ಬೆಂಗಳೂರು: ಜಗತ್ತಿನಲ್ಲಿ ಅತ್ಯಂತ ಸುರಕ್ಷಿತ ಹುಲಿ ಸಂರಕ್ಷಿತ ಪ್ರದೇಶವೆಂಬ ಹಣೆಪಟ್ಟಿ ಭಾರತಕ್ಕೆ ಬಂದಿದ್ದು, ಕಳೆದ ಜುಲೈನಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ಹುಲಿ ಗಣತಿಯ ವರದಿಯಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ ಲಭಿಸಿದ್ರೇ, ಮಧ್ಯಪ್ರದೇಶಕ್ಕೆ ಪ್ರಥಮ ಸ್ಥಾನ ಸಿಕ್ಕಿತ್ತು.
ಆದರೆ, ಈಗ ಆ ವರದಿ ಬಿಡುಗಡೆಯಾದ 15 ದಿನಗಳಲ್ಲೇ ಮತ್ತೆ ಕರ್ನಾಟಕ ನಂ.1 ಸ್ಥಾನಕ್ಕೆ ಬಂದಿದೆ. ಮಂಗಳೂರಿನ ಪಿಲಿಕುಳ ಪ್ರಾಣಿಸಂಗ್ರಹಾಲಯದಲ್ಲಿ ರಾಣಿ ಹೆಸರಿನ ರಾಯಲ್ ಬೆಂಗಾಲಿ ಟೈಗರ್ ಮೂರು ವಾರಗಳ ಹಿಂದೆ ಐದು ಮರಿಗಳಿಗೆ ಜನ್ಮ ನೀಡಿದೆ. ಈ ಐದು ಮರಿಗಳು ಆರೋಗ್ಯದಿಂದವೆ ಎಂದು ಪ್ರಾಣಿಸಂಗ್ರಹಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
-
Karnataka: Rani, the Royal Bengal tigress gave birth to five healthy cubs three weeks ago at Pilikula Biological Park in Mangaluru. pic.twitter.com/exjxu4miJu
— ANI (@ANI) September 1, 2019 " class="align-text-top noRightClick twitterSection" data="
">Karnataka: Rani, the Royal Bengal tigress gave birth to five healthy cubs three weeks ago at Pilikula Biological Park in Mangaluru. pic.twitter.com/exjxu4miJu
— ANI (@ANI) September 1, 2019Karnataka: Rani, the Royal Bengal tigress gave birth to five healthy cubs three weeks ago at Pilikula Biological Park in Mangaluru. pic.twitter.com/exjxu4miJu
— ANI (@ANI) September 1, 2019
ಭಾರತ ದೇಶದಲ್ಲಿ 2967 ಹುಲಿಗಳು ಇರುವುದಾಗಿ 2018ರ ಸಾಲಿನ ಹುಲಿ ಗಣತಿ ವರದಿಯಿಂದ ತಿಳಿದು ಬಂದಿತ್ತು. ಇದರಲ್ಲಿ ಕರ್ನಾಟಕದ ಹುಲಿಗಳ ಸಂಖ್ಯೆ 524 ಎಂದು ಲೆಕ್ಕ ಹಾಕಲಾಗಿತ್ತು. ಮಧ್ಯಪ್ರದೇಶದಲ್ಲಿ 526 ಹುಲಿಗಳಿದ್ದು ದೇಶದಲ್ಲಿಯೇ ಅತಿ ಹೆಚ್ಚು ಹುಲಿಗಳಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗ ಕರ್ನಾಟಕದಲ್ಲಿನ ಹುಲಿಗಳ ಸಂಖ್ಯೆ 524+5 ಸೇರಿ ಒಟ್ಟು 529 ಹುಲಿಗಳಾಗಲಿವೆ. ಈ ಮೂಲಕ ದೇಶದ ಹುಲಿಗಳ ರಾಜಧಾನಿ ಎಂಬ ಕರ್ನಾಟಕದ ಹೆಗ್ಗಳಿಕೆ ಈ ಬಾರಿಯೂ ಮುಂದುವರಿಯಲಿದೆ.
ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಹುಲಿಗಳ ಸಂಖ್ಯೆಯಲ್ಲಿ ಶೇ.33ರಷ್ಟು ಹೆಚ್ಚಳವಾಗಿದೆ. 2018ರ 4ನೇ ಗಣತಿಯ ಅನ್ವಯ, ದೇಶದಲ್ಲಿ 2967 ಹುಲಿಗಳಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಳಜಿಯಿಂದ 4 ವರ್ಷಗಳಲ್ಲಿ 741 ಹುಲಿಗಳು ಹೆಚ್ಚಿವೆ ಎಂಬುದು ಈ ಹಿಂದಿನ ವರದಿಯಲ್ಲಿ ಉಲ್ಲೇಖವಾಗಿತ್ತು.