ETV Bharat / state

ಖಾಸಗಿ ಲ್ಯಾಬ್​​​ಗಳು ನೇರ ಸೋಂಕಿತರಿಗೆ ಕರೆ ಮಾಡಿ ವರದಿಯ ರಿಸಲ್ಟ್ ಹೇಳುವಂತಿಲ್ಲ.. - 'ಖಾಸಗಿ ಲ್ಯಾಬ್​​​ಗಳು ನೇರವಾಗಿ ಸೋಂಕಿತರಿಗೆ ಕರೆ ಮಾಡುವ ಹಾಗಿಲ್ಲ'

ಎಸ್​​ಡಿಆರ್​​ಎಫ್ ಅಡಿ 742 ಕೋಟಿ ಅನುದಾನ ಲಭ್ಯವಿದೆ. ಈಗಾಗಲೇ ₹232 ಕೋಟಿಯನ್ನ ಎಲ್ಲಾ ಡಿಸಿಗಳಿಗೆ, ಆರೋಗ್ಯ ಇಲಾಖೆಗೆ ₹70 ಕೋಟಿ, ಬಿಬಿಎಂಪಿಗೆ 50 ಕೋಟಿ ರೂ., 12 ಕೋಟಿ ರೂ. ಪೊಲೀಸ್ ಇಲಾಖೆಗೆ ಸೇರಿ ಒಟ್ಟು 380 ಕೋಟಿ ರೂ. ಬಿಡುಗಡೆ..

Revenue Minister R Ashok press meet
ಕಂದಾಯ ಸಚಿವ ಆರ್. ಅಶೋಕ್ ಸುದ್ದಿಗೋಷ್ಠಿ
author img

By

Published : Jun 29, 2020, 3:34 PM IST

ಬೆಂಗಳೂರು : ಇನ್ಮುಂದೆ ಖಾಸಗಿ ಲ್ಯಾಬ್​​​ಗಳು ನೇರವಾಗಿ ಸೋಂಕಿತರಿಗೆ ಕರೆ‌ ಮಾಡುವ ಹಾಗಿಲ್ಲ. ಅವರು ಏನಿದ್ರೂ ಐಸಿಎಂಆರ್ ಹಾಗೂ ಪಾಲಿಕೆ ಪೋರ್ಟಲ್​​​ನಲ್ಲಿ ಮಾಹಿತಿ ಅಪ್​​​ಡೇಟ್ ಮಾಡಬೇಕು ಎಂದು ಕೋವಿಡ್-19 ನಿರ್ವಹಣಾ ಉಸ್ತುವಾರಿ ಕಂದಾಯ ಸಚಿವ ಆರ್ ಅಶೋಕ್ ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ‌ ಮಾತನಾಡಿದ ಅವರು, ಖಾಸಗಿ ಟೆಸ್ಟಿಂಗ್ ಕೇಂದ್ರದವರು ರಿಪೋರ್ಟ್ ಬರುವ ಮುನ್ನವೇ ರೋಗಿಗೆ ಕರೆ ಮಾಡಿ ಹೇಳುತ್ತಾರೆ‌. ಹಾಗೆ ಮಾಡುವ ಹಾಗಿಲ್ಲ. ಅವರೇನಿದ್ದರೂ ಮೊದಲು ಐಸಿಎಂಆರ್ ಮತ್ತು ಪಾಲಿಕೆ ಪೋರ್ಟಲ್​​ನಲ್ಲಿ ಪರೀಕ್ಷಾ ವರದಿಯನ್ನು ಅಪ್​​​ಡೇಟ್ ಮಾಡಬೇಕು. ಇಲ್ಲವಾದ್ರೆ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಖಾಸಗಿ ಲ್ಯಾಬ್​​ಗಳು ರಿಪೋರ್ಟ್​ನ ಅಪ್​​​ಡೇಟ್ ಮಾಡಿದ ತಕ್ಷಣ‌ ಪಾಲಿಕೆ ಆರೋಗ್ಯಾಧಿಕಾರಿಗಳು ಸಂಬಂಧಿತ ಸೋಂಕಿತರನ್ನು ಸಂಪರ್ಕಿಸಿ, ಅವರ ರೋಗ ಲಕ್ಷಣ ಅನುಸಾರವಾಗಿ ವಾರ್ಡ್ ಮಟ್ಟದಲ್ಲೇ ವಿಂಗಡನೇ ಮಾಡಿ ಕೋವಿಡ್ ನಿಗಾ ಕೇಂದ್ರಕ್ಕೆ ಕಳುಹಿಸಬೇಕೋ, ಇಲ್ಲಾ ಕೋವಿಡ್ ಆಸ್ಪತ್ರೆಗೆ ಕಳುಹಿಸಬೇಕೋ ಎಂಬ ಬಗ್ಗೆ ನಿರ್ಧರಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.

