ETV Bharat / state

'ಕಾಂಗ್ರೆಸ್ ನಮ್ಮನ್ನು ದಂಡ ಪ್ರಯೋಗದ ಮೂಲಕ ಕಟ್ಟಿ ಹಾಕಲು ಪ್ರಯತ್ನಿಸುತ್ತಿದೆ' - ದಂಡ ಪ್ರಯೋಗ

ಕೋವಿಡ್ ಸಂದರ್ಭದಲ್ಲಿ ಅವ್ಯವಹಾರ ನಡೆದಿದ್ದರೆ ದಾಖಲೆ ಪಡೆದು, ತನಿಖೆ ಕೈಗೊಂಡು ಯಾವ ಕ್ರಮ ತೆಗೆದುಕೊಳ್ಳಬೇಕೋ ಆ ಕ್ರಮವನ್ನು ಕಾಂಗ್ರೆಸ್ ಸರ್ಕಾರ​ ತೆಗೆದುಕೊಳ್ಳಲಿ ಎಂದು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

D V Sandananda Gowda
ಡಿ ವಿ ಸದಾನಂದ ಗೌಡ
author img

By ETV Bharat Karnataka Team

Published : Dec 29, 2023, 5:50 PM IST

ಬೆಂಗಳೂರು: ಕಾಂಗ್ರೆಸ್​ನವರು ದಂಡ ಪ್ರಯೋಗ ಮೂಲಕ ನಮ್ಮ ಕಾರ್ಯಕರ್ತರನ್ನು ಕಟ್ಟಿಹಾಕುವ ಕೆಲಸ ಮಾಡ್ತಿದ್ದಾರೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಆರೋಪಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಇಂದು ಮಾತನಾಡಿದ ಅವರು, ಕೋವಿಡ್​ ವೇಳೆ ನಡೆದಿರುವ ಅವ್ಯವಹಾರ ಆರೋಪದ ಕುರಿತು ದಾಖಲೆ ಕೊಡುವಂತೆ ಯತ್ನಾಳ್​ಗೆ ಸಿದ್ದರಾಮಯ್ಯ ಆಗ್ರಹಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್​ನವರು ದಂಡ ಪ್ರಯೋಗ ಮೂಲಕ ನಮ್ಮ ಕಾರ್ಯಕರ್ತರನ್ನು ಕಟ್ಟಿಹಾಕುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್​ನವರೇ ಯಾವ ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳಲಿ. ಅವರೇ ಅಧಿಕಾರದಲ್ಲಿದ್ದು, ತನಿಖೆ ಮಾಡಿಸಲಿ ಎಂದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಎಲ್ಲರೂ ಸದಾನಂದ ಗೌಡ್ರೇ ನೀವೇ ನಿಲ್ಲಿ ಅಂತ ಹೇಳಿದ್ದಾರೆ. ನನ್ನ ಮೇಲೆ ಅವರಿಗೆ ವಿಶ್ವಾಸ ಇರೋದ್ರಿಂದ ಹಾಗೆ ಹೇಳಿದ್ದಾರೆ. ನೋಡೋಣ. ರಾಜ್ಯ ಬಿಜೆಪಿಯಲ್ಲಿ ಈಗ ಹೊಸ ತಂಡ ಬಂದಿದೆ. ನಮ್ಮನ್ನು ಯಾರು ಎದುರಿಸ್ತಾರೆ ನೋಡೋಣ ಎಂದು ಹೇಳಿದರು.

ಸಂಘಟನಾ ಪ್ರಕ್ರಿಯೆ ವೇಗವಾಗಿ ಬೆಳೆಯುತ್ತಿದೆ: ಈಗಾಗಲೇ ನಮ್ಮ ಸಂಘಟನಾ ಪ್ರಕ್ರಿಯೆ ರಾಜ್ಯಾದ್ಯಂತ ವೇಗವಾಗಿ ಬೆಳೆಯುತ್ತಿದೆ. ನಿನ್ನೆ ಕೋರ್ ಕಮಿಟಿ, ಹಿರಿಯರ ಸಮಾಲೋಚನಾ ಸಭೆ ನಡೆಯಿತು. ಸಮಾಲೋಚನೆ ಮೂಲಕವೇ ಸಂಘಟನೆ ಮಾಡಲು ನಿರ್ಧಾರ ಮಾಡಲಾಗಿದೆ. ಗ್ರೌಂಡ್ ರಿಯಾಲಿಟಿ ತಿಳಿದು ಕೆಲಸ ಮಾಡುವ ತೀರ್ಮಾನವಾಗಿದೆ ಎಂದು ತಿಳಿಸಿದರು.

