ಬೆಂಗಳೂರು : ಕೋವಿಡ್ ಎರಡನೇ ಅಲೆ ಹಿನ್ನೆಲೆ ಸೋಂಕಿತರನ್ನು ಬಹುಬೇಗ ಕಂಡು ಹಿಡಿದು, ಚಿಕಿತ್ಸೆ ನೀಡುವ ದೃಷ್ಟಿಯಿಂದಲ್ಲೇ ಹೆಚ್ಚು ಹೆಚ್ಚು ಕೋವಿಡ್ ಟೆಸ್ಟ್ಗಳನ್ನ ಮಾಡುವಂತೆ ಸರ್ಕಾರ ತಿಳಿಸಿದೆ.
ಆದರೆ, ಈ ನಡುವೆ ಕೋವಿಡ್ ಟೆಸ್ಟ್ ಮಾಡಿಸಿ ರಿಪೋರ್ಟ್ನಲ್ಲಿ ನೆಗಟಿವ್ ಇದ್ದರೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಕೊರೊನಾ ಸೋಂಕು ಇರುವುದನ್ನ ಕಂಡು ಹಿಡಿಯಲು ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಹಾಗೂ ಆರ್ಟಿಪಿಆರ್ ಟೆಸ್ಟ್ ಮಾಡಿದ ಬಳಿಕ ಸಿಟಿ ಸ್ಕ್ಯಾನ್‌ನಲ್ಲಿ ಪರೀಕ್ಷಿಸಿದಾಗ ಸೋಂಕು ಹರಡಿರುವುದು ಪತ್ತೆಯಾಗ್ತಿದೆ.
ಸೋಂಕು ಇದ್ಯಾ ಇಲ್ವಾ ಎಂಬುದನ್ನ ಯಾವುದರ ಮೂಲಕ ತಿಳಿಯಬಹುದು?
ವೈದ್ಯಕೀಯ ಕ್ಷೇತ್ರದಲ್ಲಿ ಕೊರೊನಾ ಸೋಂಕು ಹರಡಿದ್ಯಾ ಇಲ್ವಾ ಎಂಬುದನ್ನ ಖಚಿತ ಪಡಿಸಲು ಆಸ್ಪತ್ರೆಗಳಲ್ಲಿ ಕೆಲವು ಪರೀಕ್ಷಾ ವಿಧಾನಗಳಿವೆ.
ಅದರಲ್ಲಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್, RTPCR ಟೆಸ್ಟ್, ಸಿಟಿ ಸ್ಕ್ಯಾನ್ ಹಾಗೂ ಶ್ವಾಸಕೋಶಕ್ಕೆ ಸೋಂಕು ಹರಡಿದ್ಯಾ ಎಂಬುದನ್ನು ತಿಳಿಯಲು ಪಲ್ಮನರಿ ಫಂಕ್ಷನ್ ಟೆಸ್ಟ್ (Pulmonary funaction test) ಮಾಡಲಾಗುತ್ತೆ.
ಆದರೆ, ಸದ್ಯ ಎಲ್ಲೆಡೆ ಈ ಟೆಸ್ಟ್ ಮಾಡೋದನ್ನು ನಿಲ್ಲಿಸಲಾಗಿದೆ. ಕಾರಣ ಈ ಪರೀಕ್ಷೆ ಮಾಡುವಂತಹ ಸಂದರ್ಭದಲ್ಲಿ ವ್ಯಕ್ತಿಯ ಉಸಿರು ಹೆಚ್ಚು ಹೊರಗೆ ಬರುವುದರಿಂದ ಅಕ್ಕಪಕ್ಕದಲ್ಲಿರೋರಿಗೂ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ, ಪರೀಕ್ಷೆ ಮಾಡುವ ಸಿಬ್ಬಂದಿಗೂ ಸೋಂಕು ಬರುವುದರಿಂದ ಇದನ್ನ ನಿಲ್ಲಿಸಲಾಗಿದೆ.
ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್, RTPCR ಟೆಸ್ಟ್ನಲ್ಲಿ ಗಂಟಲ ದ್ರವ ಪಡೆದು, ದೇಹದಲ್ಲಿ ಯಾವುದಾದರೂ ವೈರಸ್ ಸೇರಿದ್ದರೆ ಅದನ್ನ ಕಂಡು ಹಿಡಿಯಲಾಗುತ್ತೆ. ಆದರೆ, ಈ ಎರಡು ಟೆಸ್ಟ್ನಲ್ಲಿ ರಾಂಗ್ ರಿಪೋರ್ಟ್ ಬರುವ ಸಾಧ್ಯತೆ ಇರುತ್ತೆ. ಅಂದರೆ ಕೋವಿಡ್ ಪಾಸಿಟಿವ್ ಅಥವಾ ನೆಗೆಟಿವ್ ಅಂತಲೂ ಬರಬಹುದು.
