ETV Bharat / state

ದೇಶದ ಉತ್ತರದಲ್ಲಿ ಮೈ ಸುಡುವ ತಾಪ: ದಕ್ಷಿಣದಲ್ಲಿ ಅಬ್ಬರಿಸಿದ ಮಳೆರಾಯ

author img

By

Published : May 22, 2023, 11:07 AM IST

ದೇಶದಲ್ಲಿ ಒಂದು ಕಡೆ ಅಕಾಲಿಕ ಮಳೆಯಾಗುತ್ತಿದ್ದರೆ, ಇನ್ನೊಂದೆಡೆ ತಾಪಮಾನ ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಿದೆ.

temperature
ಹವಮಾನ

ಉತ್ತರ ಭಾರತದಲ್ಲಿ ಜನರು ಗರಿಷ್ಠ ತಾಪಮಾನದಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದರೆ, ದಕ್ಷಿಣ ಭಾಗದ ಕೆಲವೆಡೆ ಗಾಳಿ ಸಹಿತ ಮಳೆಯ ಅಬ್ಬರ ಶುರುವಾಗಿದೆ. ಶನಿವಾರ, ಭಾನುವಾರ ಸುರಿದ ಆಲಿಕಲ್ಲು, ಗಾಳಿಸಹಿತ ಜೋರು ಮಳೆಗೆ ಕರ್ನಾಟಕದ ಬೆಂಗಳೂರು ನಗರದ ಅನೇಕ ಭಾಗಗಳು ಜಲಾವೃತಗೊಂಡು, ಜನಜೀವನ ಅಸ್ತವ್ಯಸ್ತವಾಯಿತು. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ವರ್ಷಧಾರೆ ಉಂಟಾಗಿದ್ದು ಇನ್ನೂ ಎರಡು ದಿನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.

ದೆಹಲಿಯಲ್ಲಿ ನೆತ್ತಿ ಸುಡುವ ಉಷ್ಣಾಂಶ: ಉತ್ತರ ಭಾರತದ ಮಂದಿ ಬಿಸಿಲ ಝಳಕ್ಕೆ ನಲುಗುತ್ತಿದ್ದು ತಾಪಮಾನ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಹವಾಮಾನ ಇಲಾಖೆ ಪ್ರಕಾರ, ನೈಋತ್ಯ ದೆಹಲಿಯ ನಜಾಫ್‌ಗಢದಲ್ಲಿ ಭಾನುವಾರ 46 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಇದು ಈ ತಿಂಗಳಲ್ಲಿ ದಾಖಲಾದ ಗರಿಷ್ಠ ತಾಪಮಾನ ಎಂದು ಇಲಾಖೆ ತಿಳಿಸಿದೆ. ರಾಷ್ಟ್ರ ರಾಜಧಾನಿಯ ಇತರ ಭಾಗಗಳೂ ಸಹ ಅತಿ ಹೆಚ್ಚು ತಾಪಮಾನಕ್ಕೆ ಒಳಗಾಗಿವೆ. ನರೇಲಾ ಮತ್ತು ಪಿತಾಂಪುರದಲ್ಲಿ 45 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಅಯನಗರದಲ್ಲಿ 44 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ದೆಹಲಿಯ ಪಾಲಂ 43.8 ಡಿಗ್ರಿ ಸೆಲ್ಸಿಯಸ್‌ ತಲುಪಿದೆ.

ಇಲಾಖೆಯ ದೆಹಲಿ ಪ್ರಾದೇಶಿಕ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಮಾಹಿತಿ ನೀಡಿ, ಮೇ ತಿಂಗಳ ಮೊದಲಾರ್ಧದಲ್ಲಿ ಹೀಟ್‌ವೇವ್ ಪರಿಸ್ಥಿತಿಗಳು ವಾಯುವ್ಯ ಭಾರತದ ಭಾಗಗಳ ಮೇಲೆ ಪರಿಣಾಮ ಬೀರುತ್ತಿದ್ದು ಪಾಶ್ಚಿಮಾತ್ಯ ಅಡಚಣೆಗಳಿಂದಾಗಿ ಕಡಿಮೆ ತೀವ್ರತೆ ಉಂಟು ಮಾಡಿತ್ತು. ಆದರೆ ಮುಂದಿನ ಪಾಶ್ಚಿಮಾತ್ಯ ಅಡಚಣೆಯು ವಾಯುವ್ಯ ಭಾರತವನ್ನು ಸಮೀಪಿಸುತ್ತಿದ್ದು 7 ದಿನಗಳವರೆಗೆ ತಾಪಮಾನ ಹೆಚ್ಚಿರಲಿದೆ.

