ETV Bharat / state

ಮೈಸೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ; ದ್ವಿಚಕ್ರ ವಾಹನ ಸವಾರ ಸಾವು - ಚಿಕ್ಕಪೇಟೆ ಸಂಚಾರ ಪೊಲೀಸರು

ಹೊಸ ವರ್ಷದಂದೇ ಮೈಸೂರು ರಸ್ತೆಯ ಹಳೇಗುಡ್ಡದ ಹಳ್ಳಿ ಬಳಿ ಟಿಪ್ಪರ್​ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ನಡೆಯಿತು.

An accident took place between a tipper and a two-wheeler near Halegudda village on Mysore road.
ಮೈಸೂರು ರಸ್ತೆಯ ಹಳೇಗುಡ್ಡದ ಹಳ್ಳಿ ಬಳಿ ಟಿಪ್ಪರ್​ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದೆ.
author img

By

Published : Jan 1, 2023, 1:16 PM IST

ಬೆಂಗಳೂರು : ಇಂದು ಬೆಳಿಗ್ಗೆ ಮೈಸೂರು ರಸ್ತೆಯ ಹಳೇಗುಡ್ಡದ ಹಳ್ಳಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ದೇವರಾಜ್ ಎಂಬವರು ಸಾವನ್ನಪ್ಪಿದ್ದಾರೆ. ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾಗಿ ದುರಂತ ಘಟಿಸಿದೆ. ಬೈಕ್ ಹಿಂಬದಿಯಲ್ಲಿದ್ದ ಮತ್ತೋರ್ವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ.

ಹೊಸಕೆರೆ ಹಳ್ಳಿಯಲ್ಲಿ ವಾಸವಿದ್ದ ಯಾದಗಿರಿ ಮೂಲದ ದೇವರಾಜ್ ಹೂ ತರಲೆಂದು ತನ್ನ ಸ್ನೇಹಿತ ದೇವರಾಜ್ ಜೊತೆ ದ್ವಿಚಕ್ರ ವಾಹನದಲ್ಲಿ ಕೆ.ಆರ್.ಮಾರ್ಕೆಟ್‌ಗೆ ಹೋಗುತ್ತಿದ್ದಾಗ ಹೊಸಗುಡ್ಡದ ಹಳ್ಳಿ ಬಳಿ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿಯಾಗಿದೆ. ಟಿಪ್ಪರ್​ ಅಪಘಾತ ಸ್ಥಳದಿಂದ ಸುಮಾರು ನೂರು ಮೀಟರ್ ದೂರದವರೆಗೆ ದ್ವಿಚಕ್ರ ವಾಹನವನ್ನು ಎಳೆದೊಯ್ದಿದೆ. ಪರಿಣಾಮ ದೇವರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಿಂಬದಿ ಸವಾರ ದೇವರಾಜ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟಿಪ್ಪರ್ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ ಚಿಕ್ಕಪೇಟೆ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹೊಸ ವರ್ಷದ ಸಂಭ್ರಮದಲ್ಲಿ ಶೋಕ: ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.