ETV Bharat / state

ಹಾಡಹಗಲೇ ವ್ಯಕ್ತಿಯ ದರೋಡೆ ಮಾಡಿದ ಖದೀಮರು: ಇಬ್ಬರ ಬಂಧನ

ಮೂವರು ಹಗಲು ದರೋಡೆಕೋರರು ಹೂ ತರಲು ಹೋಗುತ್ತಿದ್ದ ವ್ಯಕ್ತಿಯನ್ನು ನಿಲ್ಲಿಸಿ, ಆತನ ಮೇಲೆ ಹಲ್ಲೆ ನಡೆಸಿ ಮೊಬೈಲ್ ಹಾಗೂ ನಾಲ್ಕು ಸಾವಿರ ರೂ. ನಗದನ್ನ ದೋಚಿ ಪರಾರಿಯಾಗಿದ್ದರು. ಇದೀಗ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಓರ್ವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಹಗಲಲ್ಲೇ ವ್ಯಕ್ತಿಯ ದರೋಡೆ ಮಾಡಿದ ದರೋಡೆಕೋರರು
ಹಗಲಲ್ಲೇ ವ್ಯಕ್ತಿಯ ದರೋಡೆ ಮಾಡಿದ ದರೋಡೆಕೋರರು
author img

By

Published : Mar 18, 2021, 4:05 PM IST

ಬೆಂಗಳೂರು: ಮುಂಜಾನೆ ವ್ಯಕ್ತಿಯೊಬ್ಬರು ತಮ್ಮ ದ್ವಿಚಕ್ರ ವಾಹನದಲ್ಲಿ ಹೂ ತರಲು ನಗರದ ಮಾರ್ಕೆಟ್​​ಗೆ ಹೊಗುತ್ತಿರುವಾಗ ಏಕಾಏಕಿ ಹಿಂಬದಿಯಿಂದ ಬಂದ ಮೂವರು ಹಗಲು ದರೋಡೆಕೋರರು ವ್ಯಕ್ತಿಯನ್ನು ನಿಲ್ಲಿಸಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಆತನ ಬಳಿಯಿದ್ದ ಮೊಬೈಲ್ ಹಾಗೂ ನಾಲ್ಕು ಸಾವಿರ ರೂ. ನಗದನ್ನ ದೋಚಿ ಪರಾರಿಯಾಗಿದ್ದರು.

ಒಂದು ದ್ವಿಚಕ್ರ ವಾಹನ‌, ಮೊಬೈಲ್ ಮತ್ತು ಹಣವನ್ನ ವಶಕ್ಕೆ ಪಡೆದ ಪೊಲೀಸರು

ಹಲ್ಲೆಗೊಳಗಾದ ವ್ಯಕ್ತಿ ವಿಜಯನಗರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳಾದ ಶಂಕರ್ ಅಲಿಯಾಸ್ ತಮಿಳ್ ಹಾಗೂ ಶಂಕರ್ ಅಲಿಯಾಸ್ ತಿರುಪತಿ ಎಂಬುವವರನ್ನ ಬಂಧಿಸಿದ್ದಾರೆ.‌‌

ಓದಿ:ಯುವತಿಯ ಪರಿಚಯವಿತ್ತು, ಸಿಡಿ ಬಗ್ಗೆ ನನಗೆ ಗೊತ್ತಿಲ್ಲ: ಆರೋಪಿ ನರೇಶ್ ಗೌಡ

ಇನ್ನೋರ್ವ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಆರೋಪಿಗಳನ್ನ ಬಂಧಿಸಿ, ಇವರಿಂದ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ‌, ಮೊಬೈಲ್ ಮತ್ತು ಹಣವನ್ನ ವಶಕ್ಕೆ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.