ETV Bharat / state

ಹಲ್ಲೆ ಮಾಡಿದ ಕಂಪ್ಲಿ ಶಾಸಕ ಗಣೇಶ್‌ರನ್ನ ಉಳಿಸಿ, ಆನಂದ ಸಿಂಗ್​ರನ್ನು ಕಳೆದುಕೊಳ್ತಾ ಕಾಂಗ್ರೆಸ್?

ಕಂಪ್ಲಿಯ ಶಾಸಕ ಗಣೇಶ್​ ಅವರು ಶಾಸಕ ಆನಂದ ಸಿಂಗ್‌ರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು ಎಂಬ ಆರೋಪವಿದೆ. ಇದೇ ಆರೋಪ ಮೇಲೆ ಅವರು ಜೈಲಿಗೂ ಹೋಗಿದ್ದರು. ಸದ್ಯ ಜಾಮೀನು ಪಡೆದಿರುವ ಗಣೇಶ್‌ರನ್ನ ಮತ್ತೆ ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗಿರುವುದು ತಮ್ಮ ರಾಜೀನಾಮೆಗೆ ಕಾರಣ ಎಂದು ಆನಂದ್‌ಸಿಂಗ್‌ ಹೇಳಿದ್ದಾರೆ.

author img

By

Published : Jul 2, 2019, 7:34 AM IST

ಶಾಸಕರಾದ ಕಂಪ್ಲಿ ಗಣೇಶ, ಆನಂದ ಸಿಂಗ್​

ಬೆಂಗಳೂರು: ಕಂಪ್ಲಿ ಶಾಸಕ ಗಣೇಶ್​ ಅವರ ಅಮಾನತು ಆದೇಶ ಹಿಂಪಡೆದು ಕಾಂಗ್ರೆಸ್ ಪಕ್ಷ ಶಾಸಕ ಆನಂದ ಸಿಂಗ್ ವಿರೋಧವನ್ನು ಕಟ್ಟಿಕೊಂಡಿತಾ ಎನ್ನುವ ಪ್ರಶ್ನೆ ಈಗ ಸಾರ್ವಜನಿಕ ವಲಯಲ್ಲಿ ಮೂಡುತ್ತಿದೆ.

bgv
ಶಾಸಕರಾದ ಕಂಪ್ಲಿ ಗಣೇಶ ಮತ್ತು ಆನಂದ ಸಿಂಗ್​

ಶಾಸಕ ಸ್ಥಾನಕ್ಕೆ ಆನಂದ ಸಿಂಗ್ ರಾಜೀನಾಮೆ ನೀಡಲು ಜಿಂದಾಲ್ ಭೂಮಿ ಪರಭಾರೆಗಿಂತಲೂ ಕಂಪ್ಲಿ ಗಣೇಶ್‌ ಅಮಾನತು ಹಿಂದಕ್ಕೆ ಪಡೆದಿರುವುದು ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಆನಂದ್ ಸಿಂಗ್ ಅವರೇ ಸ್ವತಃ ಜಿಂದಾಲ್‌ಗೆ ಭೂಮಿ ಪರಭಾರೆ ಮಾಡಿದ ಪ್ರಕರಣ ತಮ್ಮ ರಾಜೀನಾಮೆಗೆ ಪ್ರಮುಖ ಕಾರಣವೆಂದು ಹೇಳಿದ್ದಾರಾದರೂ, ಅಸಲೀ ಕಾರಣ ಬೇರೆಯದ್ದೇ ಇದೆ ಎನ್ನಲಾಗುತ್ತಿದೆ.

