ಬೆಂಗಳೂರು: ನಗರದಲ್ಲಿ ಹಾಡ ಹಗಲೇ ನಡುರಸ್ತೆಯಲ್ಲೇ ರೌಡಿ ಶೀಟರ್ ಬರ್ಬರ ಕೊಲೆಯಾಗಿದ್ದು, ರಾಜಗೋಪಾಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲಗ್ಗೆರೆಯಲ್ಲಿ ಘಟನೆ ನೆಡೆದಿದೆ.
ಸ್ಥಳಕ್ಕೆ ರಾಜಗೋಪಾಲ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೌಡಿ ಶೀಟರ್ ಶ್ರೀನಿವಾಸ್ ಅಲಿಯಾಸ್ ಕರಿ ಸೀನ ಎಂಬಾತನ ಹತ್ಯೆ ನೆಡೆದಿದೆ.
ಇದನ್ನೂ ಓದಿ: ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಕುಖ್ಯಾತ ಕಳ್ಳನ ಕಾಲಿಗೆ ಗುಂಡೇಟು
ಮಾರಕಾಸ್ತ್ರದಿಂದ ಹಲ್ಲೆಗೈದ ದುಷ್ಕರ್ಮಿಗಳು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಓಡಿ ಹೋಗಿದ್ದಾರೆ. ಘಟನೆಯಲ್ಲಿ ಗಂಭಿರವಾಗಿ ಗಾಯಗೊಂಡಿದ್ದ ಕರಿ ಸೀನನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಹಳೆದ್ವೇಷದ ಹಿನ್ನೆಲೆ ಕೊಲೈಗೈದಿರುವ ಶಂಕೆ ವ್ಯಕ್ತವಾಗಿದೆ.