ಶಾಸಕರು,‌ ಸಂಸದರು, ರಾಜ್ಯಸಭಾ ಸದಸ್ಯರು ಎಲ್ಲರ ಅಭಿಪ್ರಾಯ ತಿಳಿದು ಮುನ್ನಡೆಯಲು ನಿರ್ಧಾರ ಮಾಡಲಾಗಿದೆ. ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರ ಆಯ್ಕೆ ನಡೆಯುತ್ತಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ, ಯಲಹಂಕ ಸೇರಿ ಹತ್ತು ಮಂಡಲ ಬರಲಿದೆ. ಹತ್ತರಲ್ಲಿ ಆರು ಜನ ನಮ್ಮ ವಿಧಾನಸಭೆ ಸದಸ್ಯರಾಗಿದ್ದಾರೆ. ದಾಸರಹಳ್ಳಿಯನ್ನು ಮತ್ತೆ ಪಡೆದಿದ್ದೇವೆ. ಹೆಬ್ಬಾಳ, ಬ್ಯಾಟರಾಯನಪುರದಲ್ಲಿ ಅಲ್ಪ ಮತಗಳಿಂದ ಸೋತಿದ್ದೇವೆ ಎಂದರು.

ಸಮಸ್ಯೆಗಳನ್ನು ಸರಿದೂಗಿಸುವ ಕೆಲಸ ಮಾಡಬೇಕು. ಪುಲಕೇಶಿ ನಗರ ಸ್ವಲ್ಪ ಹಿನ್ನಡೆ ಇರುವ ಕ್ಷೇತ್ರ. ಎಲ್ಲವನ್ನೂ ಸರಿದೂಗಿಸಿ ಸಹಮತದಿಂದ ಜಿಲ್ಲಾಧ್ಯಕ್ಷರ ಆಯ್ಕೆ ಆಗಬೇಕು. ಮಾಜಿ ಸಚಿವರು, ಮಾಜಿ ಶಾಸಕರು, ಹಾಲಿ ಶಾಸಕರ ಎಲ್ಲರ ಅಭಿಪ್ರಾಯ ಪಡೆದುಕೊಳ್ಳಲಾಗಿದೆ. ಇದು ಫಲಪ್ರದ ಆಗಲಿದೆ ಅಂತ ಭಾವಿಸಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ಹಲವು ತಪ್ಪುಗಳಾದ ಹಿನ್ನೆಲೆಯಲ್ಲಿ ನಾವು ಸದೃಢ ಆಗಿದ್ದೇವೆ. ಕೇಂದ್ರದವರು ನಮ್ಮ‌ ಒತ್ತಡಕ್ಕೆ ಸಹಮತ ವ್ಯಕ್ತಪಡಿಸುತ್ತಾರೆ ಎಂಬ ವಿಶ್ವಾಸ ಇದೆ. ಸಲಹೆ ಸೂಚನೆ ಕೊಡೋದು ನಮ್ಮ ಜವಾಬ್ದಾರಿ. ಪದಾಧಿಕಾರಿಗಳ ಪಟ್ಟಿ ಶೀಘ್ರವೇ ಕಳುಹಿಸಿ ಎಂದು ಮನವಿ ಮಾಡಲಾಗಿತ್ತು. ಕೆಲವರ ಅಭಿಪ್ರಾಯ ಪಡೆದು ಕಳುಹಿಸಿದ್ದಾರೆ. ಕೆಳ ಹಂತದಲ್ಲಿ ಕೂಡ ಸಹಮತ ನೀಡುವಂತೆ ಆಗಬೇಕು ಎಂದು ತಿಳಿಸಿದರು.

ಯತ್ನಾಳ್ ಮೇಲೆ ಕ್ರಮ ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆ ಸಭೆಯಲ್ಲಿ ಏನಾಗಿದೆ ಅಂತ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಯತ್ನಾಳ್ ವಿಚಾರ ಹೈಕಮಾಂಡ್‌ಗೆ ತಿಳಿಸಿದ್ದೇವೆ. ನಾವು ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕೇಂದ್ರವೇ ಕ್ರಮ ತೆಗೆದುಕೊಳ್ಳಬೇಕು ಎಂದರು.

ಇದನ್ನೂ ಓದಿ: 'ಯತ್ನಾಳ್‌ ಉಚ್ಛಾಟಿಸುವ ಕೆಲಸಕ್ಕೆ ಕೈ ಹಾಕಿದರೆ..': ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.