ETV Bharat / state

ಪರೀಕ್ಷೆ ಸಂದರ್ಭ ಐಐಟಿ ಕಾಲೇಜಿಗೆ ಬೀಗ ಹಾಕಿದ ಅಧಿಕಾರಿಗಳು.. ಆರ್​ಎಸ್​ಎಸ್​ ಕೈವಾಡ ಆರೋಪ - ಕಂದಾಯ ಇಲಾಖೆ ಅಧಿಕಾರಿಗಳು

ಕಾಲೇಜಿನ ವಿದ್ಯಾರ್ಥಿಗಳು ವಿಟಿಯು ಆಗಸ್ಟ್ 31ರಿಂದ ಸೆಪ್ಟೆಂಬರ್ 30ರವರೆಗೆ ನಿಗದಿಪಡಿಸಿದ್ದ ಪರೀಕ್ಷೆಗಳನ್ನು ಬರೆಯುತ್ತಿರುವ ಸಂದರ್ಭದಲ್ಲಿ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಒಳಗಾಗಿ ಕಾಲೇಜಿಗೆ ಬೀಗ ಹಾಕಿದ್ದಾರೆ. ಇದರಿಂದಾಗಿ ಕಾಲೇಜು ಕೊಠಡಿಯ ಸಿಸಿಟಿವಿ ಅಡಿಯಲ್ಲಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳು ಕಾಲೇಜು ಸಮೀಪದ ಶೆಡ್‌ನಲ್ಲಿ ಪರೀಕ್ಷೆಗಳನ್ನು ಬರೆದಿದ್ದಾರೆ..

Islamia Institute of Technology
ಇಸ್ಲಾಮಿಯಾ ಇನ್ಸ್​ಟಿಟ್ಯೂಟ್​​ ಆಫ್ ಟೆಕ್ನಾಲಜಿ
author img

By

Published : Sep 30, 2020, 9:04 PM IST

ಬೆಂಗಳೂರು : ಎಂಜಿನಿಯರಿಂಗ್ ಪರೀಕ್ಷೆಗಳು ನಡೆಯುತ್ತಿದ್ದ ಸಂದರ್ಭದಲ್ಲೇ ಕಂದಾಯ ಇಲಾಖೆ ಅಧಿಕಾರಿಗಳು ಕಾಲೇಜಿಗೆ ಬೀಗ ಹಾಕಿರುವ ಘಟನೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಕಾಲೇಜಿನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಈ ಕೃತ್ಯದ ಹಿಂದೆ ಆರ್​ಎಸ್​ಎಸ್​ ಮುಖಂಡರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ನಗರದ ದಕ್ಷಿಣ ತಾಲೂಕಿನ ಹುಳಿಮಾವು ಗ್ರಾಮದಲ್ಲಿರುವ ಇಸ್ಲಾಮಿಯಾ ಇನ್ಸ್​ಟಿಟ್ಯೂಟ್​​ ಆಫ್ ಟೆಕ್ನಾಲಜಿ(ಐಐಟಿ) ರಾಜ್ಯದ ಮೊಟ್ಟ ಮೊದಲ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯಾಗಿದೆ. ವಿಶ್ಷೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಿಂದ ಅನುಮೋದನೆ ಪಡೆದಿರುವ ಈ ಕಾಲೇಜಿಗೆ ಎಐಸಿಟಿಇ ಮಾನ್ಯತೆಯೂ ಸಿಕ್ಕಿದೆ. ಆದರೆ, ಕಾಲೇಜು ಕಾರ್ಯ ನಿರ್ವಹಿಸುತ್ತಿರುವ ಭೂಮಿಯ ಒಡೆತನ ಇದೀಗ ವಿವಾದಕ್ಕೆ ಕಾರಣವಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಪರೀಕ್ಷೆ ಸಂದರ್ಭದಲ್ಲಿಯೇ ಕಾಲೇಜಿಗೆ ಬೀಗ ಹಾಕಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್

