ಬೆಂಗಳೂರು : ಅಂಡರ್ವಲ್ಡ್ ಲೋಕದಲ್ಲಿ ಸಾಕಷ್ಟು ಕುಖ್ಯಾತಿಗಳಿಸಿದ್ದ ಬೆಂಗಳೂರಿನ ರೌಡಿ ಕೊರಂಗು ಕೃಷ್ಣ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ.
ಕೃಷ್ಣಮೂರ್ತಿ ಅಲಿಯಾಸ್ ಕೊರಂಗು ಕೃಷ್ಣ ಹಲವು ದಿನಗಳಿಂದ ಲಿವರ್ ಡ್ಯಾಮೇಜ್ನಿಂದ ಬಳಲುತ್ತಿದ್ದ. ಈ ಸಂಬಂಧ ಚಿತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ದಶಕದ ಹಿಂದೆ ಹೆಬ್ಬೆಟ್ಟು ಮಂಜ ಅಂಡ್ ಟೀಂನಿಂದ ಕೊರಂಗು ಮೇಲೆ ಆಟ್ಯಾಕ್ ಆಗಿತ್ತು. ಹಿರಿಯೂರು ಡಾಬಾದಲ್ಲಿ ನಡೆದ ದಾಳಿಯಲ್ಲಿ ಕೊರೊಂಗು ಕೃಷ್ಣ ಕೈಕಟ್ ಆಗಿ ಬದುಕುಳಿದಿದ್ದ. ಇದಾದ ನಂತರ ಗಡಿಪಾರಾಗಿದ್ದ. ಬಳಿಕ ಚಿತ್ತೂರಿನಲ್ಲೇ ಬ್ಯುಸಿನೆಸ್ ಮಾಡಿಕೊಂಡಿದ್ದ. 1990ರಲ್ಲಿ ರೌಡಿಸಂನಲ್ಲಿ ಆ್ಯಕ್ಟೀವ್ ಆಗಿದ್ದ. 1994ರಲ್ಲಿ ತೆರೆಕಂಡ ಓಂ ಸಿನಿಮಾದಲ್ಲಿ ಈ ಕೊರಂಗು ಕೃಷ್ಣ ಅಭಿನಯಿಸಿದ್ದ.