ETV Bharat / state

ಸ್ಯಾಂಡಲ್​ವುಡ್​​ ನಿರ್ದೇಶಕ ಪ್ರಶಾಂತ ರಾಜ್ ಮೇಲೆ ಲಕ್ಷಾಂತರ ರೂ. ವಂಚನೆ ಆರೋಪ

ನಿರ್ದೇಶಕ ಪ್ರಶಾಂತ ರಾಜ್ ವಿರುದ್ಧ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

bng
ಪ್ರಶಾಂತ ರಾಜ್ ಮೇಲೆ ಲಕ್ಷಾಂತರ ರೂ. ವಂಚನೆ ಆರೋಪ
author img

By

Published : Dec 15, 2019, 9:52 AM IST

ಬೆಂಗಳೂರು: ಸ್ಯಾಂಡಲ್​ವುಡ್​​ನ ಸಿನಿಮಾ ನಿರ್ದೇಶಕ ಪ್ರಶಾಂತ ರಾಜ್ ವಿರುದ್ಧ ಲಕ್ಷಾಂತರ ರೂ. ವಂಚನೆ ಪ್ರಕರಣ ದಾಖಲಾಗಿದೆ.

bng
ದೂರಿನ ಪ್ರತಿ

ವಂಚನೆ ಪ್ರಕರಣವೊಂದರಲ್ಲಿ‌ ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದ ತಮ್ಮ ಮಗನನ್ನು ಬಿಡುಗಡೆ ಮಾಡಿಸುತ್ತೇನೆ ಎಂದು ನಂಬಿಸಿ ಲಕ್ಷಾಂತರ ರೂ. ವಂಚಿಸಿದ್ದಾರೆ ಎಂದು ನಗರದ ಹೆಚ್​ಎಎಲ್ ಪೊಲೀಸ್ ಠಾಣೆಯಲ್ಲಿ ಸಂಬಂಧಿಕರಾದ ಗಿರಿಜಮ್ಮ ಎಂಬುವರು ದೂರು ನೀಡಿದ್ದಾರೆ. ಅಲ್ಲದೆ ಪ್ರಶಾಂತ ರಾಜ್ ಅವರ ಸಹೋದರ, ನಿರ್ಮಾಪಕ ನವೀನ್ ರಾಜ್ ಹಾಗೂ‌ ಮಾವ ನಾಗರಾಜ್ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಇವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವ್ಯಕ್ತಿಯೊಬ್ಬರಿಗೆ ವಂಚನೆ ಎಸಗಿದ ಆರೋಪದಡಿ ಸಿಸಿಬಿ ಪೊಲೀಸರು ಕಳೆದ ಡಿ‌.22ರಂದು ಇಬ್ಬರನ್ನು ಬಂಧಿಸಿದ್ದರು.

ಪ್ರಶಾಂತ ರಾಜ್ ಮೇಲೆ ಲಕ್ಷಾಂತರ ರೂ. ವಂಚನೆ ಆರೋಪ

ಬಂಧಿತರಲ್ಲಿ ಓರ್ವ ತಮ್ಮ ಮಗನಾಗಿದ್ದು, ಆತನಿಗೆ ಜಾಮೀನು ಕೊಡಿಸುವುದಾಗಿ ಹೇಳಿ ಪ್ರಶಾಂತ ರಾಜ್ ರಾತ್ರಿ ನಮ್ಮ ಮನೆಗೆ ಬಂದು ಭರವಸೆ ನೀಡಿದ್ದರು. ಅಲ್ಲದೆ ಮಗನನ್ನು ಕಾನೂನು ಕಟ್ಟಳೆಯಿಂದ ಪಾರು ಮಾಡಲು 20 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. 10 ಲಕ್ಷ ರೂ. ಹಾಗೂ 542 ಗ್ರಾಂ. ಚಿನ್ನಾಭರಣವನ್ನು ನನ್ನಿಂದ ಪಡೆದಿದ್ದಾರೆ ಎಂದು ದೂರಿನಲ್ಲಿ ಗಿರಿಜಮ್ಮ ಉಲ್ಲೇಖಿಸಿದ್ದಾರೆ.

