ETV Bharat / state

ಬಾಗಮನೆ ಟೆಕ್ ಪಾರ್ಕ್, ಪೂರ್ವಂಕರ ಸಂಸ್ಥೆಗಳಿಂದ ರಾಜಕಾಲುವೆ ಒತ್ತುವರಿ: ಪಾಲಿಕೆಯ ಎರಡನೇ ಸಮೀಕ್ಷೆಯಲ್ಲಿ ದೃಢ.. - ಪೂರ್ವಾಂಕರ ಪೂರ್ವ ಪಾರ್ಕ್ ರಿಡ್ಜ್‌

ಐಟಿ ಕಾರಿಡಾರ್​​ನಲ್ಲಿರುವ ಬಾಗಮನೆ ವರ್ಲ್ಡ್ ಟೆಕ್ನಾಲಜಿ ಸೆಂಟರ್, ಮಳೆ ನೀರಿನ ಚರಂಡಿಯ ಸುಮಾರು 2. 4 ಮೀಟರ್ ಒತ್ತುವರಿ ಮಾಡಲಾಗಿದೆ.

ರಾಜಕಾಲುವೆ ಒತ್ತುವರಿ
ರಾಜಕಾಲುವೆ ಒತ್ತುವರಿ
author img

By

Published : Sep 15, 2022, 10:28 PM IST

ಬೆಂಗಳೂರು: ಕಳೆದ ವಾರ ಭೀಕರ ಪ್ರವಾಹ ಪರಿಸ್ಥಿತಿಗೆ ಕಾರಣವಾಗಿದ್ದ ಮಳೆ ನೀರಿನ ಚರಂಡಿ, ರಾಜಕಾಲುವೆ ಒತ್ತುವರಿ ಮಾಡಿಕೊಂಡ 15 ದೊಡ್ಡ ಹೆಸರುಗಳ ಪೈಕಿ ಬಾಗಮನೆ ಸಮೂಹ ಅಭಿವೃದ್ಧಿಪಡಿಸಿದ ಬಾಗಮನೆ ವರ್ಲ್ಡ್ ಟೆಕ್ನಾಲಜಿ ಸೆಂಟರ್ ಹೆಸರು ಕೇಳಿ ಬಂದಿದೆ. ಇದರ ನಡುವೆ ಪಕ್ಕದ ಪೂರ್ವಂಕರ ಪೂರ್ವ ರಿಡ್ಜ್ ಪ್ರದೇಶದಲ್ಲೂ ಒತ್ತುವರಿಯಾಗಿರುವುದು ಎರಡನೇ ಸಮೀಕ್ಷೆಯಲ್ಲಿ ದೃಢಪಟ್ಟಿದೆ.‌

ಐಟಿ ಕಾರಿಡಾರ್​​ನಲ್ಲಿರುವ ಬಾಗಮನೆ ವರ್ಲ್ಡ್ ಟೆಕ್ನಾಲಜಿ ಸೆಂಟರ್, ಮಳೆ ನೀರಿನ ಚರಂಡಿಯ ಸುಮಾರು 2. 4 ಮೀಟರ್ ಒತ್ತುವರಿ ಮಾಡಲಾಗಿದೆ. ಬೋಯಿಂಗ್, ಅಕ್ಸೆಂಚರ್, ಇವೈ, ಡೆಲ್ ಮತ್ತು ಎರಿಕ್‍ಸನ್‍ನಂಥ ಕಂಪನಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಮತ್ತೊಂದೆಡೆ ಪೂರ್ವಂಕರ ಪೂರ್ವರಿಡ್ಜ್ ವಿಲ್ಲಾಗಳು. ಅವರು ಮಳೆ ನೀರಿನ ಚರಂಡಿಯನ್ನು ಬಹುತೇಕ ಮುಚ್ಚಿದ್ದಾರೆ ಎಂದು ಸಮೀಕ್ಷೆಯ ವೇಳೆ ತಿಳಿದು ಬಂದಿದೆ.

ಪೂರ್ವಾಂಕರ ಪೂರ್ವ ಪಾರ್ಕ್ ರಿಡ್ಜ್‌ನಲ್ಲಿ 149 ವಿಲ್ಲಾಗಳಿದ್ದು, ಎಲ್ಲ ಮೂರು ಅಥವಾ ನಾಲ್ಕು ಬೆಡ್‍ರೂಂ ಹೊಂದಿವೆ. ಇಲ್ಲಿ ಚರಂಡಿಯನ್ನು ಸುಮಾರು 2. 5 ಮೀಟರ್‌ನಷ್ಟು ಒತ್ತುವರಿ ಮಾಡಲಾಗಿದೆ. ಬಿಬಿಎಂಪಿ ಅಧಿಕಾರಿಗಳು ಎರಡನೇ ಬಾರಿಗೆ ನಿನ್ನೆ ವಿಲ್ಲಾಗಳಿಗೆ ಮತ್ತೊಮ್ಮೆ ಭೇಟಿ ನೀಡಿ, ನಿವಾಸಿಗಳ ಸಮ್ಮುಖದಲ್ಲಿ ಸ್ಥಳವನ್ನು ಸಮೀಕ್ಷೆ ಮಾಡಿದ್ದಾರೆ. ಪೂರ್ವಾಂಕರ ಬಿಲ್ಡರ್ ಕಂಪನಿಯು ಮಳೆ ನೀರು ಹರಿಸುವ ಚರಂಡಿಗಳ ಮೇಲೆಯೇ ಅಕ್ರಮವಾಗಿ ವಿಲ್ಲಾಗಳನ್ನು ನಿರ್ಮಿಸಿರುವುದು ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

700 ಜಾಗಗಳಲ್ಲಿ ರಾಜಕಾಲುವೆ ಒತ್ತುವರಿ: ಟೆಕ್ ಪಾರ್ಕ್ ಮಾತ್ರವಲ್ಲದೇ, ಬೆಂಗಳೂರಿನ ಸುಮಾರು 700 ಪ್ರದೇಶದಲ್ಲಿ ರಾಜಕಾಲುವೆಗಳು ಮುಚ್ಚಿಹೋಗಿವೆ. ಈ ಪಟ್ಟಿಯಲ್ಲಿ ಹೈ ಪ್ರೊಫೈಲ್ ಬಿಲ್ಡರ್​ಗಳು, ಡೆವಲಪರ್​ಗಳು ಮತ್ತು ಟೆಕ್ ಪಾರ್ಕ್​ಗಳು ಇವೆ. ಈ ಪೈಕಿ ವಿಪ್ರೋ, ಪ್ರೆಸ್ಟೀಜ್, ಇಕೋ ಸ್ಪೇಸ್, ಕೊಲಂಬಿಯಾ ಏಷ್ಯಾ ಆಸ್ಪತ್ರೆ, ದಿವ್ಯಶ್ರೀ ವಿಲ್ಲಾಸ್ ಮತ್ತು ಬಾಗ್ಮನೆ ಟೆಕ್​ಪಾರ್ಕ್ ಹೆಸರುಗಳು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಓದಿ: ವೆಂಟಿಲೇಟರ್​ ಸಮಸ್ಯೆ ಆಗಿಲ್ಲ, ವಿದ್ಯುತ್​ ಕೈಕೊಟ್ಟಿದ್ದರಿಂದ ಸಾವಾಗಿಲ್ಲ: ಡಿ ಸಿ ಪವನ್​ ಕುಮಾರ್​ ಮಾಲಪಾಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.