ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಕೊಂಚ ಕಡಿಮೆಯಾದ ಪರಿಣಾಮ ಹಂತ-ಹಂತವಾಗಿ ಅನ್ಲಾಕ್ ಮಾಡಲಾಗಿದೆ. ಎಲ್ಲಾ ಚಟುವಟಿಕೆಗಳು ಚುರುಕುಗೊಂಡಿವೆ. ಆದರೆ, ಶೈಕ್ಷಣಿಕ ಕ್ಷೇತ್ರಕ್ಕೆ ಇನ್ನೂ ರಿಲೀಫ್ ಸಿಕ್ಕಿಲ್ಲ. ಸರ್ಕಾರ ನೇಮಿಸಿರುವ ಡಾ.ದೇವಿಶೆಟ್ಟಿ ಬಣ ಶಾಲೆಗಳನ್ನು ಆರಂಭಿಸುವಂತೆ ಸಲಹೆ ನೀಡಿದ್ದರೂ, ಇಲಾಖೆ ಮಾತ್ರ ಮೀನಾ-ಮೇಷ ಎಣಿಸುತ್ತಿದೆ.
ಈಗಾಗಲೇ ಕಮಿಟಿ ನೀಡಿರುವ ವರದಿಯನ್ನು ಪರಿಶೀಲಿಸಲು ಮತ್ತೊಂದು ತಜ್ಞರ ಸಮಿತಿ ರಚನೆ ಮಾಡಿದ್ದು, ಈಗಾಗಲೇ ಸಮಿತಿ ರಚನೆ ಬಗ್ಗೆ ಮಾತಾಡಿ 10 ದಿನಗಳು ಕಳೆದಿದೆ. ಈ ತನಕ ಯಾವುದೇ ಮಾಹಿತಿ ಇಲ್ಲ ಎಂದು ಖಾಸಗಿ ಶಾಲೆಗಳ ಸಂಘಟನೆಗಳು ಆರೋಪಿಸಿವೆ. ಹಾಗೆ ಮತ್ತೊಂದು ಸಮಿತಿಯ ಅಗತ್ಯತೆ ಬಗ್ಗೆಯೂ ಪ್ರಶ್ನೆ ಮಾಡಿವೆ.
ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್ ನೇತೃತ್ವದಲ್ಲಿ ಕಾರ್ಯ ಪಡೆಯನ್ನು ಜುಲೈ 9ರಿಂದಲ್ಲೇ ರಚನೆ ಮಾಡಲಾಗಿದೆ. ಭೌತಿಕ ತರಗತಿ ಹೇಗೆ ಆರಂಭ ಮಾಡಬೇಕು. ವಿದ್ಯಾಗಮ ನಡೆಸಬೇಕಾ, ಬೇಡ್ವಾ, ವಿದ್ಯಾರ್ಥಿಗಳ ಸುರಕ್ಷತೆ ಹೇಗೆ ಶಾಲಾ ಹಂತದಲ್ಲಿ ಕಾಪಾಡಬೇಕೆಂಬ ಚರ್ಚೆ ನಡೆಯುತ್ತಿದೆ. ಈಗಾಗಲೇ ರಾಜ್ಯದಲ್ಲಿ ಜುಲೈ 1ರಿಂದ ದಾಖಲಾತಿ ಪ್ರಕ್ರಿಯೆ ಹಾಗೂ ಶೈಕ್ಷಣಿಕ ಚಟುವಟಿಕಯು ಶುರುವಾಗಿದೆ. ಖಾಸಗಿ ಶಾಲೆಯಲ್ಲಿ ಆನ್ಲೈನ್ ಪಾಠ ನಡೆಯುತ್ತಿದ್ದರೆ, ಇತ್ತ ಸಂವೇದ, ಸೇತುಬಂಧದ ಮೂಲಕ ಸರ್ಕಾರಿ ಶಾಲೆಯ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದೆ.
ಓದಿ: ರಾಜ್ಯ ರಾಜಕೀಯ ಬೆಳವಣಿಗೆ ಕುರಿತು ಕೋಡಿಶ್ರೀ ನುಡಿದ್ರು ಮಹತ್ವದ ಭವಿಷ್ಯ
ಶಿಕ್ಷಣ ಸಚಿವರು ಮಾಡಿರುವ ಸಮಿತಿ ತಂಡವು ಈಗಾಗಲೇ ಆತಂರಿಕವಾಗಿ ಎರಡು ಸುತ್ತಿನ ಸಭೆ ನಡೆಸಿದ್ದು, ಈ ತಿಂಗಳ ಕೊನೆಯಲ್ಲಿ ವರದಿ ಸಲ್ಲಿಸಲಿದೆ. ರಾಜ್ಯಾದ್ಯಂತ ಭೌತಿಕ ತರಗತಿ ಆರಂಭವೂ ಈ ತಿಂಗಳ ಕೊನೆಯ ವಾರ ನಿರ್ಧಾರವಾಗಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಆದರೆ, ಸಮಿತಿ ವರದಿಗಾಗಿಯೇ ತಿಂಗಳ ಸಮಯ ತೆಗೆದುಕೊಂಡು ವಿದ್ಯಾರ್ಥಿಗಳ ಭವಿಷ್ಯಕ್ಕೆ ಇನ್ನಷ್ಟು ಹಾನಿಯಾಗಲಿದೆ. ಖಾಸಗಿ ಶಾಲಾ ಸಂಘಟನೆಗಳು, ಶಿಕ್ಷಣ ತಜ್ಞರು ಶಾಲೆಯನ್ನು ಆರಂಭಿಸುವಂತೆ ಒತ್ತಾಯ ಮಾಡುತ್ತಿದ್ದಾರೆ.
ಓದಿ: ಯಡಿಯೂರಪ್ಪ ಅವರ ನಾಲಿಗೆ- ಕೈ ಮಗನ ಕೈಯಲ್ಲಿದೆ : ವಿಶ್ವನಾಥ್ ವಾಗ್ದಾಳಿ