ಈ ಸಂಬಂಧ ಮನೆಗೆ ಬಂದು ಮಾತುಕತೆ ನಡೆಸಿದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಸಿಸಿಬಿ ಪೊಲೀಸರಿಂದ ಬಂಧಿತರಾಗಿದ್ದ ಆರೋಪಿಗಳು ಕಾನೂನು‌ ಪ್ರಕಾರವೇ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಇತ್ತ ಬಿಡುಗಡೆ ಮಾಡಿಸುತ್ತೇವೆ ಎಂದು ಹಣ ಪಡೆದಿದ್ದ ಆರೋಪಿಗಳು ನಾಪತ್ತೆಯಾಗಿದ್ದಾರೆ. ಅಲ್ಲದೆ ಡಿ.24ರಂದು ಪೋನ್ ಮಾಡಿದ ಆರೋಪಿಗಳು ಮತ್ತೆ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ‌‌. ಹಣ ಕೊಡಲು ನಿರಾಕರಿಸಿದಾಗ‌ ನಿಮ್ಮ ಮನೆ ಮೇಲೆ ಐಟಿ ರೈಡ್ ಆಗಲಿದೆ. ನಿಮ್ಮನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಧಮಕಿ ಹಾಕಿದ್ದಾರೆ ಎಂದು ಆರೋಪಿಸಿದ ಗಿರಿಜಮ್ಮ ಹೆಚ್​ಎಎಲ್ ಪೊಲೀಸ್​​​ ಠಾಣೆಯಲ್ಲಿ ದೂರು ನೀಡಿದ್ದಾರೆ.

Intro:Body:
ಸ್ಯಾಂಡಲ್ ವುಡ್ ಭರವಸೆಯ ನಿರ್ದೇಶಕನಿಂದ‌ ಲಕ್ಷಾಂತರ ರೂ..ದೋಖಾ...! ಹಾಗಾದರೆ ಆ‌ ನಿರ್ದೇಶಕ ಯಾರು ಗೊತ್ತಾ ?

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಆತ ಬೆರಳೆಣಿಕೆ ಸಿನಿಮಾ ಮಾಡಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದ.. ಲವ್ ಗುರು, ಗಾನಬಜಾನಾ ಹಾಗೂ ಗಣೇಶ್ ಅಭಿಯನಯದ ಜೂಮ್, ಆರೆಂಜ್ ಸಿನಿಮಾ ಮಾಡಿ ಭರವಸೆ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ.. ಆದರೆ ಅದ್ಯಾಕೋ ಏನು ಒಳ್ಳೆ ದಾರಿಯಲ್ಲಿದ್ದ ಆತ ಹಣಕ್ಕಾಗಿ ಅಡ್ಡದಾರಿ ತುಳಿದ ಆರೋಪ ಕೇಳಿ ಬಂದಿದೆ..