ಕೊರೊನಾ ಕುರಿತಂತೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್ ಅಶೋಕ್..

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕ್ಲೀನ್ ಮಾಡುವ ಸಿಬ್ಬಂದಿ, ಆ್ಯಂಬುಲೆನ್ಸ್ ಡ್ರೈವರ್, ಲಿಫ್ಟ್ ನಿರ್ವಹಿಸುವವರು ಯಾರೆಲ್ಲಾ ಪಿಪಿಇ ಕಿಟ್ ಬಳಸುತ್ತಾರೆ, ಆ ಸಿಬ್ಬಂದಿ ವೇತನ ಹೆಚ್ಚಿಸಲೂ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಪಾಲಿಕೆ‌ ವ್ಯಾಪ್ತಿಯಲ್ಲಿ 85 ಸಹಾಯಕ ವೈದ್ಯರನ್ನು ನೇಮಕ‌ ಮಾಡಲಾಗುತ್ತಿದೆ. ಪಾಲಿಕೆಯ ಸರ್ವಪಕ್ಷದ ಕಾರ್ಪೊರೇಟರ್​​ಗಳ ಸಭೆ ಕರೆಯಲಿದ್ದೇನೆ. ಅವರ ವಾರ್ಡ್​​ನಲ್ಲಿ ಸೀಲ್​​ಡೌನ್ ಸಂಬಂಧ ನಿಗಾವಹಿಸಲು, ಸೂಕ್ತ ವ್ಯವಸ್ಥೆ ‌ಮಾಡುವ ನಿಟ್ಟಿನಲ್ಲಿ ಅವರಿಗೆ ಉಸ್ತುವಾರಿ ನೀಡಲು ಮುಂದಾಗಿದ್ದೇವೆ ಎಂದು ವಿವರಿಸಿದರು.

ಬೆಂಗಳೂರಿನಲ್ಲಿ ಹೊಸದಾಗಿ ನೇಮಕವಾಗಿರುವ 20 ತಹಶೀಲ್ದಾರರನ್ನು ಕೋವಿಡ್ ಕೇರ್ ಸೆಂಟರ್‌ನಲ್ಲಿ ನಿಗಾವಹಿಸಲು ನಿಯೋಜಿಸಲಾಗುವುದು. ಜೊತೆಗೆ 198 ವಾರ್ಡ್​​ಗಳಲ್ಲಿ 10 ಎನ್‌ಜಿಒ ಸಮಿತಿಗಳನ್ನು ನಿಯೋಜಿಸಿ, ಆ ಪ್ರದೇಶದಲ್ಲಿನ ಕೋವಿಡ್-19 ಪ್ರಕರಣ ಸಂಬಂಧ ನಿಗಾವಹಿಸಿ, ಜನಜಾಗೃತಿ ‌ಮೂಡಿಸುವ ಹೊಣೆ ನೀಡಲಾಗುತ್ತದೆ ಎಂದರು.

