ETV Bharat / state

ಸಿಸಿಬಿ ಕಚೇರಿಯತ್ತ ರಿಕ್ಕಿ.. ಸಂಜೆ ವೇಳೆಗೆ ಮುತ್ತಪ್ಪ ರೈ ಮಗನ ಬಂಧನ ಸಾಧ್ಯತೆ - CCB Raid on Ricky Rai updates

ಬಿಡದಿಯ ನಿವಾಸದಿಂದ ಸಿಸಿಬಿ ಕಚೇರಿಗೆ ರಿಕ್ಕಿ ರೈ ಅವರನ್ನು ಕರೆತರುತ್ತಿದ್ದಾರೆ. ಕೆಲವು ದಾಖಲೆಗಳು ಸಿಕ್ಕ ಕಾರಣ ಸಂಜೆ ವೇಳೆಗೆ ರಿಕ್ಕಿ ರೈನನ್ನು ಬಂಧಿಸಿ ವಶಕ್ಕೆ ಪಡೆಯುವ ಎಲ್ಲಾ ಸಾಧ್ಯತೆ ಇದೆ.

ಸಿಸಿಬಿ ಕಚೇರಿಯತ್ತ ರಿಕ್ಕಿ ರೈ
ಸಿಸಿಬಿ ಕಚೇರಿಯತ್ತ ರಿಕ್ಕಿ ರೈ
author img

By

Published : Oct 6, 2020, 3:59 PM IST

Updated : Oct 6, 2020, 4:45 PM IST

ಬೆಂಗಳೂರು/ರಾಮನಗರ : ಮುತ್ತಪ್ಪ ರೈ ಮಗನಿಗೆ ಡ್ರಗ್ಸ್‌ ಕೇಸ್ ಕಂಟಕವಾಗಿದೆ. ಸದ್ಯ ಮುಂಜಾನೆಯಿಂದ ಸದಾಶಿವನಗರದ ಬಳಿ ಇರುವ ಅಪಾರ್ಟ್‌ಮೆಂಟ್ ಹಾಗೂ ಬೆಂಗಳೂರು ಹೊರವಲಯದ ಬಿಡದಿ ಮನೆಯಲ್ಲಿ ರಿಕ್ಕಿ ರೈ ಮುಂದಿಟ್ಟುಕೊಂಡು ಸಿಸಿಬಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ತನಿಖಾಧಿಕಾರಿಗಳಿಗೆ ಬೇಕಾದ ಮಹತ್ತರ ದಾಖಲೆ ಹಾಗೂ ಕೆಲ ವಸ್ತುಗಳು ದೊರೆತಿವೆ.

ಬೆಳಗ್ಗೆ 6:30ಕ್ಕೆ ಸದಾಶಿವನಗರದ ರಿಕ್ಕಿ ಫ್ಲ್ಯಾಟ್ ಮೇಲೆ ಸುಮಾರು 25ಕ್ಕೂ ಹೆಚ್ಚು ಅಧಿಕಾರಿಗಳ ತಂಡ ರೇಡ್ ಮಾಡಿ, ಸತತ ನಾಲ್ಕು ಗಂಟೆಗಳ ಕಾಲ ಪರಿಶೀಲನೆ ನಡೆಸಿದೆ. ನಂತರ 10.30ರ ಸುಮಾರಿಗೆ ಬಿಡದಿಯ ನಿವಾಸಕ್ಕೆ ಕರೆದೊಯ್ದು, 11.30ರಿಂದ ಮಧ್ಯಾಹ್ನ 2.30ರವರೆಗೂ ರೈ ನಿವಾಸದಲ್ಲಿ ಸಿಸಿಬಿ ಪೊಲೀಸರು ಶೋಧ ಮಾಡಿದ್ದಾರೆ.

ಬಿಡದಿಯ ನಿವಾಸದಿಂದ ಸಿಸಿಬಿ ಕಚೇರಿಗೆ ರಿಕ್ಕಿ ರೈ ಅವರನ್ನು ಕರೆತರುತ್ತಿದ್ದಾರೆ. ಕೆಲವು ದಾಖಲೆಗಳು ಸಿಕ್ಕ ಕಾರಣ ಸಂಜೆ ವೇಳೆಗೆ ರಿಕ್ಕಿ ರೈನನ್ನು ಬಂಧಿಸಿ ವಶಕ್ಕೆ ಪಡೆಯುವ ಎಲ್ಲಾ ಸಾಧ್ಯತೆ ಇದೆ.

ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದ ಅಧಿಕಾರಿಗಳು

ರಿಕ್ಕಿ ರೈ ಮಾಜಿ ಡಾನ್ ಮುತ್ತಪ್ಪ ರೈ ಮಗ. ಈತ ಡ್ರಗ್ಸ್‌ ಮಾಫಿಯಾದಲ್ಲಿ ಭಾಗಿಯಾಗಿದ್ದ ಪಾರ್ಟಿ ಆಯೋಜಕ ವೀರೇನ್ ಖನ್ನಾ ಹಾಗೂ ಆದಿತ್ಯ ಆಳ್ವಾನ ಜೊತೆ ಸಂಪರ್ಕ ಹೊಂದಿದ್ದ. ಆದಿತ್ಯ ಆಳ್ವಾ ತಲೆಮರೆಸಿಕೊಳ್ಳಲು ಈತ ಸಹಾಯ ಮಾಡಿದ್ದ. ಅಲ್ಲದೇ ಡ್ರಗ್ ಪೆಡ್ಲಿಂಗ್ ಮಾಡುವಲ್ಲಿ ಕೂಡ ಭಾಗಿಯಾಗಿದ್ದ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆ, ಇಂದು ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಿವಂಗತ ಮುತ್ತಪ್ಪ ರೈ ಅವರ ಮನೆಯ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿ ನಡೆಸುತ್ತಿದ್ದ ವಿಚಾರಣೆ ಅಂತ್ಯಗೊಂಡಿದ್ದು, ಬೆಂಗಳೂರಿನ ಕಡೆಗೆ ಮುತ್ತಪ್ಪ ರೈ ಪುತ್ರ ರಿಕ್ಕಿ ಹಾಗೂ ಸಿಸಿಬಿ ಅಧಿಕಾರಿಗಳ ಬೊಲೆರೋ ಕಾರ್ ನಲ್ಲಿ ತೆರಳಿದರು. ಬಿಡದಿ ನಿವಾಸಕ್ಕೆ 5 ಬೊಲೆರೋ ಕಾರ್ ಗಳಲ್ಲಿ ಬಂದಿದ್ದ ಅಧಿಕಾರಿಗಳ ತಂಡ ಬೆಳಿಗ್ಗೆ 6:30 ರಿಂದಲೂ ವಿಚಾರಣೆ ನಡೆಸಿತ್ತು. ಈಗಷ್ಟೇ ಬೆಂಗಳೂರು ಕಡೆಗೆ ಅಧಿಕಾರಿಗಳು ಪ್ರಯಾಣ ಬೆಳೆಸಿದ್ದಾರೆ.

Last Updated : Oct 6, 2020, 4:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.