ಬೆಂಗಳೂರು: ಸಿಲಿಕಾನ್ ಸಿಟಿ ಕೊರೊನಾ ಹಾಟ್‌ಸ್ಪಾಟ್ ಆಗುತ್ತಿದೆ. ಇದು ಸರ್ಕಾರ ಹಾಗೂ ಬಿಬಿಎಂಪಿಗೆ ನುಂಗಲಾರದ ತುತ್ತಾಗಿದೆ. ಎರಡಕ್ಕಿಂತ ಹೆಚ್ಚು ಕೊರೊನಾ ಸೋಂಕಿತರು ಕಂಡುಬಂದ ಏರಿಯಾವನ್ನು ಕಂಟೈನ್‌ಮೆಂಟ್ ಝೋನ್ ಎಂದು ಘೋಷಿಸಿ ಸೀಲ್‌ಡೌನ್ ಮಾಡುವುದರ ಜೊತೆಗೆ ಆ ಪ್ರದೇಶಗಳಲ್ಲಿ ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ.
ನಗರದಲ್ಲಿ ದಿನದಿಂದ ದಿನಕ್ಕೆ ಕಂಟೈನ್ಮೆಂಟ್ ಝೋನ್ಗಳು ಹೆಚ್ಚುತ್ತಲೇ ಇವೆ. ವಿಶೇಷ ಅಂದ್ರೆ, ಪ್ರತಿಷ್ಠಿತ ವಾರ್ಡ್ಗಳಲ್ಲಿ ಕೊರೊನಾ ಅಟ್ಟಹಾಸ ಜೋರಾಗಿದೆ. ಸೋಂಕಿತರು ಪತ್ತೆಯಾದ ಕೂಡಲೇ ಬಿಬಿಎಂಪಿ ಸಿಬ್ಬಂದಿ ಆ ಏರಿಯಾವನ್ನು ಸ್ಯಾನಿಟೈಸ್ ಮಾಡ್ತಿದ್ದಾರೆ. ಅಲ್ಲದೆ ಆ ಏರಿಯಾದಲ್ಲಿ ವಾಸಿಸುವ ಜನರು ನಮಗೂ ಈ ಸೋಂಕು ಎಲ್ಲಿ ಹರಡುತ್ತೋ ಎಂಬ ಭಯದಿಂದ ಮತ್ತೆ ಮತ್ತೆ ಸೋಂಕು ನಿವಾರಕ ಔಷಧಿ ಸಿಂಪಡಿಸುತ್ತಿದ್ದಾರೆ.
ಗಿರಿನಗರ, ಕತ್ರಿಗುಪ್ಪೆ, ಜಯನಗರ ಹಾಗೂ ಜರಗನಹಳ್ಳಿಯಲ್ಲಿ ಸದ್ಯ ಸೋಂಕಿತರು ಹೆಚ್ಚಾಗಿದ್ದು ಜನರು ಸ್ವಯಂಪ್ರೇರಿತರಾಗಿ ಕಂಟೈನ್‌ಮೆಂಟ್ ಪ್ರದೇಶಗಳಲ್ಲಿ ಸ್ಯಾನಿಟೈಸ್ ಮಾಡಿಸುತ್ತಿದ್ದಾರೆ.
ಕೆಲವು ದಿನಗಳಿಂದ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯ ಜೊತೆಗೆ ಕಂಟೈನ್ಮೆಂಟ್ ಝೋನ್ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಪ್ರತಿ ವಾರ್ಡಿಗೆ 25 ಲಕ್ಷ ರೂ ಹಣ ಮಂಜೂರು ಮಾಡಿದೆ. ಹೀಗಾಗಿ ಪ್ರತೀ ವಾರ್ಡ್ನಲ್ಲೂ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.