ETV Bharat / state

ಹೆಚ್ಚುವರಿ ಡಿಸಿಎಂ ಹುದ್ದೆ ಬಗ್ಗೆ ಹೈಕಮಾಂಡ್ ತೀರ್ಮಾನಿಸಬೇಕು: ಸತೀಶ್ ಜಾರಕಿಹೊಳಿ - ಹೆಚ್ಚುವರಿ ಡಿಸಿಎಂ ಹುದ್ದೆ

ಹೆಚ್ಚುವರಿ ಡಿಸಿಎಂ ಹುದ್ದೆ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಸಚಿವ ಸತೀಶ್ ಜಾರಕಿಹೊಳಿ
ಸಚಿವ ಸತೀಶ್ ಜಾರಕಿಹೊಳಿ
author img

By ETV Bharat Karnataka Team

Published : Jan 5, 2024, 8:30 PM IST

ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ

ಬೆಂಗಳೂರು: ಹೆಚ್ಚುವರಿ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆ ಸೃಷ್ಟಿ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಬೇಕು. ಯಾವಾಗ ಮಾಡ್ತಾರೋ ನೋಡಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ಡಿಸಿಎಂ ಹುದ್ದೆಗಳ ಬಗ್ಗೆ ಸಚಿವ ರಾಜಣ್ಣ ಸಾಕಷ್ಟು ಬಾರಿ ಹೇಳಿದ್ದಾರೆ. ನಾವೂ ಕೂಡ ಹಿಂದೆ ಪದೇ ಪದೇ ಹೇಳಿದ್ದೇವೆ.‌ ಸಮುದಾಯವಾರು ಡಿಸಿಎಂ ಆಗಬೇಕು ಅಂತ ಇದೆ. ವರಿಷ್ಠರು ತೀರ್ಮಾನ ಮಾಡಬೇಕು. ಯಾವಾಗ ಮಾಡುತ್ತಾರೋ ನೋಡಬೇಕು.‌ ಅಲ್ಲಿವರೆಗೆ ನಾವು ಕಾಯಬೇಕು ಅಷ್ಟೇ. ನಾವೇನೂ ದೆಹಲಿಗೆ ಹೋಗಲ್ಲ. ಹೋದರೆ ಹೇಳುತ್ತೇನೆ ಎಂದರು.

ಸಿಎಂ ಸಿದ್ದರಾಮಯ್ಯ ಜೊತೆ ಏನಾದರೂ ಹೆಚ್ಚುವರಿ ಡಿಸಿಎಂ ಹುದ್ದೆ ಬಗ್ಗೆ ಮಾತನಾಡಿದ್ದೀರಾ ಎಂಬ ಪ್ರಶ್ನೆಗೆ, ಸಿಎಂ ಕೂಡ ಹೈಕಮಾಂಡ್ ಅಂತಿಮ ತೀರ್ಮಾನ ಮಾಡಬೇಕು ಅಂತ ಹೇಳುತ್ತಾರೆ. ಅವರು ಕೂಡ ಮೊದಲಿಗೆ 4 ಡಿಸಿಎಂ ಮಾಡಬೇಕು ಅಂತ ಹೇಳಿದ್ದರಂತೆ ಎಂದರು.

ಪಕ್ಷ ಸಂಘಟನೆ ಬಗ್ಗೆ ಚರ್ಚೆ: ರಾತ್ರಿ ಡಿನ್ನರ್ ಮೀಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿ, ಒಂದು ಪಕ್ಷದ ಮಂತ್ರಿಗಳು ಊಟಕ್ಕೆ ಸೇರಿದ್ದೀವಿ. ಅಂತಹ ವಿಶೇಷತೆ ಏನೂ ಇಲ್ಲ. ಊಟಕ್ಕೆ ಸೇರಿದಾಗ ಕೆಲವು ವಿಚಾರಗಳ ಜೊತೆಗೆ ಲೋಕಸಭಾ ಚುನಾವಣೆ, ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ದೇವೆ. ದಲಿತ ಸಿಎಂ ಮತ್ತು ಡಿಸಿಎಂ ವಿಚಾರವಾಗಿ ಚರ್ಚೆ ಮಾಡಿಲ್ಲ. ಎಸ್​ಸಿ, ಎಸ್​ಟಿ ಸಮಾವೇಶ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

ಬೇರೆಯವರು ಸಭೆ ಮಾಡುವುದನ್ನು ನೀವು (ಮಾಧ್ಯಮಗಳು) ತೋರಿಸಲ್ಲ. ನಾವು ಮಾಡಿದ್ದೇವೆ ಎಂದು ತೋರಿಸುತ್ತೀರಾ. ಅದನ್ನು ಹೈಪ್ ಮಾಡುತ್ತೀರಾ. ಹೊಟೇಲ್​ಗೆ ಬೇರೆಯವರು ಹೋಗುತ್ತಾರೆ ಅದನ್ನು ತೋರಿಸಲ್ಲ ಎಂದು ಸತೀಶ್​ ಜಾರಕಿಹೊಳಿ ಹಾಸ್ಯ ಚಟಾಕಿ ಹಾರಿಸಿದರು.

ಜಾತಿ ಜನಗಣತಿ ಬಗ್ಗೆ ಚರ್ಚೆ ಮಾಡಿದ್ದೀರಾ ಎಂಬ ಬಗ್ಗೆ ಕೇಳಿದಾಗ, ಜಾತಿ ಜನಗಣತಿ ಇನ್ನೂ ಬಂದೇ ಇಲ್ಲ. ಬರದೇ ಮಾತನಾಡುವುದು ಸರಿಯಲ್ಲ. ಲೋಕಸಭಾ ಚುನಾವಣೆಗೂ ಮುನ್ನವೇ ಸಮಾವೇಶಗಳನ್ನು ಮಾಡುತ್ತೇವೆ. ದಾವಣಗೆರೆಯಲ್ಲಿ ಎಸ್​ಸಿ, ಎಸ್​ಟಿ ಸಮಾವೇಶ ಮಾಡುತ್ತೇವೆ. ಹಿಂದೂ ಕಾರ್ಯಕರ್ತರ ಬಂಧನ ವಿಚಾರವನ್ನು ಬಿಜೆಪಿಯವರು ರಾಜಕೀಯಕ್ಕಾಗಿ ಬಳಸುತ್ತಿದ್ದಾರೆ. ನ್ಯಾಯಾಲಯದಲ್ಲಿ ತೀರ್ಮಾನ ಮಾಡಿಕೊಳ್ಳಬೇಕು. ಪ್ರತಿಭಟನೆ ಮಾಡುವುದರಿಂದ ಏನೂ ಪ್ರಯೋಜನ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ: ನಾವು ಕಾನೂನು ಬಿಟ್ಟು ಏನೂ ಮಾಡಿಲ್ಲ, ಬಿಜೆಪಿ ರಾಜಕೀಯವಾಗಿ ಬಳಸುತ್ತಿದೆ: ಪರಮೇಶ್ವರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.