ವಂಚನೆ ಪ್ರಕರಣವೊಂದರಲ್ಲಿ‌ ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದ ಮಗನನ್ನು ಬಿಡುಗಡೆ ಮಾಡಿಸುತ್ತೇನೆ ಎಂದು ಹುಸಿ ಆಸೆ ಹುಟ್ಟಿಸಿ ಸಂಬಂಧಿಕರಿಗೆ ಲಕ್ಷಾಂತರ ರೂ.ಟೋಪಿ ಹಾಕಿದ್ದಾರೆ ಎಂದು ಎಚ್.ಎಎಲ್ ಪೊಲೀಸ್ ಠಾಣೆಯಲ್ಲಿ ಗಿರಿಜಮ್ಮ ಎಂಬುವರು ದೂರು ನೀಡಿದನ್ವಯ ಪ್ರಕರಣ ದಾಖಲಾಗಿದೆ..
ಪ್ರಶಾಂತ ರಾಜ್ ಹತ್ತಿರ ಸಂಬಂಧಿಕರಿಗೆ‌ ಮೋಸ ಹಾಕಿದ ನಿರ್ದೇಶಕ.. ಈತನ ಜೊತೆಗೆ ಸಹೋದರ ನಿರ್ಮಾಪಕ ನವೀನ್ ರಾಜ್ ಹಾಗೂ‌ ಮಾವ ನಾಗರಾಜ್ ವಿರುದ್ಧ ಎಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನಾಪತ್ತೆಯಾಗಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ..
ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವ್ಯಕ್ತಿಯೊಬ್ಬರಿಗೆ ವಂಚನೆ ಎಸಗಿದ ಆರೋಪದಡಿ ಸಿಸಿಬಿ ಪೊಲೀಸರು ಕಳೆದ ಡಿ‌.22ರಂದು ಬಂಧಿಸಿ ಇಬ್ಬರನ್ನು ಜೈಲಿಗೆ ಅಟ್ಟಿದ್ದರು.. ಈ ಸಂಬಂಧ‌‌ ಮಗನಿಗೆ ಜಾಮೀನು ಕೊಡಿಸುವುದಾಗಿ ಹೇಳಿ ಸಂಬಂಧಿಕರಾಗಿದ್ದ ವೃದ್ದೆ ಗಿರಿಜಮ್ಮ‌ ಗೆ ಅದೇ ದಿನ ರಾತ್ರಿ ಮನೆಗೆ ಬಂದು ಭರವಸೆ ನೀಡಿದ್ದಾರೆ.‌ ನಿಮ್ಮ ಮಗನನ್ನು ಕಾನೂನು ಕಟ್ಟಳೆಯಿಂದ ಪಾರು ಮಾಡಲು 20 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಾರೆ.. 10 ಲಕ್ಷ ರೂ. ಹಾಗೂ 542 ಗ್ರಾಂ.ಚಿನ್ನಾಭರಣವನ್ನು ಗಿರಿಜಮ್ಮ ನಿಂದ ಪಡೆದಿದ್ದಾರೆ.. ಈ ಸಂಬಂಧ ಮನೆಗೆ ಬಂದು ಮಾತುಕತೆ ನಡೆಸಿದ ದೃಶ್ಯಾವಳಿಯನ್ನು ಸಿಸಿಟಿವಿಯಲ್ಲಿ ಸೆರೆಯಾಗಿದೆ..
ಸಿಸಿಬಿ ಪೊಲೀಸರಿಂದ ಬಂಧಿತ ಆರೋಪಿಗಳ ಕಾನೂನು‌ ಪ್ರಕಾರವೇ ಜಾಮೀನು ಪಡೆದು ಆರೋಪಿಗಳು ಬಿಡುಗಡೆಯಾಗಿದ್ದಾರೆ. ಬಿಡುಗಡೆ ಮಾಡಿಸುತ್ತೇವೆ ಎಂದು ಹಣ ಪಡೆದಿದ್ದ ಆರೋಪಿಗಳು ನಾಪತ್ತೆಯಾಗಿದ್ದಾರೆ. ಅನಂತರ ಡಿ.24 ರಂದು ಗಿರಿಜಮ್ಮ ಪೋನ್ ಮಾಡಿದ ಆರೋಪಿಗಳು ಮತ್ತೆ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ‌‌. ಹಣ ಕೊಡಲು ನಿರಾಕರಿಸಿದಾಗ‌ ನಿಮ್ಮ‌ ಮನೆಗೆ ಐಟಿ ರೈಡ್ ಆಗಲಿದೆ.. ನಿಮ್ಮನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಧಮಕಿ ಹಾಕಿದ್ದಾರೆ. ವಂಚನೆ ವಿಚಾರ ತಿಳಿದು ಗಿರಿಜಮ್ಮ ಎಚ್.ಎ.ಎಲ್ ಠಾಣೆಯಲ್ಲಿ ದೂರು ನೀಡುತ್ತಿದ್ದಂತೆ ಆರೋಪಿಗಳು‌ ಪೋನ್ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾರೆ..
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.