಾ ಅಧಿಕಾರಿಗಳು, ಸಿಬ್ಬಂದಿಗೆ ಆತಂಕ ದೂರವಾಗಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.