ETV Bharat / state

ಎನ್ಇಪಿ ಮೂಲಕ ವೈಜ್ಞಾನಿಕ, ಸಂಶೋಧನೆ, ಮೌಲ್ಯಾಧಾರಿತ ಶಿಕ್ಷಣ : ಸಚಿವ ಬಿ ಸಿ ನಾಗೇಶ್ - Scientific, Research and Valuable Education through NEP

ಎಲ್ಲ ವಿಚಾರಗಳನ್ನು ಸ್ವೀಕರಿಸುವ ಮೊದಲು ಅರ್ಥ ಮಾಡಿಕೊಂಡು, ಅರ್ಥವಾಗದಿದ್ದರೆ ಪ್ರಶ್ನೆ ಮಾಡಿ ಉತ್ತರ ಕಂಡುಕೊಳ್ಳುವುದಕ್ಕೆ ಋಷಿ-ಮುನಿಗಳು ಅವಕಾಶ ನೀಡುತ್ತಿದ್ದರು. ಕಾಲಾಂತರದಲ್ಲಿ ಆ ವ್ಯವಸ್ಥೆ ಬದಲಾಗಿ, ಹೆಚ್ಚು ಹಣ, ಅಂತಸ್ತು ಸಿಗುವುದನ್ನೇ ಓದಬೇಕು ಎನ್ನುವ ವಾತಾವರಣ ನಿರ್ಮಾಣವಾಗಿದೆ. ಅಂತಹ ಶಿಕ್ಷಣವೇ ಮುಖ್ಯ ಎನ್ನುವಂತಾಗಿದೆ. ಆದರೆ, ಎನ್‌ಇಪಿಯಲ್ಲಿ ವಿಜ್ಞಾನ, ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತದೆ..

ಸಚಿವ ಬಿ.ಸಿ. ನಾಗೇಶ್
ಸಚಿವ ಬಿ.ಸಿ. ನಾಗೇಶ್
author img

By

Published : Oct 4, 2021, 9:39 PM IST

ಬೆಂಗಳೂರು : ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್ಇಆರ್‌ಟಿ) ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಡಿಎಸ್ಇಆರ್‌ಟಿ ಕಚೇರಿಯಲ್ಲಿ ಇಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಆಯೋಜಿಸಿದ್ದ '29ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ' ಮತ್ತು 'ಮಾರ್ಗದರ್ಶಿ ಶಿಕ್ಷಕರ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮವನ್ನು ಟೆಲಿಕಾನ್ಫರೆನ್ಸ್ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ಉದ್ಘಾಟಿಸಿದ್ರು.

ಕಾರ್ಯಕ್ರಮ ಉದ್ಘಾಟಿಸಿದ ನಂತರ ಮಾತನಾಡಿದ ಸಚಿವ ಬಿ.ಸಿ ನಾಗೇಶ್, ವೈಜ್ಞಾನಿಕ ಮತ್ತು ಸಂಶೋಧನೆಯ ಮನೋಭಾವ, ಮೌಲ್ಯಾಧಾರಿತ ಹಾಗೂ ಪ್ರಯೋಗ ಆಧಾರಿತ ಶಿಕ್ಷಣಕ್ಕೆ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಒತ್ತು ನೀಡುತ್ತದೆ. ಅದು ಮಕ್ಕಳಲ್ಲಿ ಆಸಕ್ತಿ ಮೂಡಿಸಿ ಒಳ್ಳೆಯ ವಾತಾವರಣದಲ್ಲಿ ಶಿಕ್ಷಣ ನೀಡುವುದು, ಮಕ್ಕಳಲ್ಲಿ ಕುತೂಹಲ ಮೂಡಿಸುವುದು. ಪಾಠದ ವೇಳೆ ಎದುರಾಗುವ ಪ್ರಶ್ನೆಗಳನ್ನು ಶಿಕ್ಷಕರಿಗೆ ಕೇಳಿ ಉತ್ತರ ಪಡೆದುಕೊಳ್ಳುವ ವ್ಯವಸ್ಥೆ ನಮ್ಮ ದೇಶದ ಗುರುಕುಲ ಶಿಕ್ಷಣ ವ್ಯವಸ್ಥೆಯಲ್ಲಿ ಸಾವಿರಾರು ವರ್ಷಗಳಿಂದ ಇದೆ.

