ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ತಿಂಗಳು ಪ್ರವಾಹ ಸ್ಥಿತಿಯಿದ್ದು, ಕೇಂದ್ರ ಸರ್ಕಾರ 574.84 ಕೋಟಿ ರೂ. ಹಣ ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ 1057.87 ಕೋಟಿ ರೂ. ಹಣ ಬಿಡುಗಡೆಗೆ ಹಣಕಾಸು ಇಲಾಖೆಗೆ ಶಿಫಾರಸು ಮಾಡಲಾಗಿದೆ. ಸುಮಾರು 72 ಕೋಟಿ ರೂ. ವಿದ್ಯುತ್ಗೆ, ಲೋಕೋಪಯೋಗಿ ಇಲಾಖೆ 277 ಕೋಟಿ ರೂ. ಕೇಳಿದೆ. 152 ಕೋಟಿ ರೂ. ಸರ್ಕಾರಿ ಕಟ್ಟಡ ಡ್ಯಾಮೇಜ್ಗೆ ಬಿಡುಗಡೆ ಮಾಡಲಾಗಿದೆ. ಪ್ರವಾಹದ ವೇಳೆ ಮನೆ ಕಟ್ಟುವವರಿಗೆ ಹಣ ನೀಡಿದ್ದೇವೆ. ಐದು ಲಕ್ಷ ಮನೆ ನಿರ್ಮಾಣಕ್ಕೆ ಹಾಗೂ ಡ್ಯಾಮೇಜ್ಗೆ 3 ಲಕ್ಷ ಕೊಟ್ಟಿದ್ದೇವೆ. ಒಂದು ವರ್ಷ ಮುಗಿದಿದ್ದು, ಐದನೇ ಕಂತು ಜಿಲ್ಲಾಧಿಕಾರಿ ಅಕೌಂಟ್ಗೆ ಕೊಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.
ಕಳೆದ ಆರು ವರ್ಷದಲ್ಲಿ ಪ್ರವಾಹಕ್ಕೆ ಅನುದಾನ ಬಂದಿದ್ದು, ಕಾಂಗ್ರೆಸ್ನವರಿಗಿಂತ ಮೂರು ಪಟ್ಟು ಅನುದಾನ ಬಂದಿದೆ. 2008ರಿಂದ 2014ರವರೆಗೆ ಕಾಂಗ್ರೆಸ್ ಇತ್ತು. ಆಗ 720 ಕೋಟಿ ರೂ. ಕೇಂದ್ರದಿಂದ ಅನುದಾನ ಕೊಟ್ಟಿದ್ದಾರೆ. ನಮ್ಮ ಅವಧಿಯಲ್ಲಿ 1333 ಕೋಟಿ ರೂ. ಕೊಟ್ಟಿದ್ದಾರೆ. 2669 ಕೋಟಿ ರೂ. ಅನುದಾನವನ್ನು ಅವರು ಎನ್ಡಿಆರ್ಎಫ್ಗೆ ಕೊಟ್ಟಿದ್ದರು. ಆರು ವರ್ಷದಲ್ಲಿ 9279 ಕೋಟಿ ರೂ. ಕೇಂದ್ರ ಸರ್ಕಾರ ನೀಡಿದೆ ಎಂದು ಹೇಳಿದರು.
ವಿಮೆ ಹಣ ಬ್ಯಾಂಕ್ಗೆ:
ವಿಮೆ ಹಣ ಬಂದಿಲ್ಲವೆಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ವಿಮೆ ಹಣವನ್ನು ಬ್ಯಾಂಕ್ಗೆ ಹಾಕುತ್ತೇವೆ. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲು ಪೋಸ್ಟ್ ಆಫೀಸ್ ಮೂಲಕ ಕೊಡುವುದಕ್ಕೆ ಬ್ರೇಕ್ ಹಾಕಿದ್ದೇವೆ ಎಂದರು. ವೃದ್ಧಾಪ್ಯ ವೇತನವೂ ಬ್ಯಾಂಕ್ ಮೂಲಕವೇ ತಲುಪಲಿದೆ. ಡಿಬಿಟಿ ಮಾದರಿಯಲ್ಲಿ ಹಣ ವರ್ಗಾವಣೆಯಾಗಲಿದೆ. ಒಂದು ತಿಂಗಳೊಳಗೆ ಅಧಾರ್ ಲಿಂಕ್ ಮಾಡಿಸಬೇಕು. ಯಾವುದೇ ಬೋಗಸ್ ಇಲ್ಲದಂತೆ ನೋಡಿಕೊಳ್ಳುತ್ತೇವೆ. ಅಕೌಂಟ್ ಇಲ್ಲದವರು ಅಕೌಂಟ್ ಮಾಡಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ಹೊರಡಿಸುತ್ತೇವೆ ಎಂದು ಹೇಳಿದರು.