ETV Bharat / state

ಡ್ರಗ್ಸ್​ ಮಾಫಿಯಾ: ಸಿಸಿಬಿಯಿಂದ ಉದ್ಯಮಿ ಅರವಿಂದ್ ರೆಡ್ಡಿ ವಿಚಾರಣೆ - ಸಿಸಿಬಿ ಅಧಿಕಾರಿಗಳಿಂದ ಅರವಿಂದ್ ರೆಡ್ಡಿ ವಿಚಾರಣೆ

ಚಂದನವನಕ್ಕೆ ಮಾದಕವಸ್ತು ಜಾಲದ ನಂಟಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕನಾಗಿದ್ದ ಉದ್ಯಮಿ ಅರವಿಂದ್ ರೆಡ್ಡಿಯನ್ನ ಸಿಸಿಬಿ ವಿಚಾರಣೆ ನಡೆಸಿದೆ.

andalwood Drug Case
ಸ್ಯಾಂಡಲ್​​ವುಡ್ ಡ್ರಗ್ ಕೇಸ್
author img

By

Published : Oct 14, 2020, 1:44 PM IST

ಬೆಂಗಳೂರು: ಸ್ಯಾಂಡಲ್​​ವುಡ್​ಗೆ ಡ್ರಗ್ ಲಿಂಕ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕನಾಗಿದ್ದ ಉದ್ಯಮಿ ಅರವಿಂದ್ ರೆಡ್ಡಿಯನ್ನ ಸಿಸಿಬಿ ಡಿಸಿಪಿ ರವಿಕುಮಾರ್ ವಿಚಾರಣೆ ನಡೆಸಿದ್ದಾರೆ. ಡ್ರಗ್ಸ್​ ಪ್ರಕರಣದಲ್ಲಿ ಸಿಲುಕಿರುವ ಅರವಿಂದ್ ರೆಡ್ಡಿ ನಟಿ ರಾಗಿಣಿ ಜೊತೆ ಬಹಳ ಆತ್ಮೀಯರಾಗಿದ್ದರು ಎನ್ನಲಾಗ್ತಿದೆ.

ಕೆಪಿಎಲ್​ ಬೆಟ್ಟಿಂಗ್ ಹಗರಣದಲ್ಲೂ ಅರವಿಂದ್ ಹೆಸರು ಕೇಳಿ ಬಂದಿದ್ದು, ಸಿಸಿಬಿ ವಿಚಾರಣೆಗೆ ಒಳಪಟ್ಟಿದ್ರು. ಸದ್ಯ ಡ್ರಗ್ಸ್​ ಪ್ರಕರಣದಲ್ಲೂ ಇವರ ಹೆಸರು ಕೇಳಿ ಬಂದಿರುವುದರಿಂದ ಸಿಸಿಬಿ ವಿಚಾರಣೆ ನಡೆಸಿ, ಎರಡು ಮೊಬೈಲ್​ಗಳನ್ನ ವಶಕ್ಕೆ ಪಡೆಯಲಾಗಿದೆ. ಮೊಬೈಲ್​ಗಳನ್ನ ರಿಟ್ರೀವ್​​​​​​ಗೆ ಕಳಿಸಿದ್ದು, ಮತ್ತಷ್ಟು ತನಿಖೆ ನಡೆಸಲಿದ್ದಾರೆ.

ಪ್ರಾಥಮಿಕ ತನಿಖೆ ವೇಳೆ ನಟಿ ರಾಗಿಣಿ ಜೊತೆ ಕ್ರಿಕೆಟ್ ಪಂದ್ಯವಾದ ಬಳಿಕ ಮಾರತ್ ಹಳ್ಳಿಯಲ್ಲಿರೋ ಈಜೋನ್ ಕ್ಲಬ್ ನಲ್ಲಿ ಪಾರ್ಟಿ ಮಾಡಿರುವ ವಿಚಾರ ಬಯಲಾಗಿದೆ. ಹೀಗಾಗಿ ಪಾರ್ಟಿಯಲ್ಲಿ ಡ್ರಗ್ಸ್​ ಸಪ್ಲೈ ಮಾಡಲಾಗಿತ್ತಾ ಅನ್ನೋದ್ರ ಬಗ್ಗೆ ಅಧಿಕಾರಿಗಳು ಪ್ರಶ್ನೆ ಕೇಳಿದ್ದಾರೆ. ಸರಿಯಾದ ಉತ್ತರ ನೀಡದ ಕಾರಣ ಮೊಬೈಲ್ ರಿಟ್ರೀವ್ ಗೆ ಕಳಿಸಲಾಗಿದ್ದು, ಅಗತ್ಯ ಬಿದ್ದರೆ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ ಎನ್ನಲಾಗ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.