ETV Bharat / state

ಅಪ್ರಾಪ್ತ ಮಗನ ಜೊತೆ ವಕೀಲನ ಸುಲಿಗೆ: ಹಳೆ ಚಾಳಿ ಮುಂದುವರೆಸಿದ ರೌಡಿ ಸೆರೆ

ಅಪ್ರಾಪ್ತ ಮಗನೆದುರು ಕಾರು ಅಡ್ಡಗಟ್ಟಿ ವಕೀಲನ ಸುಲಿಗೆ ಮಾಡಿದ್ದ ರೌಡಿಶೀಟರ್ ಮನ್ಸೂರ್ ದಾನ್ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

rowdy sheeter
ರೌಡಿಶೀಟರ್
author img

By

Published : Dec 7, 2022, 8:30 PM IST

ಬೆಂಗಳೂರು: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಗೊಂಡಿದ್ದ ರೌಡಿಶೀಟರ್ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿ ಇದೀಗ ಜೈಲುಪಾಲಾಗಿದ್ದಾನೆ‌. ಶಿವಾಜಿನಗರ ಹಾಗೂ‌ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಮನ್ಸೂರ್ ದಾನ್ ಎಂಬಾತನನ್ನು ವಕೀಲನ ಕಾರು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಈತನ ಮಗನನ್ನೂ ವಶಕ್ಕೆ ಪಡೆದಿದ್ದು, ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಆರೋಪಿ, ಡಿಸೆಂಬರ್ 5 ರ ತಡರಾತ್ರಿ ನಾಗವಾರದ ಕನಕನಗರ ಬಳಿ ವಕೀಲ ಅಹಮ್ಮದ್ ಎಂಬವರ ಕಾರು ಅಡ್ಡಗಟ್ಟಿ ಹಲ್ಲೆ ಮಾಡಿ ಕಾರ್‌ ಜತೆಗೆ ಮೊಬೈಲ್ ದರೋಡೆ ಮಾಡಿ ಪರಾರಿಯಾಗಿದ್ದ. ಡಿ.ಜೆ.ಹಳ್ಳಿ ಪೊಲೀಸರಿಗೆ ವಕೀಲ ನೀಡಿದ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಇನ್‌ಸ್ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮನ್ಸೂರ್‌ನನ್ನು ಬಂಧಿಸಿದ್ದಾರೆ.

20ಕ್ಕಿಂತ ಹೆಚ್ಚು ಅಪರಾಧ ಪ್ರಕರಣ: ಕೊಲೆ, ಕೊಲೆಯತ್ನ, ದರೋಡೆ ಸೇರಿ ಸುಮಾರು 20ಕ್ಕಿಂತ ಹೆಚ್ಚು ಕೇಸ್‌ಗಳಲ್ಲಿ ಮನ್ಸೂರ್ ದಾನ್ ಭಾಗಿಯಾಗಿದ್ದಾನೆ. ಈ ಹಿಂದೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣದಲ್ಲೂ 14 ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದ. ಶಿವಾಜಿನಗರದಲ್ಲಿ ವಾಸವಾಗಿದ್ದ ಮನ್ಸೂರ್, ಹಣಕ್ಕಾಗಿ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದ. 16 ವರ್ಷದ ಮಗನನ್ನೂ ಜತೆಗೆ ಕರೆದುಕೊಂಡು ದುಷ್ಕೃತ್ಯ ಎಸಗುತ್ತಿದ್ದನು.

ಇದನ್ನೂ ಓದಿ: ನಾಗರ ಹಾವು ರಕ್ಷಿಸಲು ಹೋಗಿ ದಿಢೀರ್ ಬ್ರೇಕ್‌ ಹಾಕಿದ ಲಾರಿ ಚಾಲಕ; ಸರಣಿ ಅಪಘಾತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.