ಬೆಂಗಳೂರು: ನಗರದಲ್ಲಿ ಹೇರ್ ಕಟಿಂಗ್ ಸಲೂನ್‌ನ ಮಾಲೀಕರೊಬ್ಬರು ಕೆಲಸ ಕಳೆದುಕೊಂಡ ಐಟಿ ಉದ್ಯೋಗಿಗಳು ಮತ್ತು ಈಶಾನ್ಯ ರಾಜ್ಯ ಹಾಗೂ ನೇಪಾಳ ಮೂಲದ ವಲಸೆ ಕಾರ್ಮಿಕರಿಗೆ ತಮ್ಮ ಸಲೂನ್‌ನಲ್ಲಿ ಆಶ್ರಯ ನೀಡಿದ್ದಾರೆ.
ಲಾಕ್‌ಡೌನ್ ಘೋಷಣೆಯಾದ ಕ್ಷಣದಿಂದ ಹಲವಾರು ಕಡೆಯಿಂದ ದೂರುಗಳು ಬಂದವು. ಸಾಕಷ್ಟು ಜನರು ನಿರುದ್ಯೋಗಿಗಳಾದರು. ಕೆಲವರನ್ನು ಬಾಡಿಗೆ ಮನೆಗಳಿಂದ ಹೊರ ಹಾಕಲಾಯಿತು ಎಂದು ಸಲೂನ್ ಮಾಲೀಕ ರಾಹುಲ್ ರಾಯ್ ಹೇಳಿದ್ದಾರೆ.
ಈಶಾನ್ಯ ರಾಜ್ಯಗಳು ಮತ್ತು ನೇಪಾಳ ಮೂಲದವರಿಗೆ ಹೇರ್ ಕಟಿಂಗ್ ತರಬೇತಿ ನೀಡುವ ನನ್ನ ಸಲೂನ್ಅನ್ನು ಆಶ್ರಯ ಮನೆಯನ್ನಾಗಿ ಪರಿವರ್ತಿಸಿದ್ದೇನೆ ಎಂದು ಹೇಳಿದ್ದಾರೆ.
ಲಾಕ್‌ಡೌನ್ ಘೋಷಣೆಯಾದ ನಂತರ ನಾನು ಕೆಲಸ ಕಳೆದುಕೊಂಡೆ. ಮಾಲೀಕರು ಕೂಡ ಬಾಡಿಗೆ ಮನೆಯಿಂದ ನನ್ನನ್ನು ಹೊರ ಹಾಕಿದರು. ಒಂದು ವಾರ ಕಾಲು ನಾನು ಹತ್ತಿರದ ಕೆರೆ ದಂಡೆಯಲ್ಲೇ ವಾಸ ಮಾಡಿದ್ದೇನೆ. ಫೇಸ್‌ಬುಕ್ ಮೂಲಕ ರಾಹುಲ್ ರಾಯ್ ಅವರನ್ನು ಸಂಪರ್ಕಿಸಿದೆ. ಇತರರೊಂದಿಗೆ ನನಗೂ ಕೂಡ ಜಾಗ ನೀಡಿದರು ಎಂದು ಆಶ್ರಯ ಪಡೆದ ವ್ಯಕ್ತಿಯೋರ್ವ ಹೇಳಿದ್ದಾನೆ.