ಬೆಂಗಳೂರು: ಪ್ರತಿನಿತ್ಯ ಇಂಧನ ಬೆಲೆ ಏರಿಕೆ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಸುಮಾರು 30-40% ದುಬಾರಿಯಾಗುತ್ತಿವೆ. ಹೀಗೆ ಡೀಸೆಲ್-ಪೆಟ್ರೋಲ್ ಬೆಲೆ ದುಬಾರಿಯಾದರೆ ಜನಸಾಮಾನ್ಯನಿಗೆ ಇನ್ನಷ್ಟು ಹೊರೆಯಾಗುವುದು ನಿಶ್ಚಿತ.
ಫೆ. 11ರ ಡೀಸೆಲ್ ಬೆಲೆ ನಗರದಲ್ಲಿ ₹82.72, ಪೆಟ್ರೋಲ್ ಬೆಲೆ ₹ 90.78 ದಾಖಲೆ ಆಗಿದೆ. ಹೆಚ್ಚಳಗೊಂಡ ಇಂಧನ ಬೆಲೆ ನೇರ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಲೇ ಇದೆ. ಸಗಟು ಮಾರುಕಟ್ಟೆಯಲ್ಲಿ ಸುಮಾರು ಶೇ. 40ರಷ್ಟು ಹೆಚ್ಚಾಗಿದೆ ಎಂದು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ರಮೇಶ್ ಚಂದ್ರ ತಿಳಿಸಿದ್ದಾರೆ.
ದಿನಸಿ ಕೆಜಿಗೆ ಪ್ರಸ್ತುತ ಬೆಲೆ: ಪ್ರತಿ ಕೆಜಿಗೆ ರೂ.ಗಳಲ್ಲಿ
1. ಸೋನಾ ಮಸೂರಿ (1 ವರ್ಷ ಹಳೆದು) : 45-56
2. ಸೋನಾ ಮಸೂರಿ (2 ವರ್ಷ ಹಳೆದು): 52-57
3. ಸ್ಟೀಮ್ ಅಕ್ಕಿ (ಕೊಲಂ): 44:49
4. ಗೋಲ್ಡ್ ವಿನ್ನರ್/ಸನ್ ಪ್ಯೂರ್ : 142-170
5. ಬಟಾಣಿ: 125-160
6. ಹೆಸರುಕಾಳು: 105-125
7. ಉದ್ದಿನ ಬೇಳೆ : 120-135
8. ಕಡಲೆ ಬೇಳೆ: 65-72
9. ತೊಗರಿ ಬೇಳೆ: 110-130
ಈ ರೀತಿ ಬೆಲೆ ಏರಿಕೆ ಆಗುತ್ತಿರುವುದು ಹೋಟೆಲ್ನಲ್ಲಿ ಬೆಲೆ ಕೂಡ ಏರಿಕೆಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಕೂಡಲೇ ಪೆಟ್ರೋಲ್-ಡೀಸೆಲ್ ಜಿಎಸ್ಟಿ ವ್ಯಾಪ್ತಿಗೆ ತರಬೇಕು ಎಂದು ನಗರ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ. ಇಂಧನ ಬೆಲೆ ಏರಿಕೆ ಪರಿಣಾಮ ನೇರವಾಗಿ ಪ್ರವಾಸೋದ್ಯಮ ವಲಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೋವಿಡ್ ಮಹಾಮಾರಿ ಈಗಾಗಲೇ ಆತಿಥ್ಯ ವಲಯಕ್ಕೆ ದೊಡ್ಡ ಹೊಡೆತ ನೀಡಿದೆ. ಡೀಸೆಲ್ ಬೆಲೆ ಏರಿಕೆಯಿಂದ ಅನಿವಾರ್ಯವಿದ್ದರೂ ಬಾಡಿಗೆ ಹಣ ಹೆಚ್ಚಳ ಮಾಡುತ್ತಿಲ್ಲ. ಬೆಲೆ ಹೆಚ್ಚಾದರೆ ವ್ಯಾಪಾರ ಕೂಡ ಆಗುವುದಿಲ್ಲ ಎಂದು ಟ್ರಾವೆಲ್ಸ್ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಹೇಳಿದ್ದಾರೆ.