ಬೆಂಗಳೂರು: ಸಕಾಲ ಸಪ್ತಾಹಕ್ಕೆ ಬೆಂಗಳೂರು ನಗರ ಜಿಲ್ಲೆಯ ಮಹದೇವಪುರ ಬಿಬಿಎಂಪಿ ಕಚೇರಿಯಲ್ಲಿ ಸಕಾಲ ಮಿಷನ್ ಅಪರ ನಿರ್ದೇಶಕಿ ಡಾ.ಬಿ ಆರ್.ಮಮತಾರವರು ಚಾಲನೆ ನೀಡಿದರು.
ಮಹದೇವಪುರ ಹಾಗೂ ಕೆ.ಆರ್. ಪುರ ಪ್ರದೇಶಗಳಲ್ಲಿ ವಿವಿಧ ಇಲಾಖೆಗಳಲ್ಲಿ ಸಕಾಲ ವ್ಯವಸ್ಥೆಯಡಿ ಅರ್ಜಿ ವಿಲೇಯ ಪರಿಶೀಲನೆ ನಡೆಸಿದರು. ಕೆ.ಆರ್. ಪುರ ತಾಲೂಕು ಕಚೇರಿಯಲ್ಲಿ ಸಕಾಲ ಸೇವೆಗಳ ಅರ್ಜಿ ಸ್ವೀಕೃತಿಯ ಅವ್ಯವಸ್ಥೆ ಕುರಿತು ತೀರ್ವ ಅಸಮಾದಾನ ವ್ಯಕ್ತಪಡಿಸಿದ ಡಾ. ಬಿ.ಆರ್. ಮಮತಾ ಅವರು ಬಾಕಿಯಿರುವ ಅರ್ಜಿಗಳನ್ನು ಸಕಾಲ ಸಪ್ತಾಹ ಆಚರಣೆ ಅವಧಿಯಲ್ಲಿ ಕಡ್ಡಾಯವಾಗಿ ವಿಲೇವಾರಿ ಮಾಡುವಂತೆ ಕಚೇರಿಯ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.
ಕೆ.ಆರ್.ಪುರ ತಾಲೂಕು ಕಚೇರಿಯಲ್ಲಿ ಸಕಾಲ ಸಪ್ತಾಹ ಆಚರಣೆ ಕುರಿತು ಪ್ರದರ್ಶನ ಫಲಕ ಹಾಕದೇ ಇರುವುದನ್ನು ಗಮನಿಸಿದ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಾರ್ವಜನಿಕರಿಗೆ ಸಕಾಲದಡಿಯಲ್ಲಿ ಒದಗಿಸಲಾಗುವ ಸೇವೆಗಳ ಬಗ್ಗೆ ಅರಿವು ಮೂಡಿಸುವ ಸಪ್ತಾಹದ ಮೂಲ ಉದ್ದೇಶಕ್ಕೆ ಇದು ವಿರುದ್ಧವಾಗಿದೆ ಎಂದರು. ಪೂರ್ವ ತಾಲೂಕು ಭೂ ದಾಖಲೆಗಳು ವಿಭಾಗದ ಅವವ್ಯಸ್ಥೆ ಕಂಡು ಮಿಷನ್ ಅಪರ ನಿರ್ದೇಶಕರಾದ ಡಾ. ಬಿ.ಆರ್ ಮಮತಾ ಅವರು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಸಕಾಲ ಸಪ್ತಾಹ ಅಂಗವಾಗಿ ತಾಲೂಕು ಕಚೇರಿ ವಿವಿಧ ದಾಖಲಾತಿಗಳು ವಿಭಾಗಳಿಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಮತ್ತು ಕರ್ತವ್ಯ ಲೋಪ ಎಸಗಿರುವ ಸೂಕ್ತ ಅಧಿಕಾರಿಗಳು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸರ್ವೇ ಶಾಖೆಯಲ್ಲಿ ಅರ್ಜಿಗಳ ವಿಲೆಯಲ್ಲಿ ಅವ್ಯವಸ್ಥೆಯ ವಿರುದ್ಧ ಅಸಮಾಧಾನ ಹೊರಹಾಕಿ ಅಧಿಕಾರಿಗಳಿಗೆ ಅರ್ಜಿ ವಿಲೇವಾರಿ ಮಾಡುವಂತೆ ಸೂಚಿಸಿದರು.
ನಂತರ ಮಾತನಾಡಿದ ಸಕಾಲ ಮಿಷನ್ ಅಪರ ನಿರ್ದೇಶಕರಾದ ಡಾ. ಬಿ ಆರ್. ಮಮತಾ, ಸಕಾಲ ಸಪ್ತಾಹದ ಅವಧಿಯಲ್ಲಿ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ಯಾವುದೇ ಸಬೂಬು ನೀಡದೆ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಪರಿಶೀಲನಾ ಭೇಟಿ ಕೈಗೊಳ್ಳಲಾಗುವುದು. ಅಷ್ಟರಲ್ಲಿ ವ್ಯವಸ್ಥೆಗೆ ಸುಧಾರಣೆ ತರದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಇದನ್ನೂ ಓದಿ: ಡಿ.12-19ರ ವರೆಗೆ 'ಸಕಾಲ ಸಪ್ತಾಹ' ಆಚರಣೆಗೆ ಸರ್ಕಾರ ತೀರ್ಮಾನ