ETV Bharat / state

ದಿಗ್ಬಂಧನ ಕಳೆ ಬೇರೆಡೆಗೆ ಪ್ರಸರಣವಾಗದಂತೆ ಕೃಷಿ ಇಲಾಖೆ  ತಡೆ: ಬಿ.ಸಿ.ಪಾಟೀಲ್

ಹೊಸ ದಿಗ್ಬಂಧನ ಕಳೆ-ಕಾಡುದವನ ಸೂರ್ಯಕಾಂತಿ ಜಾತಿಯ ಬಹುವಾರ್ಷಿಕ ಬೆಳೆಯಾದ ವಿದೇಶಿ ಕಳೆಯನ್ನು ನಿರ್ಮೂಲನೆ ಮಾಡಲು, ಬಾಧಿತ ಹೊರವರ್ತುಲ ಪ್ರದೇಶದಿಂದ ಕಳೆಗಳ ನಿಯಂತ್ರಣ ಕಾರ್ಯ ಕೈಗೊಂಡು ಕಳೆಯು ಬಾಧಿತ ಪ್ರದೇಶದಿಂದ ಬೇರೆಡೆಗೆ ಪ್ರಸರಣಗೊಳ್ಳುವುದನ್ನು ತಡೆಯಲಾಗುತ್ತದೆ ಎಂದು ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.

BC Patil
ಬಿ.ಸಿ.ಪಾಟೀಲ್
author img

By

Published : Mar 17, 2020, 8:16 PM IST

ಬೆಂಗಳೂರು: ಭೌತಿಕ, ರಾಸಾಯನಿಕ ಹಾಗೂ ಜೈವಿಕ ವಿಧಾನಗಳನ್ನು ಅನುಸರಿಸಿ ಸಾಮೂಹಿಕ ಕಳೆ ನಿರ್ವಹಣಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.

ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ದೇಶದಲ್ಲಿಯೇ ಮೊದಲ ಬಾರಿಗೆ ಕಂಡುಬಂದ ಹೊಸ ದಿಗ್ಬಂಧನ ಕಳೆ-ಕಾಡುದವನ (ಅಂಬ್ರೋಸಿಯಾ ಸೈಲೋಸ್ಟಾಕಿಯಾ) ಸೂರ್ಯಕಾಂತಿ ಜಾತಿಯ ಬಹುವಾರ್ಷಿಕ ಬೆಳೆಯಾದ ವಿದೇಶಿ ಕಳೆಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ, ಬಾಧಿತ ಹೊರವರ್ತುಲ ಪ್ರದೇಶದಿಂದ ಕಳೆಗಳ ನಿಯಂತ್ರಣ ಕಾರ್ಯ ಕೈಗೊಂಡಿದ್ದರಿಂದ ಕಳೆಯು ಬಾಧಿತ ಪ್ರದೇಶದಿಂದ ಬೇರೆಡೆಗೆ ಪ್ರಸರಣಗೊಳ್ಳುವುದನ್ನು ತಡೆಯಲಾಗಿರುತ್ತದೆ ಎಂದಿದ್ದಾರೆ.

ಈ ನಿಟ್ಟಿನಲ್ಲಿ ಕೃಷಿ ಇಲಾಖೆ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಕೇಂದ್ರೀಯ ಸಮಗ್ರಹ ಪೀಡೆ ನಿರ್ವಹಣಾ ಕೇಂದ್ರ ಬೆಂಗಳೂರು ಹಾಗೂ ಸ್ಥಳೀಯ ರೈತರ ಸಹಯೋಗದೊಂದಿಗೆ ಕಳೆ ನಿರ್ವಹಣಾ ಕಾರ್ಯ ಪ್ರಗತಿಯಲ್ಲಿದೆ. 2013-14 ನೇ ಸಾಲಿನಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯಕ್ಕೆ 12.10 ಲಕ್ಷ ರೂ. ಅನುದಾನವನ್ನು ಒದಗಿಸಿ ವಿಜ್ಞಾನಿಗಳ ನೇತೃತ್ವದಲ್ಲಿ 2017ರವರೆಗೆ ಅಗತ್ಯ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ.

ಮುಂಗಾರಿನ ರಾಗಿ ಬೆಳೆಯುವ ಪ್ರದೇಶದಲ್ಲಿ 2-4, ಡಿ ಸೋಡಿಯಂ ಲವಣಾಂಶವುಳ್ಳ ಕಳೆನಾಶಕವನ್ನು ಹಾಗೂ ಬೆಳೆಯಿಲ್ಲದ ಖಾಲಿ ಜಾಗದಲ್ಲಿ, ಅರಣ್ಯ ಪ್ರದೇಶ ಹಾಗೂ ಬಂಜರು ಪ್ರದೇಶದಲ್ಲಿ ಗ್ರೈಪೋಸೇಟ್ ಕಳೆ ನಾಶಕವನ್ನು ಬಳಸಿ ನಿಯಂತ್ರಣ ಕೈಗೊಳ್ಳಲಾಗಿರುತ್ತದೆ. ಬಾಧಿತ ಪ್ರದೇಶದ ರೈತರಿಗೆ ರಿಯಾಯಿತಿ ಹಾಗೂ ಉಚಿತವಾಗಿ ಕಳೆನಾಶಕಗಳನ್ನು ಹಾಗೂ ಸಿಂಪರಣಾ ವೆಚ್ಚವನ್ನು ನಿಯಂತ್ರಣಾ ಯೋಜನೆ ಮೂಲಕ ನೀಡಲಾಗಿರುತ್ತದೆ ಎಂದಿದ್ದಾರೆ.

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದವರು ಕಳೆಯ ಸಂಪೂರ್ಣ ನಿರ್ಮೂಲನೆಗೆ ಕಳೆನಾಶಕ ಬಳಕೆಯ ಜೊತೆಗೆ ಇತರ ಸಂಭವನೀಯ ಪದ್ಧತಿಗಳ ಬಗ್ಗೆ ಸಂಶೋಧನೆ ಕೈಗೊಳ್ಳಲು ಮತ್ತು ನಿರ್ಮೂಲನ ಕಾರ್ಯ ಚಟುವಟಿಕೆಗಳಿಗೆ ಮೂರು ವರ್ಷಗಳಿಗೆ 23.07 ಲಕ್ಷ ರೂ.ಗಳಿಗೆ ಅನುದಾನದ ಬೇಡಿಕೆ ಸಲ್ಲಿಸಿದ್ದು, ಬೇಡಿಕೆಗನುಗುಣವಾಗಿ ಸರ್ಕಾರ ಈಗಾಗಲೇ 7.69 ಲಕ್ಷ ರೂ.ಗಳನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯಕ್ಕೆ ಬಿಡುಗಡೆಗೊಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.