ETV Bharat / state

ಐಎಂಎ ಪ್ರಕರಣ: ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ವಿರುದ್ಧ ಹೈಕೋರ್ಟ್​ಗೆ ರಿಟ್

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ವಿರುದ್ದ ಹೈಕೋರ್ಟ್​ಗೆ ರಿಟ್ ಸಲ್ಲಿಕೆ ಮಾಡಲಾಗಿದೆ.

author img

By

Published : Jul 30, 2019, 7:22 PM IST

ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ವಿರುದ್ಧ ಹೈಕೋರ್ಟ್​ಗೆ ರಿಟ್ ಸಲ್ಲಿಕೆ ಮಾಡಲಾಗಿದೆ.

ಆದರ್ಶ್. ಆರ್.ಅಯ್ಯರ್ ಎಂಬುವವರು ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದು, ರಿಟ್ ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ. ರಿಟ್​ನಲ್ಲಿ ಐಎಂಎ‌ ಪ್ರಕರಣ ಸಂಬಂಧದಲ್ಲಿ ನಿಂಬಾಳ್ಕರ್​ಗೆ ಎಸ್ಐಟಿ ತನಿಖಾಧಿಕಾರಿಗಳು ಕ್ಲೀನ್ ಚಿಟ್ ನೀಡಿದ್ದಾರೆ. ಕ್ಲೀನ್ ಚಿಟ್​ ಅನ್ನು ದುರುದ್ದೇಶ ಪೂರಕವಾಗಿಯೇ ನೀಡಿರುವ ಸಾಧ್ಯತೆ ಇದ್ದು, ಹೇಮಂತ್ ನಿಂಬಾಳ್ಕರ್ ವಿರುದ್ದ ನಿಷ್ಪಕ್ಷಪಾತ ತನಿಖೆ ಮಾಡಬೇಕು. ಸದ್ಯ ಎಸಿಬಿ ಐಜಿಪಿಯಾಗಿರುವ ಅವರನ್ನು ಅಮಾನತಿನಲ್ಲಿಡಬೇಕು ಎಂದು ಮನವಿ ಮಾಡಿದ್ದಾರೆ.

ನಿಂಬಾಳ್ಕರ್ ಅಧೀನ ಅಧಿಕಾರಿಯಾಗಿದ್ದಾರೆ, ಇದರಿಂದ ವಿಚಾರಣೆ ಮಾಡಲು ಕಷ್ಟವಾಗಲಿದೆ. ಅಲ್ಲದೇ ಸದ್ಯದ ತಮ್ಮ ಹುದ್ದೆ ಮೂಲಕ ಒತ್ತಡ ತರಬಹುದು. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ರಾಜ್ಯ ಸರ್ಕಾರ ಮತ್ತು ಎಇಜಿಯವರಿಗೆ ಆದೇಶಿಸಲು‌ ರಿಟ್ ಮೂಲಕ ಮನವಿ ಸಲ್ಲಿಕೆ ಮಾಡಿದ್ದಾರೆ.

Intro:Body:

high court

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.