ಹರಿಯಾಣ, ದೆಹಲಿ NCR, ಪಶ್ಚಿಮ ಉತ್ತರ ಪ್ರದೇಶ ಮತ್ತು ಈಶಾನ್ಯ ರಾಜಸ್ಥಾನದ ಪ್ರದೇಶಗಳಲ್ಲಿ ಧೂಳುಸಹಿತ ಗಾಳಿ ಇರಲಿದೆ. ಬಿಸಿ ವಾತಾವರಣದಿಂದಾಗಿ ಭೂ ಮೇಲ್ಮೈ ಪದರ ಸಡಿಲಗೊಂಡಿದೆ. ಇದರಿಂದಾಗಿ ಗಂಟೆಗೆ 40-45 ಕಿಮೀ ವೇಗದಲ್ಲಿ ಗಾಳಿ ಮೇಲ್ಮೈ ಮಣ್ಣು ಸಮೇತ ಬೀಸುವುದರಿಂದ ವಾತಾವರಣವೆಲ್ಲವೂ ಧೂಳುಸಹಿತ ಬಿಸಿ ಗಾಳಿಯಿಂದ ತುಂಬಲಿದೆ ಎಂದು ತಿಳಿಸಿದ್ದಾರೆ.

  • ನನ್ನ ಮನೆಯ ರಿಪೇರಿ ಕಾರ್ಯ ಪ್ರಯುಕ್ತ ನನ್ನ ರಸ್ತೆಯ ಸ್ನೇಹಿತ ಮುರಳಿ ಮನೆಯ ಸೆಲ್ಲಾರ್ ನಲ್ಲಿ ನಿಲ್ಲಿಸಿದ್ದ ನನ್ನ bmw5 ಕಾರು ಅಕಾಲಿಕ ಮಳೆ ನೀರಿನಲ್ಲಿ ಮುಳುಗಡೆ ಆಯಿತು..5hp motor ಬಳಸಿ ನೀರು ಹೊರಹಾಕಿಸಲಾಯಿತು..
    ಇಂಥ ಅಲ್ಲಿಕಲ್ಲಿನ ಮಳೆ ಈ ತಿಂಗಳಲ್ಲಿ ಬಂದದ್ದು ಆಶ್ಚರ್ಯ.. pic.twitter.com/eZ2G2cYQWS

    — ನವರಸನಾಯಕ ಜಗ್ಗೇಶ್ (@Jaggesh2) May 21, 2023 " class="align-text-top noRightClick twitterSection" data=" ">

ಮಳೆ ನೀರಲ್ಲಿ ಮುಳುಗಿದ ಜಗ್ಗೇಶ್​ BMW ಕಾರು: ನಿನ್ನೆ ಸುರಿದ ಭಾರಿ ಮಳೆಗೆ ನಟ ಜಗ್ಗೇಶ್​ ಅವರ BMW ಕಾರು ನೀರಿಲ್ಲಿ ಮುಳುಗಡೆಯಾಗಿದೆ. ಈ ಕುರಿತು ಟ್ವೀಟ್​ ಮೂಲಕ ಫೋಟೋ, ವಿಡಿಯೋ ಹಂಚಿಕೊಂಡಿದ್ದಾರೆ. "ನನ್ನ ಮನೆಯ ರಿಪೇರಿ ಕಾರ್ಯ ಪ್ರಯುಕ್ತ ನನ್ನ ರಸ್ತೆಯ ಸ್ನೇಹಿತ ಮುರಳಿ ಮನೆಯ ಸೆಲ್ಲಾರ್​ನಲ್ಲಿ ನಿಲ್ಲಿಸಿದ್ದ ನನ್ನ BMW5 ಕಾರು ಅಕಾಲಿಕ ಮಳೆ ನೀರಿನಲ್ಲಿ ಮುಳುಗಡೆ ಆಯಿತು. 5hp motor ಬಳಸಿ ನೀರು ಹೊರ ಹಾಕಿಸಲಾಯಿತು. ಇಂಥ ಅಲ್ಲಿಕಲ್ಲಿನ ಮಳೆ ಈ ತಿಂಗಳಲ್ಲಿ ಬಂದದ್ದು ಆಶ್ಚರ್ಯ" ಎಂದು ಹೇಳಿದ್ದಾರೆ. ಇದೇ ರೀತಿ ನಿನ್ನೆ ಬೆಂಗಳೂರಿನ ಅನೇಕ ಕಡೆಗಳ ರಸ್ತೆಗಳಲ್ಲಿ ನೀರು ಬ್ಲಾಕ್ ಆಗಿದ್ದು ಸಂಚಾರಕ್ಕೆ ಭಾರಿ ಸಮಸ್ಯೆ ಉಂಟಾಗಿತ್ತು.

ಇದನ್ನೂ ಓದಿ: ರಾಜ್ಯದಲ್ಲಿ ಇನ್ನೆರಡು ದಿನ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.