ಈಗಲ್ಟನ್ ರೆಸಾರ್ಟ್‌ನಲ್ಲಿ ತಂಗಿದ್ದಾಗ ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಶಾಸಕ ಕಂಪ್ಲಿ ಗಣೇಶ ಅಮಾನತು ಆದೇಶ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ವೇಣುಗೋಪಾಲ್ ಹಿಂದಕ್ಕೆ ಪಡೆದಿರುವುದು ಆನಂದ್ ಸಿಂಗ್​ರಿಗೆ ಪಕ್ಷದ ಮೇಲೆ ಅಸಮಾಧಾನ ತೀವ್ರಗೊಳ್ಳಲು ಕಾರಣ ಎನ್ನಲಾಗುತ್ತಿದೆ. ಹಲ್ಲೆ ನಡೆಸಿದ ಶಾಸಕನನ್ನು ಹಿರಿಯ ನಾಯಕರು ಕಾಂಗ್ರೆಸ್ ಪಕ್ಷದಿಂದ ಹೊರ ಕಳುಹಿಸಿದಕ್ಕೆ ಆನಂದ್ ಸಿಂಗ್‌ರಿಗೆ ಸ್ವಲ್ಪ ಸಮಾಧಾನ ತರಿಸಿತ್ತು. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮೈತ್ರಿ ಸರ್ಕಾರಕ್ಕೆ ಅಪಾಯ ಒದಗಲಿದೆ. ಪ್ರತಿ ಶಾಸಕನ ಬೆಂಬಲವೂ ಅತ್ಯಗತ್ಯ ಎಂದು ಮನಗಂಡು ಕಂಪ್ಲಿ ಶಾಸಕ ಗಣೇಶ್​ ಅವರನ್ನು ಕಾಂಗ್ರೆಸ್‌ ಮತ್ತೆ ಸ್ವಾಗತಿಸಿದೆ.

ಬಿಜೆಪಿ ಗಾಳ ಹಾಕಿದ್ದರೂ ಎನ್ನಲಾದ ಅತೃಪ್ತ ಶಾಸಕರ ಜತೆ ಗಣೇಶ ಸಹ ಆಪರೇಷನ್ ಕಮಲಕ್ಕೆ ಒಳಗಾಗಲಿದ್ದಾರೆ ಎನ್ನುವುದು ತಿಳಿದಾಗ ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕ ಗಣೇಶ್‌ ಮೇಲಿದ್ದ ಅಮಾನತು ಆದೇಶ ವಾಪಸ್​ ಪಡೆದರು. ಈ ಬೆಳವಣಿಗೆ ಶಾಸಕ ಆನಂದ್ ಸಿಂಗ್ ಅವರನ್ನು ಕೆರಳಿಸಿತು. ಕುಟುಂಬದಿಂದಲೂ ಪಕ್ಷದ ಈ ಕ್ರಮಕ್ಕೆ ಬಲವಾದ ಪ್ರತಿರೋಧ ವ್ಯಕ್ತವಾಯಿ ಎನ್ನಲಾಗಿದೆ. ಹಾಗಾಗಿಯೇ ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್‌ ರಾಜೀನಾಮೆ ನೀಡಿದ್ದಾರೆ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.

Intro:ಕಂಪ್ಲಿ ಶಾಸಕ ಗಣೇಶನನ್ನು ಉಳಿಸಿಕೊಂಡು
ಆನಂದ ಸಿಂಗ್ ರನ್ನು ಕಳೆದುಕೊಂಡಿತಾ ಕಾಂಗ್ರೆಸ್...!

ಬೆಂಗಳೂರು : ಕಂಪ್ಲಿ ಶಾಸಕ ಗಣೇಶ್ ನ ಅಮಾನತ್ತು ಆದೇಶ ಹಿಂದಕ್ಕೆ ಪಡೆದು ಕಾಂಗ್ರೆಸ್ ಪಕ್ಷ ಶಾಸಕ ಆನಙದ ಸಿಂಗ್ ವಿರೋಧವನ್ನು ಕಟ್ಟಿಕೊಂಡಿತಾ ಎನ್ನುವ ಪ್ರಶ್ನೆ ಈಗ ಉದ್ಭವಗೊಂಡಿದೆ.