ಅಧಿಕಾರಿಗಳಿಗೆ ಹೈಕೋರ್ಟ್ ಛೀಮಾರಿ : ಕಾಲೇಜಿನ ವಿದ್ಯಾರ್ಥಿಗಳು ವಿಟಿಯು ಆಗಸ್ಟ್ 31ರಿಂದ ಸೆಪ್ಟೆಂಬರ್ 30ರವರೆಗೆ ನಿಗದಿಪಡಿಸಿದ್ದ ಪರೀಕ್ಷೆಗಳನ್ನು ಬರೆಯುತ್ತಿರುವ ಸಂದರ್ಭದಲ್ಲಿ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಒಳಗಾಗಿ ಕಾಲೇಜಿಗೆ ಬೀಗ ಹಾಕಿದ್ದಾರೆ. ಇದರಿಂದಾಗಿ ಕಾಲೇಜು ಕೊಠಡಿಯ ಸಿಸಿಟಿವಿ ಅಡಿಯಲ್ಲಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳು ಕಾಲೇಜು ಸಮೀಪದ ಶೆಡ್‌ನಲ್ಲಿ ಪರೀಕ್ಷೆಗಳನ್ನು ಬರೆದಿದ್ದಾರೆ.

ಈ ಸಂಬಂಧ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ಹಾಕಿರುವ ಬೀಗ ತೆಗೆಯುವಂತೆ ಸೂಚಿಸಿರುವುದಲ್ಲದೇ, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಅಮಾನವೀಯವಾಗಿ ನಡೆದುಕೊಂಡಿರುವ ಅಧಿಕಾರಿಗಳಿಗೆ ಛೀಮಾರಿ ಹಾಕಿದೆ. ಜತೆಗೆ ಬೀಗ ಹಾಕಿದ್ದಕ್ಕೆ ವೈಯಕ್ತಿಕವಾಗಿ ಪ್ರಮಾಣ ಪತ್ರ ಸಲ್ಲಿಸುವಂತೆಯೂ ಸೂಚಿಸಿದೆ.

ಪ್ರಕರಣದ ಹಿನ್ನೆಲೆ : ರಾಜ್ಯದಲ್ಲಿ ಅಲ್ಪಸಂಖ್ಯಾತರ ಶಿಕ್ಷಣಕ್ಕಾಗಿ ಇಸ್ಲಾಮಿಕ್ ಮಿಷನ್ ಆಫ್ ಇಂಡಿಯಾ ಸಂಸ್ಥೆ ಈ ಕಾಲೇಜು ನಡೆಸುತ್ತಿದೆ. ವಿಟಿಯು ಅನುಮೋದನೆ ಹಾಗೂ ಎಐಸಿಟಿಇ ಮಾನ್ಯತೆ ದೊರೆತಿರುವ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ಅಲ್ಲದೇ, ಸರ್ಕಾರಿ ಕೋಟಾದಡಿ ಸೀಟು ಪಡೆದಿರುವ ವಿದ್ಯಾರ್ಥಿಗಳೂ ಕಲಿಯುತ್ತಿದ್ದಾರೆ. 1980ರಲ್ಲಿ ಕಾಲೇಜಿಗೆ ಸರ್ಕಾರವೇ ₹5.85 ಲಕ್ಷ ಕಟ್ಟಿಸಿಕೊಂಡು ಹುಳಿಮಾವು ಗ್ರಾಮದ ಸರ್ವೇ ನಂ.63 ರಲ್ಲಿ ಒಟ್ಟು 8 ಎಕರೆ ಭೂಮಿ ಮಂಜೂರಿಗೆ ಆದೇಶ ಹೊರಡಿಸಿತ್ತಂತೆ. ಆದರೆ, ಇದೇ ವೇಳೆ ಕಾಲೇಜಿನ ಆಡಳಿತ ಮಂಡಳಿ ನಡುವೆ ವಿವಾದಗಳಾಗಿದ್ದವು.

