ಬೆಂಗಳೂರು: ಕೊರೊನಾ 2ನೇ ಅಲೆ ಆರ್ಭಟ ಹೆಚ್ಚಾಗುತ್ತಲೇ ಇದ್ದು, ಕೊರೊನಾ ಚೈನ್ಲಿಂಕ್ ಹರಡದಂತೆ ತಡೆಯಲು ಲಾಕ್ಡೌನ್ ಘೋಷಿಸಲಾಗಿದೆ. ಈ ನಡುವೆ ಹಲವು ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಇದೀಗ ಲಾಲ್ಬಾಗ್ ಗಾರ್ಡನ್ ಸಹ ಲಾಕ್ಡೌನ್ನಲ್ಲಿ ಬಂದ್ ಆಗಿರಲಿದೆ ಎಂದು ತೋಟಗಾರಿಕಾ ಇಲಾಖೆ ಮಾಹಿತಿ ನೀಡಿದೆ. ಈ ಮೊದಲು ಬೆಳಗ್ಗೆ ಸಾರ್ವಜನಿಕರಿಗೆ ವಾಕಿಂಗ್ ಮಾಡಲು ಇಲಾಖೆ ಅವಕಾಶ ನೀಡಿತ್ತು. ಆದರೆ ನಗರದಲ್ಲಿ ಕೊರೊನಾ ಹೆಚ್ಚಾದ ಹಿನ್ನೆಲೆ ಲಾಕ್ಡೌನ್ ಅಂತ್ಯದವರೆಗೆ ಲಾಲ್ಬಾಗ್ ಮುಚ್ಚಲು ನಿರ್ಧರಿಸಿದೆ.