ಬೆಂಗಳೂರು: ರಾಕೆಟ್ ವಿಜ್ಞಾನಿ ಸೋಮನಾಥ್ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ನೂತನ ಮುಖ್ಯಸ್ಥರಾಗಿ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ಕೇಂದ್ರ ಸರ್ಕಾರ ಗುರುವಾರ ನೇಮಿಸಿತ್ತು. ಇಂದು (ಶುಕ್ರವಾರ) ಇಸ್ರೋ ಅಧ್ಯಕ್ಷರಾಗಿ ಎಸ್.ಸೋಮನಾಥ್ ಅಧಿಕಾರವಹಿಸಿಕೊಂಡರು.
-
Today, January 14, 2022, Shri. S. Somanath assumed charge as Secretary, Department of Space and Chairman, Space Commissionhttps://t.co/BPUBOYNqqv pic.twitter.com/dAvgJde82B
— ISRO (@isro) January 14, 2022 " class="align-text-top noRightClick twitterSection" data="
">Today, January 14, 2022, Shri. S. Somanath assumed charge as Secretary, Department of Space and Chairman, Space Commissionhttps://t.co/BPUBOYNqqv pic.twitter.com/dAvgJde82B
— ISRO (@isro) January 14, 2022Today, January 14, 2022, Shri. S. Somanath assumed charge as Secretary, Department of Space and Chairman, Space Commissionhttps://t.co/BPUBOYNqqv pic.twitter.com/dAvgJde82B
— ISRO (@isro) January 14, 2022
ಸೋಮನಾಥ್ ಅವರು ಕೇರಳ ಕೊಲ್ಲಂನ ಟಿ.ಕೆ.ಎಂ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿದ್ದು, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐ.ಐ.ಎಸ್.ಸಿ)ಯಲ್ಲಿ ಇಂಜಿನಿಯರಿಂಗ್ನಲ್ಲಿ ಮಾಸ್ಟರ್ಸ್ ಮಾಡಿದ್ದಾರೆ. ಇವರು 1985ರಲ್ಲಿ ಇಸ್ರೋ ಸೇರಿದ್ದರು. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿ.ಎಸ್.ಎಲ್.ವಿ) ಮತ್ತು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿ.ಎಸ್.ಎಲ್.ಜಿ) ಯೋಜನೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ.
ಜೂನ್ 2010 ರಿಂದ 2014 ರವರೆಗೆ ಜಿ.ಎಸ್.ಎಲ್.ವಿ-ಎಂ.ಕೆ III ನ ಯೋಜನಾ ನಿರ್ದೇಶಕರಾಗಿದ್ದರು. ಜೂನ್ 2015 ರಲ್ಲಿ ಇಸ್ರೋದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (ಎಲ್.ಪಿ.ಎಸ್.ಸಿ), ತಿರುವನಂತಪುರಂನ ನಿರ್ದೇಶಕರಾಗಿ ನೇಮಕಗೊಂಡಿದ್ದರು.
ಇದನ್ನೂ ಓದಿ: ಬೆಂಗಳೂರು: ಬ್ಯಾಂಕ್ ಮ್ಯಾನೇಜರ್‌ಗೆ ಚಾಕು ತೋರಿಸಿ 4 ಲಕ್ಷ ಹಣದೊಂದಿಗೆ ಪರಾರಿ