ETV Bharat / state

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಸದಾಶಿವ ಶೆಣೈ ಅಧಿಕಾರ ಸ್ವೀಕಾರ

ಸದಾಶಿವ ಶೆಣೈ ಅವರು ಮುದ್ರಣ, ದೃಶ್ಯ, ಬೆಳ್ಳಿ ಪರದೆ.. ಹೀಗೆ ಮಾಧ್ಯಮದ ಎಲ್ಲಾ ಆಯಾಮಗಳಲ್ಲೂ ಕೆಲಸ ಮಾಡಿರುವ ಅನುಭವಿ. ಇದೀಗ ಹಿರಿಯ ಪತ್ರಕರ್ತನನ್ನು ಸರ್ಕಾರ ಗುರುತಿಸಿದ್ದು ಪ್ರತಿಷ್ಠಿತ ಮಾಧ್ಯಮ ಅಕಾಡೆಮಿ ಜವಾಬ್ದಾರಿ ನೀಡಿದೆ.

author img

By

Published : Jul 26, 2021, 6:08 PM IST

sadashiv-shanai-elected-as-a-president-of-karnataka-media-academy
ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರಾಗಿ ಸದಾಶಿವ್ ಶಣೈ ಆಯ್ಕೆ

ಬೆಂಗಳೂರು: ಕನ್ನಡ ಪತ್ರಿಕೋದ್ಯಮದಲ್ಲಿ ಅನೇಕ ವರ್ಷಗಳ ಕಾಲ ಕಾರ್ಯನಿರ್ವಹಿಸಿರುವ ಹಿರಿಯ ಪತ್ರಕರ್ತ ಸದಾಶಿವ ಶೆಣೈ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಿನಿಮಾ ಲೋಕದ ನಡುವಿನ ವಿಶೇಷ ಸಂಬಂಧವನ್ನು ಬರೆಯುತ್ತಿದ್ದ ಕಣಜದಂತಿರುವ ಅನುಭವಿ ಪತ್ರಕರ್ತರ ಸಾಲಿನಲ್ಲಿ ಶೆಣೈ ಬರುತ್ತಾರೆ. ಇವರು ಪತ್ರಿಕೋದ್ಯಮದಲ್ಲಿ ಸರಿಸುಮಾರು ಮೂರು ದಶಕಗಳ ಕಾಲ ಕೆಲಸ ಮಾಡಿದ್ದಾರೆ.‌

ಸದಾಶಿವ ಶೆಣೈ ಅವರು ಮುದ್ರಣ, ದೃಶ್ಯ, ಬೆಳ್ಳಿ ಪರದೆ.. ಹೀಗೆ ಮಾಧ್ಯಮದ ಎಲ್ಲಾ ಆಯಾಮಗಳಲ್ಲೂ ಕೆಲಸ ಮಾಡಿದ್ದಾರೆ. ಇದೀಗ ಹಿರಿಯ ಪತ್ರಕರ್ತನನ್ನು ಗುರುತಿಸಿರುವ ಸರ್ಕಾರ ಪ್ರತಿಷ್ಠಿತ ಮಾಧ್ಯಮ ಅಕಾಡೆಮಿ ಜವಾಬ್ದಾರಿ ನೀಡಿದೆ. ಮೂರು ದಶಕಗಳ ದೀರ್ಘಕಾಲದ ಪತ್ರಿಕೋದ್ಯಮದ ಅನುಭವ ಹೊಂದಿರುವ ಸದಾಶಿವ ಶೆಣೈ, ಪ್ರಸ್ತುತ ಬೆಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.

ಲಂಕೇಶ್ ಪತ್ರಿಕೆಯಲ್ಲಿ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಇವರು ಕಾರ್ಯ ನಿರ್ವಹಿಸಿದ್ದಾರೆ. ಈಟಿವಿ ಚಾನೆಲ್‌ನಲ್ಲಿ ಪ್ರಖ್ಯಾತಿ ಪಡೆದ ವಾಕ್ ಆ್ಯಂಡ್ ಟಾಕ್ ಶೋ ಸಂದರ್ಶಕರಾಗಿ, ದೂರದರ್ಶನದಲ್ಲಿ ಮೂರು ವರ್ಷ ತಾರಾಲೋಕ ಲೈವ್ ಕಾರ್ಯಕ್ರಮದ ಆಂಕರ್ ಆಗಿಯೂ ಇವರು ಕೆಲಸ ಮಾಡಿದ್ದಾರೆ.

