ETV Bharat / state

ಚುನಾವಣಾ ರಾಜಕೀಯ ನಿವೃತ್ತಿ ಸ್ವಂತ ತೀರ್ಮಾನ, ಯಾವುದೇ ಒತ್ತಡ ಇರಲಿಲ್ಲ: ಸದಾನಂದಗೌಡ

Sadananda gowda retires from electoral politics: ಚುನಾವಣಾ ರಾಜಕೀಯ ನಿವೃತ್ತಿ ಬಗ್ಗೆ ಯಾರ ಜೊತೆಯೂ ಚರ್ಚಿಸಿಲ್ಲ. ನಿವೃತ್ತಿಗೆ ಯಾರೂ ಒತ್ತಡ ಹಾಕಿಲ್ಲ. ಇದು ನನ್ನ ಸ್ವಂತ ನಿರ್ಧಾರ ಎಂದು ಮಾಜಿ ಸಿಎಂ ಸದಾನಂದಗೌಡ ಸ್ಪಷ್ಟಪಡಿಸಿದರು.

ಸದಾನಂದಗೌಡ sadanandagowda
ಸದಾನಂದಗೌಡ
author img

By ETV Bharat Karnataka Team

Published : Nov 10, 2023, 12:33 PM IST

ಬೆಂಗಳೂರು: ಚುನಾವಣಾ ರಾಜಕೀಯ ನಿವೃತ್ತಿ ನಿರ್ಧಾರ ನನ್ನ ಸ್ವಂತ ನಿರ್ಧಾರ. ಈ ಬಗ್ಗೆ ಯಾರೂ ನನ್ನ ಜೊತೆ ಚರ್ಚಿಸಿಲ್ಲ, ಒತ್ತಡ ಹಾಕಿಲ್ಲ. ಟಿಕೆಟ್ ಕೈ ತಪ್ಪುವ ಆತಂಕದಿಂದಲೂ ಈ ನಿರ್ಧಾರ ಕೈಗೊಂಡಿಲ್ಲ. ನನ್ನ ಕುಟುಂಬದ ಜೊತೆ ಚರ್ಚಿಸಿ ನಾನೇ ತೆಗೆದುಕೊಂಡ ನಿರ್ಧಾರ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಸ್ಪಷ್ಟೀಕರಣ ನೀಡಿದ್ದಾರೆ.

ಸಂಜಯ್ ನಗರದಲ್ಲಿರುವ ನಿವಾಸದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಾಸ್ತವವಾಗಿ ರಾಷ್ಟ್ರೀಯ ನಾಯಕ ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಾರೆ. ಯಾವುದೇ ಒತ್ತಡ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ನಾನು ಆಂಜನೇಯ ರೀತಿ ಎದೆ ಬಗೆದು ತೋರಿಸಲಾಗಲ್ಲ. ಸತ್ಯವನ್ನೇ ಹೇಳಿದ್ದೇನೆ. ಕಠೋರವಾಗಿ ಹೇಳಿಲ್ಲ. ಯಾವುದೇ ಒತ್ತಡ ಇಲ್ಲ. ಯಾರ ಬಳಿಯೂ ಚರ್ಚೆ ಮಾಡಿಲ್ಲ. ನಾನು ನಿವೃತ್ತಿ ಆಗ್ತೇನೆ ಅಂತ 2019ರಲ್ಲೇ ಹೇಳಿದ್ದೆ. ಆಗ ಪಕ್ಷ ಮತ್ತು ಸಂಘ ಈ ಬಾರಿ ಸ್ಪರ್ಧೆ ಮಾಡಿ ಅಂತ ಹೇಳಿದ್ದರು. ಅದಕ್ಕಾಗಿಯೇ ಸ್ಪರ್ಧೆ ಮಾಡಿದ್ದೆ. ರಾಜಕೀಯ ನಿವೃತ್ತಿ ನಿರ್ಧಾರಕ್ಕೂ ಹೈಕಮಾಂಡ್​​ಗೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಈವರೆಗೂ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಪಕ್ಷದ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಇವತ್ತಿನ ಈ ನಿಲುವು ನನ್ನ ಮನೆಯವರಿಗೆ ಬಿಟ್ಟು, ಯಾರ ಬಳಿಯೂ ಚರ್ಚೆ ಮಾಡಿ ತೀರ್ಮಾನ ಮಾಡಿಲ್ಲ. ಕೆಲವರು 13 ಜನರಿಗೆ ಟಿಕೆಟ್ ಇಲ್ಲ ಸದಾನಂದಗೌಡರಿಗೂ ಟಿಕೆಟ್ ಇಲ್ಲ ಅಂತ ಚರ್ಚೆ ಮಾಡಿದ್ದರು. ಆದರೆ ಅದು ನೂರಕ್ಕೆ ನೂರು ಸುಳ್ಳು. ಯಡಿಯೂರಪ್ಪ ಅವರು ವ್ಯತ್ಯಾಸ ಹೇಳಿಕೆ ನೀಡಿದ್ದರು. ಆದರೆ ಟ್ವೀಟ್ ಮಾಡಿ ಸ್ಪಷ್ಟಪಡಿಸಿದರು. ಹಾಗಾಗಿ ನಾನು ಅವರ ಬಗ್ಗೆಯೂ ಹೇಳಿಕೆ ನೀಡಲ್ಲ ಎಂದರು.

