ಬೆಂಗಳೂರು: ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ಗೆ ಪರಾರಿಯಾಗಲು ಆಸ್ಪತ್ರೆಯವರು ಸಹಾಯ ಮಾಡಿರುವ ಕಾರಣ ನೋಟಿಸ್ ನೀಡಲಾಗಿತ್ತು. ಹೀಗಾಗಿ ಇಂದು ಬ್ಯಾಪ್ಟಿಸ್ ಆಸ್ಪತ್ರೆಯವರು ಚಾಮರಾಜಪೇಟೆ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದರು.
ಸದ್ಯ ಡಿಸಿಪಿ ನೇತೃತ್ವದಲ್ಲಿ ವಿಚಾರಣೆ ನಡೀತಿದೆ. ಪ್ರಕರಣ ಗಂಭೀರವಾದ ಕಾರಣ ಸದ್ಯ ಸಂಪತ್ತ್ ರಾಜ್ ಡಿಸ್ಚಾರ್ಜ್ ಆಗುವ ವೇಳೆ ಸಿಸಿಬಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿತ್ತು. ಆದರೆ, ಆಸ್ಪತ್ರೆಯವರು ನಿಯಮ ಉಲ್ಲಂಘನೆ ಮಾಡಿದ್ದಾರೆ. ಸಂಪತ್ ರಾಜ್ ಆಸ್ಪತ್ರೆಯಿಂದ ಪರಾರಿಯಾಗಲು ಸಹಾಯ ಮಾಡಿರುವ ಹಿನ್ನೆಲೆ ವಿಚಾರಣೆಗೆ ಕರೆಯಲಾಗಿದೆ. ಸದ್ಯ ಸಂಪತ್ ರಾಜ್ ಪ್ರಕರಣದ ಆರೋಪಿಯಾಗಿದ್ದಾರೆ. ಅವರನ್ನ ಹುಡುಕುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.