ಬೆಂಗಳೂರು: ಕೇಂದ್ರ ಸರ್ಕಾರ CBSE, ICSE ಪರೀಕ್ಷೆ ರದ್ದು ಮಾಡಿರುವ ವಿಚಾರದ ಬಗ್ಗೆ ರುಪ್ಸಾ ಕರ್ನಾಟಕ ಅಧ್ಯಕ್ಷ ಲೊಕೇಶ್ ತಾಳಿಕಟ್ಟೆ ಹೇಳಿಕೆ ನೀಡಿದ್ದಾರೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಒಳ್ಳೆಯದ್ದೇ. ಆದ್ರೆ ಕಳೆದ ನೂರಾರು ವರ್ಷಗಳಿಂದ ಪರೀಕ್ಷಾ ನೀತಿಯನ್ನು ಅನುಸರಿಸುತ್ತಾ ಬಂದಿದ್ದೇವೆ. ಪರೀಕ್ಷೆ ಇಲ್ಲದೇ ಪಾಸ್ ಮಾಡುವುದನ್ನ ನಾವು ಕಂಡಿಲ್ಲ. ನಿರೀಕ್ಷೆ ಮಾಡಿಲ್ಲ. ಮಾನಸಿಕವಾಗಿ ನಾವು ಪರೀಕ್ಷೆಗೆ ಹೊಂದಿಕೊಂಡಿದ್ದೇವೆ. ಇದರ ಪರಿಣಾಮ ಇಂದು ಗೊತ್ತಾಗಲ್ಲ. ಹತ್ತಾರು ವರ್ಷಗಳು ಆದ ನಂತರ ಇದರ ಪರಿಣಾಮ ಗೊತ್ತಾಗಲಿದೆ ಎಂದು ರುಪ್ಸಾ ಅಧ್ಯಕ್ಷ ಹೇಳಿದ್ದಾರೆ.
ಪರೀಕ್ಷೆ ಅಂದ್ರೆ ವಿದ್ಯಾರ್ಥಿಗಳ ಕಲಿಕಾಮಟ್ಟವನ್ನ ಅಳೆಯುವ ಅಳತೆಗೋಲು. ಸಾಂಕ್ರಾಮಿಕ ರೋಗದ ಕಾರಣ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವಲ್ಲಿ ಎಡವಿದ್ದೀವಿ. ಹೀಗಾಗಿ ನಾವು ಪರೀಕ್ಷೆಯನ್ನ ಮಾಡುವುದಕ್ಕೆ ಆಗುತ್ತಿಲ್ಲ ಎಂಬ ತಪ್ಪು ಸಂದೇಶ ರವಾನೆಯಾಗುತ್ತೆ. ಪರೀಕ್ಷೆಯನ್ನ ಯಾವುದಾದ್ರೂ ರೂಪದಲ್ಲಿ ಆದ್ರೂ ಸರಿ ಪರೀಕ್ಷೆ ಮಾಡಬೇಕು. ಪರೀಕ್ಷೆಯಿಂದ ಮಕ್ಕಳಲ್ಲಿ ಕಲಿಕಾ ಬೆಳವಣಿಗೆ ಆಗುತ್ತೆ. ಪ್ರಧಾನಿ ತೆಗೆದುಕೊಂಡ ನಿರ್ಧಾರ ತಪ್ಪು ಅಂತಾ ನಾವು ಹೇಳ್ತಾ ಇಲ್ಲ. ವಿವಿಧ ರಾಜ್ಯಗಳ ಅಭಿಪ್ರಾಯದ ಮೇಲೆ ಅವರು ನಿರ್ಧಾರ ತೆಗೆದುಕೊಂಡಿದ್ದಾರೆ. ಆದ್ರೆ ನಮ್ಮ ರಾಜ್ಯದಲ್ಲಿ ಸಚಿವರು ಪರೀಕ್ಷೆ ನಡೆಸುವಂತಹ ಕೆಲಸ ಮಾಡ್ಬೇಕು. ಕಳೆದ ಸಾರಿ ಪರೀಕ್ಷೆ ನಡೆಸಿ ಯಶಸ್ವಿಯಾಗಿತ್ತು. ಈ ಸಾರಿ ಅದನ್ನೇ ಮಾಡಬೇಕು ಅಂತಾ ರುಪ್ಸಾ ಕರ್ನಾಟಕ ಒತ್ತಾಯ ಮಾಡಿದೆ.