ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕುಖ್ಯಾತ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಹೌದು, 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬಿಗ್ ಡ್ರಗ್ಸ್ ಪೆಡ್ಲರ್ನೊಬ್ಬನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಕುಖ್ಯಾತ ಬಿಗ್ ಡ್ರಗ್ ಪೆಡ್ಲರ್ "VT" ಬಂಧಿತ ಆರೋಪಿ.
ಈತ ನೈಜೀರಿಯಾ ದೇಶದವನಾಗಿದ್ದು, ಬ್ಯುಸಿನೆಸ್ ಪಾಸ್ಪೋರ್ಟ್ನಿಂದ ಬೆಂಗಳೂರಿಗೆ ಬಂದಿದ್ದ. ಆದರೆ ಪಾಸ್ಪೋರ್ಟ್ ಅವಧಿ ಮುಗಿದರೂ ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿ ಬಹುದೊಡ್ಡ ಡ್ರಗ್ಸ್ ನೆಟ್ವರ್ಕ್ ಆಪರೇಟ್ ಮಾಡ್ತಿದ್ದ. ತನ್ನ ಗಿರಾಕಿಗಳಿಗೆ ಪೆಡ್ಲರ್ ಮುಖಾಂತರ ಪೆಡ್ಲಿಂಗ್ ಮಾಡಿ ಅಧಿಕ ಹಣ ಗಳಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿ "VT"ಯ ಡ್ರಗ್ಸ್ ಡೀಲ್ ಆಪರೇಟ್ ಸಿಸ್ಟಮ್ ರಿವೀಲ್...
ಈತ ಬರೋಬ್ಬರಿ 42 ಜನ ಡ್ರಗ್ಸ್ ಪೆಡ್ಲರ್ಗಳ ಬಹುದೊಡ್ಡ ನೆಟ್ವರ್ಕ್ ಹೊಂದಿ ರಾಜಕಾರಣಿಗಳ ಮಕ್ಕಳು, ಸಿನಿಮಾ ನಟ-ನಟಿಯರು, ಬೆಂಗಳೂರಿನ ಪ್ರತಿಷ್ಠಿತ ಎಂಜಿನಿಯರಿಂಗ್, ಮೆಡಿಕಲ್, ಬ್ಯುಸಿನೆಸ್ ಕಾಲೇಜುಗಳಿಗೆ ಡ್ರಗ್ಸ್ ಪೂರೈಕೆ ಮಾಡ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿಗೆ ಈ ಕಾಲೇಜ್ಗಳು ಡ್ರಗ್ಸ್ ಡೀಲ್ ಅಡ್ಡವಾಗಿದ್ದು, ಕಳೆದ 7 ವರ್ಷಗಳಿಂದ ಡ್ರಗ್ಸ್ ಡೀಲ್ ನಡೆಸ್ತಿದ್ದ ಎಂದು ತಿಳಿದು ಬಂದಿದೆ.
ಅಷ್ಟು ಮಾತ್ರವಲ್ಲದೆ ಲಾಕ್ಡೌನ್ ವೇಳೆ ‘VT’ಯ ಡ್ರಗ್ಸ್ಗೆ ಸಖತ್ ಡಿಮ್ಯಾಂಡ್ ಇದ್ದು, ಬಂಧಿತ ಡ್ರಗ್ಸ್ ಪೆಡ್ಲರ್ಗಳಾದ ಲೂಮ್ ಪೆಪ್ಪರ್ ಮತ್ತು ಪ್ರತೀಕ್ ಶೆಟ್ಟಿಗೆ ಲಿಂಕ್ ಹೊಂದಿ ಇವರ ಮೂಲಕ ಕೂಡ ನಟಿ ರಾಗಿಣಿ, ಸಂಜನಾಗೆ ಸಪ್ಲೈ ಮಾಡಿದ್ದಾನೆ ಎನ್ನಲಾಗಿದೆ.
ಹಾಗೆಯೇ ಪೊಲೀಸರಿಗೆ ಅನುಮಾನ ಬಾರಬಾರದೆಂದು ಮನೆಯಲ್ಲೇ ವೇವ್ಹಿಂಗ್ ಮಷಿನ್ ಇಟ್ಟುಕೊಂಡು ಡ್ರಗ್ಸ್ ತೂಕ ಮಾಡಿ ಪ್ಯಾಕಿಂಗ್ ಮಾಡ್ತಿದ್ದ. ತದ ನಂತರ ತನ್ನ ನೆಟ್ವರ್ಕ್ ಗ್ಯಾಂಗ್ ಮೂಲಕ ಪೂರೈಕೆ ಮಾಡ್ತಿದ್ದ. ಸದ್ಯ ಆರೋಪಿ ಬೆಂಗಳೂರು ಪೊಲೀಸರ ವಶದಲ್ಲಿದ್ದು, ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್ನಲ್ಲಿ ಲಾಕ್ ಆಗಿರುವ ಪೆಡ್ಲರ್ಗಳ ಜೊತೆ ಲಿಂಕ್ ಹೊಂದಿರುವ ಕಾರಣ ಹೆಚ್ಚಿನ ವಿಚಾರಣೆಗೆ ಪೊಲೀಸರು ಒಳಪಡಿಸಿದ್ದಾರೆ.