ಇದಕ್ಕೆ ಕಾರಣ, ದೇಹದಲ್ಲಿ ಸೋಂಕು ಉಲ್ಬಣವಾಗದೇ ಇರಬಹುದು, ಆಗ ಪರೀಕ್ಷೆ ಮಾಡಿದಾಗ ನೆಗೆಟಿವ್ ಬರಬಹುದು. ಆದರೆ, ನಂತರ ಉಲ್ಬಣವಾಗಿ 72 ಗಂಟೆಯಲ್ಲಿ ಪಾಸಿಟಿವ್ ಅಂತಲ್ಲೂ ಬರಬಹುದು.
ಸೋಂಕು ಒಳಹೊಕ್ಕಿದ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿಯಿಂದಾಗಿ ಅದು ಅಲ್ಲೇ ಸಾವನ್ನಪ್ಪಿದ್ದರು, ಪರೀಕ್ಷೆ ಮಾಡುವಂತಹ ಸಂದರ್ಭದಲ್ಲಿ ಪಾಸಿಟಿವ್ ಬರಬಹುದು.
RTPCRನಂತೆ ಸಿಟಿ ಸ್ಕ್ಯಾನ್ ಮಾಡಿಸುವುದು ಒಳಿತು:
ಕೊರೊನಾ ಸೋಂಕು ಕೂಡ ಎರಡು ರೀತಿಯಲ್ಲಿ ಬರ್ತಿದ್ದು, ಕೆಲವರಿಗೆ ಸೋಂಕಿನ ಲಕ್ಷಣಗಳು ಕಾಣಿಸಕೊಂಡ್ರೆ, ಹಲವರಿಗೆ ಸೋಂಕಿನ ಲಕ್ಷಣ ಇಲ್ಲದೆಯೂ ಪಾಸಿಟಿವ್ ಬರ್ತಿದೆ. ಈಗಾಗಲೇ ನಿತ್ಯ ಲಕ್ಷಕ್ಕೂ ಹೆಚ್ಚು ಮಂದಿಗೆ ಆರ್ಟಿಪಿಆರ್ ಟೆಸ್ಟ್ ಮಾಡಲಾಗುತ್ತಿದೆ.
ಆದರೆ, ನಮ್ಮಲ್ಲಿ ಹೆಚ್ಚಾಗಿ ರೋಗ ಲಕ್ಷಣ ಇಲ್ಲದವರಿಗೆ ಹೆಚ್ಚು ಕೊರೊನಾ ಪಾಸಿಟಿವ್ ಬಂದಿರುವುದನ್ನ ಕಂಡಿದ್ದೇವೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಸಿಟಿ ಸ್ಕ್ಯಾನ್ ಮಾಡಿ ಸುವುದು ಒಳಿತು ಅಂತಾರೆ ತಜ್ಞರಾದ ಡಾ ಜಗದೀಶ್. ಸಿಟಿ ಸ್ಕ್ಯಾನ್ ದೇಹದೊಳಗೆ ಆಗಿರುವ ಬದಲಾವಣೆಯನ್ನ ಗಮನಿಸಲು ಇರುವ ಯಂತ್ರ. ಇದು ಶ್ವಾಸಕೋಶದಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದರೆ ಕೊರೊನಾ ಲಕ್ಷಣ ಸಹಿತ ನಿಮೋನಿಯಾ ಆಗಿರಬಹುದು ಅಂತಾರೆ.
ಈಗಾಗಲೇ ಗಾಳಿಯಲ್ಲೂ ಸೋಂಕು ಹರಡುವುದರ ಕುರಿತು ಆತಂಕ ವ್ಯಕ್ತಪಡಿಸಿದ್ದು, ಸರ್ಕಾರ ಕೊರೊನಾ ನಿಗ್ರಹ ಮಾಡಲು ಆರ್ಟಿಪಿಸಿಆರ್ ಜೊತೆಗೆ ಸಿಟಿ ಸ್ಕ್ಯಾನ್ ಕೂಡ ಮಾಡಬೇಕು ಅಂತಾ ಸಲಹೆ ನೀಡಿದರು. ಪರಿಸ್ಥಿತಿ ಕೈ ಮೀರಿ ಹೋಗಿರುವುದರಿಂದ ಇದನ್ನ ಮಾಡುವ ಅಗತ್ಯವಿದೆ.
ಈಗಾಗಲೇ ಸಾಮಾನ್ಯ ಬೆಡ್ನಿಂದ ಹಿಡಿದು ಐಸಿಯು ಹಾಗೂ ವೆಂಟಿಲೇಟರ್ ಅಭಾವ ಸೃಷ್ಟಿಯಾಗಿದೆ. ಉಸಿರಾಟದ ತೊಂದರೆ ಇರುವವರಿಗೆ ಕೋವಿಡ್ನಿಂದ ಹೆಚ್ಚು ಸಾವು ಸಂಭವಿಸುತಿದ್ದು, ಇದನ್ನ ತಡೆಯಲು ಆರ್ ಟಿ ಪಿಸಿಆರ್ ಜೊತೆಗೆ RTPCRನಂತೆ ಸಿಟಿ ಸ್ಕ್ಯಾನ್ ಮಾಡಿಸುವುದು ಉತ್ತಮ.