ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳಿಂದ ರೋಷನ್ ಬೇಗ್ ಮುಕ್ತಿ ಪಡೆದಿದ್ದಾರೆ.
ಹೌದು, ಈಗಾಗ್ಲೇ ಪ್ರಕರಣವನ್ನ ರಾಜ್ಯ ಸರ್ಕಾರ ಸಿಬಿಐಗೆ ವರ್ಗಾವಣೆ ಮಾಡಿದೆ. ಹೀಗಾಗಿ ಇನ್ಮುಂದೆ ಪ್ರಕರಣವನ್ನ ಸಿಬಿಐ ಕೈಗೆತ್ತಿಕೊಂಡು ತನಿಖೆ ನಡೆಸಲಿದೆ.
ರಾಜ್ಯ ಸರ್ಕಾರವೇ ಪ್ರಕರಣವನ್ನ ವರ್ಗಾವಣೆ ಮಾಡಿದ್ದು, ಪ್ರಕರಣದಿಂದ ಎಸ್ಐಟಿ ಕೊಂಚ ಹಿಂದೆ ಸರಿದಿದೆ ಎಂದು ಎಸ್ಐಟಿ ಹಿರಿಯ ಅಧಿಕಾರಿವೋರ್ವರು ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಇದೇ ಕಾರಣಕ್ಕೆ ರೋಷನ್ ಬೇಗ್ ಎಸ್ಐಟಿ ಎದುರು ಹಾಜರಾಗದೆ, ಸಿಬಿಐ ಒಂದು ವೇಳೆ ಬುಲಾವ್ ಕೊಟ್ಟರೆ ನೇರವಾಗಿ ಸಿಬಿಐ ಎದುರೇ ಹಾಜರಾಗಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.
ಇನ್ನು ಐಎಂಎ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮನ್ಸೂರ್ ಆಡಿಯೋ ಹಾಗೂ ವಿಡಿಯೋ ಬಿಡುಗಡೆಯಾಗಿ ರೋಷನ್ ಬೇಗ್ ಹೆಸರು ಪ್ರಸ್ತಾಪವಾಗಿತ್ತು. ಹೀಗಾಗಿ ಎರಡು ಬಾರಿ ಎಸ್ಐಟಿ ವಿಚಾರಣೆ ನಡೆಸಿ ರೋಷನ್ ಬೇಗ್ ರನ್ನು ಬಿಟ್ಟು ಕಳುಹಿಸಿದ್ದರು. ಅನಂತರ ಎಸ್ಐಟಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು. ಆದರೆ ಬೇಗ್ ಗೈರಾಗಿದ್ದರು.