ETV Bharat / state

ರಾಜ್ಯದಲ್ಲಿ ಏರುತ್ತಲೇ ಇದೆ SC/ST ದೌರ್ಜನ್ಯ ಪ್ರಕರಣ: ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲೇ ಸಾವಿರಾರು ಕೇಸ್.! - SC / ST atrocity case in Karnataka news

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆಯಲು ಹಾಗೂ ಅವರ ಹಕ್ಕುಗಳ ರಕ್ಷಣೆಗೆ ಕಾಯಿದೆ ಹಾಗೂ ನಿಯಮ ಜಾರಿಗೆ ತರಲಾಗಿದೆ. ದೌರ್ಜನ್ಯ ಪ್ರತಿಬಂಧ ಕಾಯ್ದೆ 1989 (ತಿದ್ದುಪಡಿ ಕಾಯ್ದೆ 2015) ಮತ್ತು ನಿಯಮಗಳು 1995 (ತಿದ್ದುಪಡಿ ನಿಯಮಗಳು 2016) ಜಾರಿಯಲ್ಲಿದೆ. ಆದರೆ, ಸರಕಾರ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡದ ಪರಿಣಾಮ ದೌರ್ಜನ್ಯ ಪ್ರಕರಣ ಹೆಚ್ಚುತ್ತಿವೆ. ಅಲ್ಲದೇ, ಜೊತೆಗೆ ದೋಷಾರೋಪ ಪಟ್ಟಿ ಸಲ್ಲಿಸಿದ ಬಳಿಕವೂ ಕೋರ್ಟ್​ಗಳಲ್ಲಿ ವಿಚಾರಣಾ ಹಂತದಲ್ಲೇ ಸಾವಿರಾರು ಪ್ರಕರಣಗಳು ಬಾಕಿ ಉಳಿದಿವೆ.

SC / ST atrocity case in Karnataka
ರಾಜ್ಯದಲ್ಲಿ ಏರುತ್ತಲೇ ಇದೆ SC/ST ದೌರ್ಜನ್ಯ ಪ್ರಕರಣ
author img

By

Published : Aug 31, 2021, 7:23 PM IST

ಬೆಂಗಳೂರು: ರಾಜ್ಯದಲ್ಲಿ SC/ST ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಶಿಕ್ಷೆಯ ಪ್ರಮಾಣ ಕಡಿಮೆಯಾಗುತ್ತಿದೆ. ದೋಷಾರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲೇ ಸಾವಿರಾರು ಪ್ರಕರಣಗಳು ಇತ್ಯರ್ಥವಾಗದೇ ವಿಳಂಬವಾಗುತ್ತಿವೆ.‌

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆಯಲು ಹಾಗೂ ಅವರ ಹಕ್ಕುಗಳ ರಕ್ಷಣೆಗೆ ಕಾಯಿದೆ ಹಾಗೂ ನಿಯಮ ಜಾರಿಗೆ ತರಲಾಗಿದೆ. ದೌರ್ಜನ್ಯ ಪ್ರತಿಬಂಧ ಕಾಯ್ದೆ 1989 (ತಿದ್ದುಪಡಿ ಕಾಯ್ದೆ 2015) ಮತ್ತು ನಿಯಮಗಳು 1995 (ತಿದ್ದುಪಡಿ ನಿಯಮಗಳು 2016) ಜಾರಿಯಲ್ಲಿದೆ. ಆದರೆ, ಸರಕಾರ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡದ ಪರಿಣಾಮ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ, ಕಾಯಿದೆಯ ಪರಿಣಾಮಕಾರಿ ಜಾರಿಗೆ ಅಗತ್ಯ ಕ್ರಮ ಜರುಗಿಸುವಂತೆ ಕೂಗು ಕೇಳಿ ಬರುತ್ತಲೇ ಇದೆ.

ಈ ಸಂಬಂಧ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಯನ್ನು ಮಾಡಲಾಗಿದ್ದು, ಪ್ರಕರಣಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ಆದರೂ ರಾಜ್ಯದಲ್ಲಿ ಎಸ್​ಸಿ/ಎಸ್​ಟಿ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದರ ಜೊತೆಗೆ ದೋಷಾರೋಪ ಪಟ್ಟಿ ಸಲ್ಲಿಸಿದ ಬಳಿಕವೂ ಕೋರ್ಟ್​ಗಳಲ್ಲಿ ವಿಚಾರಣಾ ಹಂತದಲ್ಲೇ ಸಾವಿರಾರು ಪ್ರಕರಣಗಳು ಬಾಕಿ ಉಳಿದಿವೆ.

ರಾಜ್ಯದಲ್ಲಿ ದಾಖಲಾದ ದೌರ್ಜನ್ಯ ಪ್ರಕರಣಗಳೆಷ್ಟು?