ಎಲ್ಲ ವಿಚಾರಗಳನ್ನು ಸ್ವೀಕರಿಸುವ ಮೊದಲು ಅರ್ಥ ಮಾಡಿಕೊಂಡು, ಅರ್ಥವಾಗದಿದ್ದರೆ ಪ್ರಶ್ನೆ ಮಾಡಿ ಉತ್ತರ ಕಂಡುಕೊಳ್ಳುವುದಕ್ಕೆ ಋಷಿ-ಮುನಿಗಳು ಅವಕಾಶ ನೀಡುತ್ತಿದ್ದರು. ಕಾಲಾಂತರದಲ್ಲಿ ಆ ವ್ಯವಸ್ಥೆ ಬದಲಾಗಿ, ಹೆಚ್ಚು ಹಣ, ಅಂತಸ್ತು ಸಿಗುವುದನ್ನೇ ಓದಬೇಕು ಎನ್ನುವ ವಾತಾವರಣ ನಿರ್ಮಾಣವಾಗಿದೆ. ಅಂತಹ ಶಿಕ್ಷಣವೇ ಮುಖ್ಯ ಎನ್ನುವಂತಾಗಿದೆ. ಆದರೆ, ಎನ್‌ಇಪಿಯಲ್ಲಿ ವಿಜ್ಞಾನ, ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತದೆ ಎಂದರು.

ಕೋವಿಡ್-19 ಸೋಂಕಿಗೆ ಲಸಿಕೆ ಪರಿಹಾರ ಎಂದು ತಜ್ಞರು, ವಿಜ್ಞಾನಿಗಳು ಕೋವಿಡ್ ಆರಂಭದಲ್ಲೇ ಹೇಳುತ್ತಿದ್ದರು. ಆದರೆ, 130 ಕೋಟಿಗೂ ಹೆಚ್ಚು ಜನಸಂಖ್ಯೆಯ ಭಾರತಕ್ಕೆ ಲಸಿಕೆ ಲಭ್ಯತೆ ಮತ್ತು ಸರಬರಾಜು ಮಾಡುವ ಸವಾಲು ಎದುರಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ದೇಶಿಯ ಲಸಿಕೆ ಅಭಿವೃದ್ಧಿಗೆ ಉತ್ತೇಜನ ನೀಡಿ, ದೇಶದ ವಿಜ್ಞಾನಿಗಳ ಬೆನ್ನು ತಟ್ಟಿದ್ದರ ಫಲವಾಗಿ ಭಾರತ ಕೂಡ ತ್ವರಿತವಾಗಿ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದರು.

ಕರ್ನಾಟಕವು ವಿಜ್ಞಾನ, ತಂತ್ರಜ್ಞಾನ, ದೇಶದ ಮಹತ್ವದ ಸಂಶೋಧನಾ ಕೇಂದ್ರಗಳು, ಪ್ರಯೋಗಾಲಯಗಳ ತವರೂರಾಗಿದೆ. ವಿವೇಕಾನಂದರ ಪ್ರೇರಣೆಯಿಂದ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಲು ಮುಂದಾದ ಜೆ. ಟಾಟಾ ಅವರಿಗೆ ಮೈಸೂರು ಮಹಾರಾಜರು ಜಮೀನು ಒದಗಿಸಿಕೊಟ್ಟರು. ಅದರ ಪರಿಣಾಮವೇ ಇಂದು ದೇಶದ ಟಾಪ್ ವಿವಿಗಳಲ್ಲಿ ಒಂದಾಗಿರುವ ಐಐಎಸ್ಸಿ ಸ್ಥಾಪನೆಯಾಯಿತು. ಸ್ವಾತಂತ್ರ್ಯ ಪೂರ್ವದಲ್ಲೇ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಸಂಶೋಧನೆಗೆ ಆದ್ಯತೆ ನೀಡಲಾಯಿತು. ತಮಗೆ ಬಂದ ನೋಬಲ್ ಪ್ರಶಸ್ತಿ ಮೊತ್ತವನ್ನು ವಿಜ್ಞಾನಿ ಸಿ.ವಿ ರಾಮನ್ ಅವರು ಸಂಶೋಧನಾ ಕೇಂದ್ರ ಸ್ಥಾಪನೆಗೆ ಅರ್ಪಿಸಿದರು ಎಂದು ವಿವರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.