ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಹೋಟೆಲ್ ಒಳಗೆ ನುಗ್ಗಿ ಪುಡಿ ರೌಡಿಗಳು ದಾಂಧಲೆ ನಡೆಸಿ, ಮಾಲೀಕನ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಅಮೃತ್‌ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಶಿವರಾಜ್, ವಿಶ್ವನಾಥ್ ಹಾಗೂ ಚೇತನ್ ಸೇರಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಘಟನೆಯಲ್ಲಿ ಹೋಟೆಲ್ ಮಾಲೀಕ ಹರೀಶ್ ಹಾಗೂ ತಂದೆ ಆಂಜನೇಯಲು ಎಂಬುವರ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
![FIR](https://etvbharatimages.akamaized.net/etvbharat/prod-images/kn-bng-10-petty-rowdies-atack-restaurant-owner-beaten-five-arrested-ka10032_11072021204957_1107f_1626016797_462.jpg)
ಹರೀಶ್ ಅವರು ಭುವನೇಶ್ವರಿ ನಗರದಲ್ಲಿ 7ಸ್ಟಾರ್ ಮಲ್ಟಿ ಕುಸೈನ್ ಹೆಸರಿನ ಹೋಟೆಲ್ ಹೊಂದಿದ್ದಾರೆ. ಹೋಟೆಲ್‌ನಲ್ಲಿ ಮನೀಷ್ ಎಂಬ ಯುವಕ ಕೆಲಸ ಮಾಡಿಕೊಂಡಿದ್ದ. ಜುಲೈ 4 ರಂದು ಆರೋಪಿಗಳ ಗ್ಯಾಂಗ್ ಹೋಟೆಲ್‌ಗೆ ಬಂದು ಮನೀಷ್‌ನನ್ನು ಹೊರಗೆ ಕರೆಯಿರಿ ಎಂದಿದ್ದಾರೆ. ಈ ವೇಳೆ ಮಾಲೀಕ ಆರೋಪಿಗಳಿಗೆ, ಮನೀಷ್ ಗ್ರಾಹಕರಿಗೆ ಅರ್ಡರ್ ಕೊಡಲು ಹೋಗಿದ್ದಾನೆ. ಸ್ವಲ್ಪ ಸಮಯ ಕಾಯುವಂತೆ ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಆರೋಪಿಗಳು, ನಾವು ಕಾಯಬೇಕಾ? ಎಲ್ಲಿಂದಲೋ ಬಂದ ವ್ಯಕ್ತಿಗಾಗಿ ನಮಗೆ ಕಾಯುವಂತೆ ಹೇಳುತ್ತೀಯಾ? ಎಂದು ಹೋಟೆಲ್‌ನಲ್ಲಿ ದಾಂಧಲೆ ನಡೆಸಿದ್ದಾರೆ.
![FIR](https://etvbharatimages.akamaized.net/etvbharat/prod-images/kn-bng-10-petty-rowdies-atack-restaurant-owner-beaten-five-arrested-ka10032_11072021204957_1107f_1626016797_268.jpg)
ಇದನ್ನು ತಡೆಯಲು ಮುಂದಾದ ಮಾಲೀಕ ಹರೀಶ್ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದು, ರಕ್ಷಣೆಗೆ ಬಂದ ಹೋಟೆಲ್ ಮಾಲೀಕನ ತಂದೆ ಆಂಜನೇಯಲು ಮೇಲೂ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಮಾಲೀಕ ಕೊಟ್ಟ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
![FIR](https://etvbharatimages.akamaized.net/etvbharat/prod-images/kn-bng-10-petty-rowdies-atack-restaurant-owner-beaten-five-arrested-ka10032_11072021204957_1107f_1626016797_1032.jpg)
ಓದಿ: ಕೆಆರ್ಎಸ್ ಬಿರುಕು-ಅಕ್ರಮ ಗಣಿಗಾರಿಕೆ ಸದ್ದು: ಬೇಬಿ ಬೆಟ್ಟ, ಸುತ್ತಮುತ್ತಲಿನ ಕಲ್ಲು ಗಣಿಗಾರಿಕೆಯ ಅಸಲಿಯತ್ತೇನು?