ನಾವು ಮಂಡ್ಯ, ಹಾಸನ ಎಲ್ಲಾ ಕಡೆ ಪಕ್ಷದ ಕೆಲಸ ಮಾಡಿದ್ದೇವೆ. ರಾಜಕಾರಣದಲ್ಲಿ ನಾನೇ ಇರಬೇಕು, ನನ್ನ ಮಕ್ಕಳಿರಬೇಕು ಅನ್ನುವ ಅಪೇಕ್ಷೆ ನನಗಿಲ್ಲ. ಕುಟುಂಬದ ರಾಜಕಾರಣ ಸರಿಯಲ್ಲ. ಸಕಾಲದಂತ ಕಾನೂನು ತಂದು ಭ್ರಷ್ಟಾಚಾರಕ್ಕೆ ಒಂದಷ್ಟು ಕಡಿವಾಣ ಹಾಕುವ ಕೆಲಸ ಮಾಡಿದ್ದೇವೆ. ಸದಾನಂದಗೌಡ ಯಾರ ಛೇಲ ಅಲ್ಲ. ಯಾರ ಒತ್ತಡಕ್ಕೂ ತೀರ್ಮಾನ ತೆಗೆದುಕೊಳ್ಳಲ್ಲ. ಯಾವುದೇ ಆಮಿಷಕ್ಕೆ ಒಳಗಾಗಿಲ್ಲ. ಇದು ಜವಾಬ್ದಾರಿ ಅಂತ ತಿಳಿದಿದ್ದೇನೆ. ಕೋಟ್ಯಂತರ ಕಾರ್ಯಕರ್ತರು ಇರುವ ಪಕ್ಷ. ನಮ್ಮದು 32 ಲಕ್ಷ ಮತದಾರರಿರೋ ಕ್ಷೇತ್ರ. ಒಬ್ಬನೇ ಒಬ್ಬ ಕಾರ್ಯಕರ್ತ ಸದಾನಂದಗೌಡ ಸರಿ ಇಲ್ಲ ಅಂತ ಹೇಳಿದರೆ ನಾನು ಬೆಂಗಳೂರನ್ನೇ ಬಿಟ್ಟುಬಿಡ್ತೀನಿ ಎಂದು ಟಿಕೆಟ್ ಕೈತಪ್ಪುತ್ತೆ ಅನ್ನೋ ವಿಚಾರಕ್ಕೆ ಗರಂ ಆದರು.

ಕರ್ನಾಟಕದ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಿ. ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡಿರಬಹುದು. ಆದರೆ ಲೋಕಸಭಾ ಚುನಾವಣೆಗೆ ಡಬಲ್ ಕೊಡುತ್ತೇವೆ. ದಯವಿಟ್ಟು ರಾಜ್ಯದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಕೇಂದ್ರದ ನಾಯಕರಿಗೆ ಮನವಿ ಮಾಡಿದರು. ರಾಜ್ಯಕ್ಕೆ ಬರದೆ, ರಾಜ್ಯದ ಪ್ರತಿಪಕ್ಷ ನಾಯಕರ ಆಯ್ಕೆ ಮಾಡದೆ ಹಾಗೆಯೇ ಬಿಡೋದು ಸರಿಯಲ್ಲ ಎಂದು ಹೈಕಮಾಂಡ್ ವಿರುದ್ಧ ಸದಾನಂದಗೌಡ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಡಿವಿ ಸದಾನಂದಗೌಡ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.