ಶಾಸಕ ಸ್ಥಾನಕ್ಕೆ ಆನಂದ ಸಿಂಗ್ ರಾಜೀನಾಮೆ ನೀಡಲು ಜಿಂದಾಲ್ ಭೂಮಿ ಪರಭಾರೆಗಿಂಥಲೂ ಶಾಸಕ ಕಂಪ್ಲಿ ಗಣೇಶನ ಅಮಾನತ್ತನ್ನು ಹಿಂದಕ್ಕೆ ಪಡೆದಿರುವುದು ಪ್ರಮುಖ ಕಾರಣ ವೆಂದು ಹೇಳಲಾಗುತ್ತಿದೆ.

Body: ಆನಂದ್ ಸಿಂಗ್ ಅವರೇ ಸ್ವತಹ ಜಿಂದಾಲ್ ಗೆ ಭೂಮಿ ಪರಭಾರೆ ಮಾಡಿದ ಪ್ರಕರಣ ತಮ್ಮ ರಾಜೀನಾಮೆಗೆ ಪ್ರಮುಖ ಕಾರಣವೆಂದು ಹೇಳಿದ್ದಾರಾದರೂ ಅಸಲೀ ಕಾರಣ ಬೇರೆಯದ್ದೇ ಇದೆ ಎನ್ನಲಾಗುತ್ತದೆ.

ಈಗಲ್ಟನ್ ರೆಸಾರ್ಟ್ ನಲ್ಲಿ ತಂಗಿದ್ದಾಗ ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಶಾಸಕ ಕಂಪ್ಲಿ ಗಣೇಶನ ಅಮಾನತ್ತು ಆದೇಶವನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ವೇಣುಗೋಪಾಲ್ ಹಿಂದಕ್ಕೆ ಪಡೆದಿರುವುದು ಆನಂದ್ ಸಿಂಗ್ ಗೆ ಪಕ್ಷದ ಮೇಲೆ ಅಸಮಾಧಾನವನ್ನು ತೀವ್ರಗೊಳಿಸಿದೆ ಎಂದು ತಿಳಿದುಬಂದಿದೆ.

ಶಾಸಕ ಗಣೇಶ್ ನಡೆಸಿದ ಹಲ್ಲೆಯಿಂದ ಆನಂದ್ ಸಿಂಗ್ ತಿಂಗಳು ಗಟ್ಟಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮುಖದ ಮೇಲೆಲ್ಲಾ ಗಂಭೀರ ಗಾಯಗಳಾಗಿ ಯಾತನೆ ಅನುಭವಿಸಿದ್ದರು. ಸಾರ್ವಜನಿಕವಾಗಿ ಮುಜುಗರವನ್ನೂ ಎದುರಿಸಿದ್ದರು.

ಹಲ್ಲೆ ನಡೆಸಿದ ಶಾಸಕನನ್ನು ಹಿರಿಯ ನಾಯಕರು ಕಾಂಗ್ರೆಸ್ ಪಕ್ಷದಿಂದ ಸಸ್ಪೆಂಡ್ ಮಾಡಿದ್ದಕ್ಕೆ ಆನಂದ್ ಸಿಂಗ್ ಸ್ವಲ್ಪ ನೆಮ್ಮದಿ ಪಡೆದುಕೊಂಡಿದ್ದರು. ಕನಿಷ್ಟ ಪಕ್ಷ ಹಲ್ಲೆ ನಡೆಸಿದ ಶಾಸಕನ ಮೇಲೆ ಶಿಸ್ತು ಕ್ರಮವನ್ನಾದರೂ ಕಾಂಗ್ರೆಸ್ ತಗೆದುಕೊಂಡಿತಲ್ಲಾ ಎಂದು ಸಮಾಧಾನ ಪಟ್ಟು ಕೊಂಡಿದ್ದರು.