ಈ ಸಂದರ್ಭದಲ್ಲಿ ಸರ್ಕಾರವೇ ಆಡಳಿತಾಧಿಕಾರಿ ನೇಮಕ ಮಾಡಿತ್ತು. ಅಲ್ಪಸಂಖ್ಯಾತರ ಸಂಸ್ಥೆಗೆ ಆಡಳಿತಾಧಿಕಾರಿ ನೇಮಕ ಮಾಡುವುದು ಸೂಕ್ತವಲ್ಲ ಎಂದು ಹಿಂದಿನ ಆಡಳಿತ ಮಂಡಳಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಬಳಿಕ ಕೋರ್ಟ್ ಸೂಚನೆಗೆ ಮೇರೆಗೆ ಹೊಸದಾಗಿ ನೇಮಕಗೊಂಡ ಆಡಳಿತ ಮಂಡಳಿ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಅವರ ನೇತೃತ್ವದಲ್ಲಿ ನಡೆದುಕೊಂಡು ಬರುತ್ತಿದೆ.

ಈ ನಡುವೆ 2009ರಲ್ಲಿ ದಕ್ಷಿಣ ವಿಭಾಗದ ತಹಶೀಲ್ದಾರ್ ಕಾಲೇಜಿಗೆ ನೋಟಿಸ್ ಜಾರಿ ಮಾಡಿ, ಭೂ ಒಡೆತನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದರು. ನಂತರ ದಾಖಲೆಗಳ ಪ್ರಕಾರ ಜಮೀನು ನಿಮ್ಮದಲ್ಲ. ಬದಲಿಗೆ ಸರ್ಕಾರಕ್ಕೆ ಸೇರಬೇಕು ಎಂದು ತಿಳಿಸುತ್ತಾರೆ. ಈ ಹಿನ್ನೆಲೆ ಕಾಲೇಜು ಆಡಳಿತ ಮಂಡಳಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿತ್ತು.

ವಿದ್ಯಾರ್ಥಿಗಳ ಭವಿಷ್ಯ ಪರಿಗಣಿಸಲು ಹೈಕೋರ್ಟ್ ಸೂಚಿಸಿತ್ತು : ಭೂ ಒಡೆತನಕ್ಕಾಗಿ 2009ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದಾಗ, ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಕಾಲೇಜಿನಲ್ಲಿ 500 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಅದರಲ್ಲಿ 250 ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಪ್ರವೇಶ ಪಡೆದು ತಾಂತ್ರಿಕ ಶಿಕ್ಷಣ ಪಡೆಯುತ್ತಿದ್ದಾರೆ.

ಹಾಗೆಯೇ, ಮಾರುಕಟ್ಟೆ ಮೌಲ್ಯ ಪಾವತಿಸಲು ಅರ್ಜಿದಾರರು ಸಿದ್ದರಿದ್ದಾರೆ ಎಂಬ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿತ್ತು. ಅದರಂತೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳವಂತೆ ಸೂಚಿಸಿ ಅರ್ಜಿ ಇತ್ಯರ್ಥಪಡಿಸಿತ್ತು.

ಅದರಂತೆ ಕಾಲೇಜು ಆಡಳಿತ ಮಂಡಳಿ 2014, 2016, 2018, 2019ರಲ್ಲಿ ಜಮೀನು ಮಂಜೂರು ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತಲೇ ಬಂದಿದೆ. ಅಂತೆಯೇ, 2020ರ ಆಗಸ್ಟ್ 25ರಂದು ಕೂಡ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರಿಗೂ ಜಮೀನು ಮಂಜೂರು ಮಾಡುವಂತೆ ಮನವಿ ಸಲ್ಲಿಸಿದೆ.

