ETV Bharat / state

ಮಹಾರಾಷ್ಟ್ರ-ಕೇರಳದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ RTPCR ನೆಗೆಟಿವ್ ರಿಪೋರ್ಟ್ ಕಡ್ಡಾಯ

ಮಹಾರಾಷ್ಟ್ರ ಹಾಗೂ ಕೇರಳದಿಂದ ರಾಜ್ಯಕ್ಕೆ ಬರುವವರಿಗೆ ಆರ್​​ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.

Minister Sudhakar
ಸಚಿವ ಡಾ. ಕೆ. ಸುಧಾಕರ್
author img

By

Published : Jun 27, 2021, 11:39 AM IST

Updated : Jun 27, 2021, 11:48 AM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಕೆಯಾಗುತಿದ್ದರೂ, ಮತ್ತೊಂದು ಕಡೆ ರೂಪಾಂತರಿ ಸೋಂಕಿನ ಕಾಟ ಶುರುವಾಗಿದೆ. ಹೀಗಾಗಿ ಮಹಾರಾಷ್ಟ್ರ ಹಾಗೂ ಕೇರಳದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಆರ್​​ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ ಎಂದು ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.

ಸಚಿವ ಡಾ. ಕೆ. ಸುಧಾಕರ್ ಪ್ರತಿಕ್ರಿಯೆ

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಡೆಲ್ಟಾ ಪ್ಲಸ್ ಸೋಂಕು ಇಬ್ಬರಲ್ಲಿ ಪತ್ತೆಯಾಗಿದ್ದು, 600ಕ್ಕೂ ಹೆಚ್ಚು ಸ್ಯಾಂಪಲ್ಸ್​​ನ್ನು ಜಿನೋಮಿಕ್ ಸ್ವೀಕ್ಸಿಂಗ್ ಟೆಸ್ಟ್​​​ಗೆ ಕಳುಹಿಸಲಾಗಿದೆ. ಅದರ ವರದಿ ಇಂದು ಬರಲಿದ್ದು, ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಆಗುತ್ತಿರುವ ಆತಂಕ ನಮ್ಮ ರಾಜ್ಯದಲ್ಲಿ ಇಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಮಹಾರಾಷ್ಟ್ರ, ಕೇರಳ ಗಡಿಭಾಗದಲ್ಲಿ ಹೆಚ್ಚಿನ ನಿಗಾ ಇಡಲಾಗಿದೆ. ಅಲ್ಲಿನ ಜಿಲ್ಲಾಡಳಿತಕ್ಕೂ ಸೂಚನೆ ನೀಡಿದ್ದು, ಅಲ್ಲಿಂದ ಬರುವ ಜನರಿಗೆ ರ್ಯಾಂಡಮ್​ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ ಎಂದರು.

ಕೋವಿಡ್ ಲಸಿಕೆ ಪಡೆಯದೇ ಇದ್ದರೆ ತೀವ್ರ ಪರಿಣಾಮ:

ಕೋವಿಡ್ ಲಸಿಕೆ ಪಡೆಯದೇ ಇದ್ದರೆ ಕೋವಿಡ್​​ನ ಯಾವುದೇ ತಳಿಯಾದರೂ ತೀವ್ರ ಪರಿಣಾಮ ಬೀರುತ್ತದೆ. ಹೀಗಾಗಿ, ಪ್ರತಿಯೊಬ್ಬರು ಲಸಿಕೆ ತೆಗೆದುಕೊಳ್ಳಬೇಕು. ಎರಡು ಡೋಸ್ ಲಸಿಕೆ ಪೂರ್ಣವಾಗುವವರೆಗೆ ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ಸಮುದಾಯದಲ್ಲಿ ಶೇ.70 ರಷ್ಟು ಲಸಿಕೆ ಪೂರ್ಣ ಆಗುವವರೆಗೆ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು ಅವಶ್ಯಕ ಎಂದು ಸಲಹೆ ನೀಡಿದರು.

ಶಾಲೆಗಳ ಆರಂಭದ ಬಗ್ಗೆ ಚರ್ಚೆ ನಡೆಯುತ್ತಿದ್ದು, ಶಾಲೆ ಆರಂಭವಾದರೆ 10 ವರ್ಷದೊಳಗಿನ ಮಕ್ಕಳ ಪೋಷಕರಿಗೂ ಲಸಿಕೆ ನೀಡಲಾಗುತ್ತದೆ. ಶೀಘ್ರದಲ್ಲೇ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಕಾಂಗ್ರೆಸ್​​ನವರು ಹೇಳ್ತಾರಷ್ಟೇ.. ಯಾವುದನ್ನೂ ಮಾಡಲ್ಲ:

ದಲಿತರು ಸಿಎಂ ಆಗಬೇಕೆಂದು ಕಾಂಗ್ರೆಸ್​​ನಲ್ಲಿ ಚರ್ಚೆ ನಡೆಯುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಕಾಂಗ್ರೆಸ್​​ನಲ್ಲಿ ಸಿಎಂ ಫೈಟ್​​ ಹೊಸದೇನಲ್ಲ. ಅದು ಹುಟ್ಟಿದಾಗಿಂದಲೂ ಇದೆ. ಕಾಂಗ್ರೆಸ್​​ನವರು ಹೇಳ್ತಾರಷ್ಟೇ. ಯಾವುದನ್ನೂ ಮಾಡಲ್ಲ. ಪ್ರಧಾನ ಮಂತ್ರಿ, ಮುಖ್ಯಮಂತ್ರಿಯನ್ನಾಗಿ ಮಾಡಿದ್ದರಾ? ಇದ್ಯಾವುದು ಮಾಡಿಲ್ಲ. ಸುಮ್ನೆ ಹೇಳಿಕೊಂಡು ಅವ್ರ ಹೆಸರು ತಗೊಳ್ತಾರೆ. ಅಲ್ಪ ಸಂಖ್ಯಾತರ ಹೆಸರು ಹೇಳ್ತಾರೆ. ಆದರೆ ಯಾರನ್ನ ಉದ್ಧಾರ ಮಾಡಿದ್ದಾರೆ ಹೇಳಿ? ಎಂದು ಸಚಿವ ಸುಧಾಕರ್​​ ಪ್ರಶ್ನಿಸಿದರು.

ಇದನ್ನೂ ಓದಿ: ಕೆಲಸಕ್ಕೆ ಹೋಗಲು ಲಸಿಕೆ ಕಡ್ಡಾಯ: ಬೆಂಗಳೂರಲ್ಲಿ ವ್ಯಾಕ್ಸಿನ್​ಗಾಗಿ ಫುಟ್​​ಪಾತ್​ ಮೇಲೆ ಕಾದು ಕುಳಿತ ಜನ

Last Updated : Jun 27, 2021, 11:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.