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮೈತ್ರಿ ಸರಕಾರಕ್ಕೆ ಅಪಾಯ ಒದಗಲಿದೆ. ಪ್ರತಿಯೊಬ್ಬ ಶಾಸಕರ ಬೆಂಬಲವೂ ಅತ್ಯಗತ್ಯ ಎಂದು ಮನಗಂಡಾಗ. ಕಂಪ್ಲಿ ಶಾಸಕ ಗಣೇಶ್ ಗೆ ಬಿಜೆಪಿ ಗಾಳ ಹಾಕಿದ್ದು ಅತೃಪ್ತ ಶಾಸಕರ ಜತೆ ಗಣೇಶ ಸಹ ಆಪರೇಶನ್ ಕಮಲಕ್ಕೆ ಒಳಗಾಗಲಿದ್ದಾರೆ ಎನ್ನುವುದು ತಿಳಿದಾಗ ಮಾಜಿ ಸಿಎಂ ಸಿದ್ದರಾಮಯ್ಯ ನವರು ಶಾಸಕ ಗಣೇಶ್ ನನ್ನು ಸಸ್ಪೆಂಡ್ ಮಾಡಿದ್ದ ಆದೇಶವನ್ನು ವಾಪಾಸ್ಸು ಪಡೆದರು. ಈ ಬೆಳವಣಿಗೆ ಶಾಸಕ ಆನಂದ್ ಸಿಂಗ್ ಅವರನ್ನು ಕೆರಳಿಸಿತು. ಕುಟುಂಬದಿಂದಲೂ ಪಕ್ಷದ ಈ ಕ್ರಮಕ್ಕೆ ಬಲವಾದ ಪ್ರತಿರೋಧ ವ್ಯಕ್ತವಾಯಿತೆನ್ನಲಾಗಿದೆ.

ಇಲ್ಲಿಯತನಕ ಸಿಟ್ಟನ್ನು ಅದುಮಿಟ್ಟುಕೊಂಡೇ ಬಂದಿದ್ದ ಶಾಸಕ ಆನಂದ್ ಸಿಂಗ್ ದಿಢೀರನೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ದೋಸ್ತಿ ಸರಕಾರಕ್ಕೆ ಸಂಕಷ್ಟ ತಂದಿದ್ದಾರೆ ಅಷ್ಟೇ ಅಲ್ಲ ಕಾಂಗ್ರೆಸ್ ನಾಯಕರ ನಿದ್ದೆಯನ್ನೂ ಕೆಡಿಸಿದ್ದಾರೆ.

Conclusion: ಐಟಿ ದಾಳಿ ಭಯವೂ ಇತ್ತೇ..?

ಆನಂದ್ ಸಿಂಗ್ ಶಾಸಕ ಹುದ್ದೆಗೆ ರಾಜೀನಾಮೆ ನೀಡಲು ಆದಾಯ ತೆರಿಗೆ ಇಲಾಖೆ ದಾಳಿ ನಡೆಸುವ ಭೀತಿ ಸಹ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸರಕಾರ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದರಿಂದ ತಮ್ಮ ಮೇಲೆ ಐಟಿ ಇಲಾಖೆ ದಾಳಿ ನಡೆಸಿ ಗಣಿಗಾರಿಕೆಯಲ್ಲಿ ಸಂಪಾದಿಸಿದ ಸಂಪತ್ತಿಗೆ ಸಂಕಷ್ಟ ತರಲಿದೆಯೇ ಎನ್ನುವ ಭಯದಿಂದಲೂ ಕಾಂಗ್ರೆಸ್ ನ ಶಾಸಕ ಸ್ತಾನಕ್ಕೆ ರಾಜೀನಾಮೆ ಕೊಟ್ಟಿರಲೂಬಹುದೆಂದು ಹೇಳಲಾಗುತ್ತದೆ.

ಇಬ್ಬರು ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ ನೀಡಿ ಸರಕಾರ ಇನ್ನು ಸುಭದ್ರ . ಬಿಜೆಪಿಯಿಂದ ಮೈತ್ರಿ ಆಡಳಿತಕ್ಕೆ ಅಪಾಯ ತರಲು ಸಾದ್ಯ ವಿಲ್ಲವೆಂದು ನೆಮ್ಮದಿಯಿಂದ ಇದ್ದ ದೋಸ್ತಿ ಪಕ್ಷಗಳ ಸರಕಾರಕ್ಕೆ ಶಾಸಕ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ಸಂಕಷ್ಟವನ್ನಂತೂ ತಂದಿಟ್ಟಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.