ಕೋರಿಕೆ ಮೇರೆಗೆ 2014ರಲ್ಲಿ ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಭೂ ಒಡೆತನವನ್ನು ಕಾಲೇಜಿಗೆ ನೀಡುವುದಾಗಿ ಭರವಸೆ ನೀಡಿದ್ದರು. ಕಾಗೋಡು ತಿಮ್ಮಪ್ಪ, ಆರ್ ವಿ ದೇಶಪಾಂಡೆ ಮತ್ತಿತರ ಸಚಿವರೂ ಕೂಡ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಜಾಗವನ್ನು ಕಾಲೇಜಿಗೆ ನೀಡುವುದಾಗಿ ತಿಳಿಸಿದ್ದರು. ಆದರೆ, ಸರ್ಕಾರ ಭರವಸೆಯನ್ನು ಇಂದಿಗೂ ಈಡೇರಿಸಿಲ್ಲ. ಇದರ ನಡುವೆ ಕಂದಾಯ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಕಾಲೇಜಿನ ಜಾಗವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಆರ್‌ಎಸ್‌ಎಸ್ ವಿರುದ್ಧ ಆರೋಪ : ಇದೀಗ ಕೆ ಜಿ ಬೋಪಯ್ಯ ಹಾಗೂ ಆರ್​ಎಸ್​ಎಸ್​ನ ಮುಖಂಡರ ಒತ್ತಡಕ್ಕೆ ಒಳಗಾಗಿರುವ ಅಧಿಕಾರಿಗಳು ಕಾಲೇಜಿನ ಜಾಗ ಕಿತ್ತುಕೊಳ್ಳಲು ಮುಂದಾಗಿದ್ದಾರೆ ಎಂದು ವಿಧಾನ ಪರಿಷ್ ಸದಸ್ಯ ನಜೀರ್ ಅಹ್ಮದ್ ಅವರು ನೇರವಾಗಿ ಆರೋಪಿಸಿದ್ದಾರೆ. ಅಲ್ಲದೇ, ಶೈಕ್ಷಣಿಕವಾಗಿ ಮುಸ್ಲಿಮರು ತೀರಾ ಹಿಂದುಳಿದಿದ್ದಾರೆ.

ಇರುವ ಒಂದೊಳ್ಳೆ ಶಿಕ್ಷಣ ಸಂಸ್ಥೆಯನ್ನೂ ಇವರು ಮುಚ್ಚಿಸಲು ಮುಂದಾಗಿದ್ದಾರೆ. ಹಾಗಿದ್ದರೇ ನಾವೆಲ್ಲಿಗೆ ಹೋಗಬೇಕು? ನಮ್ಮನ್ನು ಇಷ್ಟು ಕೀಳಾಗಿ ಕಾಣುವುದೇಕೆ? ನಾವು ಈ ದೇಶದ ಪ್ರಜೆಗಳಲ್ಲವಾ? ನಾವು ದೇಶಕ್ಕೆ ಸೇವೆ ಸಲ್ಲಿಸುತ್ತಿಲ್ಲವಾ? ಹಾಗಿದ್ದೂ ಹೀಗೇಕೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿರುವ ನಜೀರ್ ಅಹ್ಮದ್ ಇದಕ್ಕೆಲ್ಲಾ ಆರ್‌ಎಸ್‌ಎಸ್‌ನವರೇ ಮೂಲ ಕಾರಣ ಎಂದು ಆರೋಪಿಸಿದ್ದಾರೆ.

ರಾಜಕೀಯ ಜಟಾಪಟಿ ಏನೇ ಇದ್ದರೂ ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಬಲಿಕೊಟ್ಟು ಕೊಠಡಿಗಳಿಗೆ ಬೀಗ ಹಾಕಿದ್ದು ಜವಾಬ್ದಾರಿಯುತ ಸರ್ಕಾರದ ನಡವಳಿಕೆಯಲ್ಲ ಎಂಬುದಂತೂ ಸತ್ಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.