ರಾಜ್ಯದಲ್ಲಿ ವರ್ಷಂಪ್ರತಿ ಎಸ್​ಸಿ/ಎಸ್​ಟಿ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದಕ್ಕಿಂತ ಹೆಚ್ಚಾಗಿ ಪ್ರಕರಣ ಸಂಬಂಧ ಶಿಕ್ಷೆ ಪ್ರಮಾಣವೂ ಕಡಿಮೆಯಾಗುತ್ತಿದೆ. ಕಾನೂನು ಇಲಾಖೆ ನೀಡಿದ ಅಂಕಿ - ಅಂಶದ ಪ್ರಕಾರ, ರಾಜ್ಯದಲ್ಲಿ 2020-21ನೇ ಸಾಲಿನಲ್ಲಿ ಜುಲೈ ಅಂತ್ಯದವರೆಗೆ ಸುಮಾರು 901 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಎಸ್​ಸಿ ಮೇಲಿನ ದೌರ್ಜನ್ಯ ಪ್ರಕರಣ 729, ಎಸ್​ಟಿ ಮೇಲಿನ ದೌರ್ಜನ್ಯ ಪ್ರಕರಣ 172. ಈ ಹಿಂದಿನ ವರ್ಷಗಳ ಪ್ರಕರಣಗಳೂ ಸೇರಿ ಈ ವರ್ಷ ಜುಲೈ ಅಂತ್ಯದವರೆಗೆ ಸುಮಾರು 1069 ಎಸ್​ಸಿ ಹಾಗೂ ಎಸ್​ಟಿ ದೌರ್ಜನ್ಯ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ.

ಈ ಪೈಕಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ದಾಖಲಾಗಿರುವುದು ಕೇವಲ 517 ಪ್ರಕರಣಗಳಲ್ಲಿ ಮಾತ್ರ. ಇದರಲ್ಲಿ ಎಸ್​ಸಿ ಮೇಲಿನ ದೌರ್ಜನ್ಯ ಪ್ರಕರಣ ಸಂಬಂಧ 401 ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಎಸ್​ಟಿ ಮೇಲಿನ ದೌರ್ಜನ್ಯ ಪ್ರಕರಣ ಸಂಬಂಧ 116 ದೋಷರೋಪ ಪಟ್ಟಿ ಸಲ್ಲಿಸಲಾಗಿದೆ. 573 ದೌರ್ಜನ್ಯ ಪ್ರಕರಣಗಳು ಇನ್ನೂ ತನಿಖಾ ಹಂತದಲ್ಲೇ ಇವೆ.

2019ರಲ್ಲಿ 1,538 ಎಸ್​ಸಿ, ಎಸ್​ಟಿ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿರುವುದು 1,207 ಪ್ರಕರಣಗಳಲ್ಲಿ ಮಾತ್ರ. 2020ರಲ್ಲಿ 1,568 ದೌರ್ಜನ್ಯ ಪ್ರಕರಣಗಳು ದಾಖಲಾಗಿತ್ತು. ಈ ಪೈಕಿ 1,230 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ವಿಚಾರಣೆ ಹಂತದಲ್ಲೇ ಇವೆ ಸಾವಿರಾರು ಪ್ರಕರಣ:

2020ರ ಸಾಲಿನಲ್ಲಿ ಸುಮಾರು 7,014 ಪ್ರಕರಣಗಳು ಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿದ್ದವು. ಈ ಪೈಕಿ ಕೇವಲ 59 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. 600 ಕೇಸ್​ಗಳಲ್ಲಿ ಆರೋಪಿಗಳು ಖುಲಾಸೆಯಾಗಿದ್ದರೆ, 758 ಪ್ರಕರಣಗಳು ಇತ್ಯರ್ಥವಾಗಿದೆ ಉಳಿದಿವೆ. ಒಟ್ಟು 6,256 ಕೇಸ್​ಗಳು ಈಗಲೂ ನ್ಯಾಯಾಲಯದಲ್ಲೇ ವಿಚಾರಣೆ ಹಂತದಲ್ಲಿವೆ.

2021 ಜೂನ್ ವರೆಗೆ ಸುಮಾರು 7,027 ಪ್ರಕರಣಗಳು ಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿವೆ. ಈ ಪೈಕಿ 17 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. 499 ಮಂದಿ ಖುಲಾಸೆಯಾಗಿದ್ದಾರೆ. 676 ಪ್ರಕರಣಗಳು ಇತ್ಯರ್ಥವಾಗಿವೆ. ಇನ್ನೂ ಸುಮಾರು 6,351 ಪ್ರಕಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.

ಓದಿ: ಮಂಗಳೂರು ಕೋರ್ಟ್​ನ ಆರನೇ ಮಹಡಿಯಿಂದ ಹಾರಿ ಆರೋಪಿ ಆತ್ಮಹತ್ಯೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.