ಬೆಂಗಳೂರು : ರಾಜರಾಜೇಶ್ವರಿ ನಗರದ ಉಪಚುನಾವಣೆ ಮತದಾನ ಅಂತ್ಯವಾಗಿದೆ. ಆರು ಗಂಟೆಗೆ ಸರಿಯಾಗಿ ಮತಗಟ್ಟೆಗಳ ಬಾಗಿಲು ಹಾಕಿದರು. ವಿವಿಪ್ಯಾಟ್, ಇವಿಎಂ ಮತಯಂತ್ರಗಳನ್ನು ಸೀಲ್ ಮಾಡಿ, ಆರ್ ಆರ್ ನಗರದ ಜ್ಞಾನಾಕ್ಷಿ ವಿದ್ಯಾನಿಕೇತನ ಸ್ಟ್ರಾಂಗ್ ರೂಂಗೆ ತೆಗೆದುಕೊಂಡು ಹೋಗಲಾಯಿತು.
ಯಶವಂತಪುರ ಮತಗಟ್ಟೆಯಲ್ಲಿ ಕೊನೇಕ್ಷಣದಲ್ಲಿ ಮತದಾರರು ಮತಹಾಕಲು ಓಡಿಬಂದರು. ಆರುಗಂಟೆ ವೇಳೆಗೆ ಬಂದವರಿಗೆ ಮತದಾನ ಹಾಕಲು ವ್ಯವಸ್ಥೆ ಮಾಡಿಕೊಡಲಾಯಿತು.