ETV Bharat / state

ಲಾಕ್​ಡೌನ್​ ಸಮಯದಲ್ಲಿ ಅಪಘಾತ: ಮತ್ತೊಬ್ಬ ನಟಿಗೆ ಸಂಕಷ್ಟ? - Don Muthappa Rai's son Ricci

ಸ್ಯಾಂಡಲ್‌ವುಡ್‌ನ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ನಟಿಯರು ಈಗಾಗಲೇ ತೊಂದರೆಗೆ ಸಿಲುಕಿದ್ದಾರೆ. ಈಗ ಮತ್ತೊಬ್ಬ ಸ್ಟಾರ್​ ನಟಿಗೂ ಕಂಟಕ ಎದುರಾಗುವ ಸಾಧ್ಯತೆ ಇದೆ.

dsd
ಮತ್ತೊಬ್ಬ ನಟಿಗೆ ಸಿಸಿಬಿ ಖೆಡ್ಡಾ..?
author img

By

Published : Oct 9, 2020, 10:24 AM IST

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್ ಜಾಲದ ನಂಟು ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಬಿ ತನಿಖಾಧಿಕಾರಿಗಳು ಮುತ್ತಪ್ಪ ರೈ ಮಗ ರಿಕ್ಕಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬಹುಭಾಷಾ ನಟಿಯೊಬ್ಬಳ ಪಾತ್ರ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ನಟಿಯರಾದ ಸಂಜನಾ ಹಾಗೂ ರಾಗಿಣಿ ಅರೆಸ್ಟ್ ಆದ ಬಳಿಕ ಕೇವಲ ಪೆಡ್ಲರ್​ಗಳ ವಿಚಾರಣೆ ನಡೀತಿತ್ತು. ಈಗ ಅಧಿಕಾರಿಗಳು ಮತ್ತೊಬ್ಬ ನಟಿಯ ವಿಚಾರಣೆ ನಡೆಸುವ ಮೊದಲು ಬಹುತೇಕ ಸಾಕ್ಷ್ಯಗಳ ಕಲೆ ಹಾಕಲು ಮುಂದಾಗಿದ್ದಾರೆ. ಪಕ್ಕಾ ಸಾಕ್ಷ್ಯ ಸಿಕ್ಕಿದ್ದೇ ಆದಲ್ಲಿ ಸಂಜನಾ ಹಾಗೂ ರಾಗಿಣಿ ಜೊತೆಗೆ ಮತ್ತೊಬ್ಬ ಸ್ಟಾರ್ ನಟಿ ಸಿಕ್ಕಿಬೀಳುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ. ಸಿಸಿಬಿ ಪೊಲೀಸರು ಲಾಕ್​ಡೌನ್ ಟೈಮ್​ನಲ್ಲಿ ನಡೆದ ‘ಆ್ಯಕ್ಸಿಡೆಂಟ್‌’ ಕೇಸ್‌ಗೆ ಮರುಜೀವ ಕೊಡಲು ಮುಂದಾಗಿದ್ದಾರೆ ಎನ್ನುತ್ತಿವೆ ಮೂಲಗಳು.

ಲಾಕ್​ಡೌನ್ ವೇಳೆ ನಡೆದ ಅಪಘಾತ ಪ್ರಕರಣದಲ್ಲಿ ಓರ್ವನನ್ನು ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ. ಅಪಘಾತ ನಡೆದಾಗ ಕಾರಿನಲ್ಲಿದ್ದ ಓರ್ವನನ್ನು ನಿನ್ನೆ ವಿಚಾರಣೆಗೆ ಒಳಪಡಿಸಲಾಗಿದೆ. ಅಪಘಾತ ನಡೆದ ದಿನ ಎ 6 ಆರೋಪಿ ಆದಿತ್ಯ ಆಳ್ವ ಆಯೋಜಿಸಿದ್ದ ರೆಸಾರ್ಟ್​ನಲ್ಲಿ ಪಾರ್ಟಿ ಮುಗಿಸಿ ಬರುವ ವೇಳೆ ಈ ಅವಘಡ ಸಂಭವಿಸಿತ್ತಾ ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿದೆ. ಹೀಗಾಗಿ ಸಿಸಿಬಿ ಯಾವುದೇ ಕ್ಷಣದಲ್ಲಿಯೂ ಆ ನಟಿಗೆ‌ ನೋಟಿಸ್ ನೀಡಿ ವಿಚಾರಣೆಗೆ ಕರೆಯುವ ಸಂಭವ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.