ಪ್ರಾರ್ಥನೆ ಸಿನಿಮಾದ ನಿರ್ದೇಶಕ, ಅನಂತನಾಗ್, ಪ್ರಕಾಶ್ ರೈ, ಇನ್ಫೋಸಿಸ್​ನ ಸುಧಾಮೂರ್ತಿ ಸೇರಿ ಬಹು ತಾರಾಗಣರಾಗಿ, ವಿಷ್ಣುವರ್ಧನ್, ಶಂಕರ್‌ನಾಗ್, ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಅವರ ಆತ್ಮಕತೆ ಪುಸ್ತಕದ ಲೇಖಕರೂ ಆಗಿದ್ದಾರೆ. ರಾಘಣ್ಣ ಹೇಳಿದ ಅಪ್ಪಾಜಿ ಕಥೆ, ಜಯಂತಿ, ರವಿಚಂದ್ರನ್ ಆತ್ಮಚರಿತ್ರೆಗಳು ಇನ್ನೂ ಪ್ರಕಟಣೆಗೆ ಬಾಕಿ ಇವೆ.

ನಾನಾ ಜವಾಬ್ದಾರಿ: ತುಂಟಾಟ ಸಿನಿಮಾ ಸೇರಿ ಹಲವು ಟಿವಿ ಧಾರಾವಾಹಿಗಳ ಗೀತೆ ರಚನೆಯನ್ನ ಕೂಡ ಮಾಡಿದ್ದಾರೆ.‌ ಖಾಸಗಿ ನ್ಯೂಸ್ ಚಾನಲ್‌ನಲ್ಲಿ ಸಿನಿಮಾ ವಿಭಾಗದ ಮುಖ್ಯಸ್ಥರೂ ಆಗಿದ್ದ ಶೆಣೈ, ಕರ್ನಾಟಕ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಗೆ ಎರಡು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಕರ್ನಾಟಕ ಚಲನಚಿತ್ರ ಭಂಡಾರದಲ್ಲಿ 8 ವರ್ಷ ಸದಸ್ಯನಾಗಿ, ಬಿ.ವಿ. ಕಾರಂತರ ಅಧ್ಯಕ್ಷತೆಯ ಚಲನಚಿತ್ರ ಗುಣಾತ್ಮಕ ಸಮಿತಿ ಸದಸ್ಯರಾಗಿ ಹೀಗೆ ನಾನಾ ಜವಾಬ್ದಾರಿಗಳನ್ನು ಹೊತ್ತಿದ್ದಾರೆ.‌

ಪತ್ರಿಕೋಧ್ಯಮದಲ್ಲಿ ದಶಕಗಳ ಕಾಲ ಕಾರ್ಯ ನಿರ್ವಹಿಸಿರುವ ಕೆ. ಕೆ. ಮೂರ್ತಿ, ಶಿವಾನಂದ ತಗಡೂರು, ಕೂಡ್ಲಿ ಗುರುರಾಜ್, ಶಿವಕುಮಾರ್ ಬೆಳ್ಳಿತಟ್ಟೆ, ಗೋಪಾಲ ಸಿಂಗಪ್ಪಯ್ಯ ಯಡಗೆರೆ, ಸಿ.ಕೆ. ಮಹೇಂದರ್, ಜಗನ್ನಾಥ ಬಾಳೆ, ದೇವೇಂದ್ರಪ್ಪ ಕಪನೂರು ಮತ್ತು ಕೆ.ವಿ. ಶಿವಕುಮಾರ್ ಅವರುಗಳು ಅಕಾಡೆಮಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಇದನ್ನೂ ಓದಿ: ನಿರ್ಗಮನದ ವೇಳೆ ಬಿಎಸ್​ವೈ ಭರ್ಜರಿ ಗಿಫ್ಟ್​: ರಾಜ್ಯ ಸರ್ಕಾರಿ ನೌಕರರ ಡಿಎ ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.