ಮೃತ ದೇಹಗಳ ಸಾಗಾಟಕ್ಕೆ ಪ್ರತಿ ಝೋನ್​​ಗೆ ಎರಡು ಶಾಂತಿ ವಾಹನ ಒದಗಿಸಲು ವ್ಯವಸ್ಥೆ ಮಾಡಲಾಗುವುದು. ಎಸ್​​ಡಿಆರ್​​ಎಫ್ ಅಡಿಯಲ್ಲಿ 742 ಕೋಟಿ ಅನುದಾನ ಲಭ್ಯವಿದೆ. ಈಗಾಗಲೇ ₹232 ಕೋಟಿಯನ್ನ ಎಲ್ಲಾ ಡಿಸಿಗಳಿಗೆ, ಆರೋಗ್ಯ ಇಲಾಖೆಗೆ ₹70 ಕೋಟಿ, ಬಿಬಿಎಂಪಿಗೆ 50 ಕೋಟಿ ರೂ., 12 ಕೋಟಿ ರೂ. ಪೊಲೀಸ್ ಇಲಾಖೆಗೆ ಸೇರಿ ಒಟ್ಟು 380 ಕೋಟಿ ರೂ. ಬಿಡುಗಡೆ ಮಾಡಿದ್ದೇನೆ ಎಂದರು.

ಈಗಾಗಲೇ ಜಿಕೆವಿಕೆ 1000 ಹಾಸಿಗೆ, ಸರ್ಕಾರಿ ಆರ್ಯವೇದ ಕಾಲೇಜು ಹಾಸ್ಟೇಲ್ 300, ಹಜ್ ಭವನ 432, ಬೆಂಗಳೂರು ವಿವಿ ಹಾಸ್ಟೆಲ್ 1000, ತುಮಕೂರು ರಸ್ತೆಯ ಎಕ್ಸಿಬಿಷನ್ ಸೆಂಟರ್ ನಲ್ಲಿ 5,000 ಹಾಸಿಗೆ ವ್ಯವಸ್ಥೆ ಮಾಡಲು ನಿರ್ಧರಿಸಿದ್ದೇವೆ ಎಂದರು.

ತಜ್ಞರ ಸಮಿತಿ ಪ್ರಕಾರ ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮಕೈಗೊಳ್ಳಲಾಗುತ್ತಿದೆ. ಸೋಂಕಿತರ ಪರೀಕ್ಷೆ ಹೆಚ್ಚಾಗುತ್ತಿದೆ ಮತ್ತು ಸ್ಪ್ರೆಡ್ ಆಗುತ್ತಿರುವ ಕಾರಣದಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ವಿಕ್ಟೋರಿಯಾ ಆಸ್ಪತ್ರೆಗಳಯಲ್ಲಿ ಒಟ್ಟು 550 ಹಾಸಿಗೆ, 282 ಹಾಸಿಗೆ ಖಾಲಿ ಇದೆ.‌ ಐಸಿಯುನಲ್ಲಿ 20 ರೋಗಿಗಳು ಇದ್ದಾರೆ ಎಂದು ವಿವರಿಸಿದರು.

ಸೋಂಕಿತರಿಗೆ ಆಯುರ್ವೇದ ‌ಔಷಧ ನೀಡಲು ಮುಂದಾಗಿದ್ದೇವೆ. ರೋಗ ನಿರೋಧಕ ಶಕ್ತಿ ಜಾಸ್ತಿ ಇರುವ ಆಯುರ್ವೇದ ಔಷಧಿ ನೀಡಲು ಚಿಂತನೆ ಇದೆ. ನಾವೂ ಈಗಾಗಲೇ ಆಯರ್ವೇದ ಔಷಧವನ್ನು ಬೂಸ್ಟರ್ ಆಗಿ ತೆಗೆದುಕೊಂಡಿದ್ದೇವೆ. ಅದನ್ನು ಸೋಂಕಿತರಿಗೆ ನೀಡಲು ನಿರ್ಧರಿಸಿದ್ದೇವೆ ಎಂದರು. ಜುಲೈ 7ರ ಬಳಿಕ ಇನ್ನೂ ಹೆಚ್ಚಿನ ಕಠಿಣ ಕ್ರಮ ತೆಗೆದುಕೊಳ್ಳಲಿದ್ದೇವೆ. ಪಾರ್ಕ್ ಕಾರ್ಯ ನಿರ್ವಹಣೆ ಬಗ್ಗೆ ಮರು ಪರಿಶೀಲನೆ ಮಾಡಲಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.