ETV Bharat / state

ಹೈಕೋರ್ಟ್ ಜಮೇದಾರ್​ ಜಯರಾಮ್​ ವಿರುದ್ಧ ಕ್ರಮಕ್ಕೆ ಮನವಿ

ಸಾಲದ ಸಹಾಯ ಕೇಳುವ ನೆಪದಲ್ಲಿ ಹೈಕೋರ್ಟ್ ಜಮೇದಾರ್ ಜಯರಾಮ್ ಅವರನ್ನು ಮನೆಗೆ ಕರೆಯಿಸಿಕೊಂಡು, ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಹಣ ಸುಲಿಗೆ ಮಾಡಿದ ಆರೋಪ ಸಂಬಂಧ ಗೊಲ್ಲರಹಟ್ಟಿ ನಿವಾಸಿ ಅನುರಾಧ ಸೇರಿದಂತೆ 10 ಮಂದಿಯನ್ನು ನಗರದ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದರು.

ಹೈಕೋರ್ಟ್
ಹೈಕೋರ್ಟ್
author img

By

Published : Nov 9, 2022, 10:50 PM IST

ಬೆಂಗಳೂರು: ಹನಿಟ್ರ್ಯಾಪ್ ಹಗರಣದಲ್ಲಿ ಸಿಲುಕಿರುವ ಹೈಕೋರ್ಟ್​ನ ಜಮೇದಾರ್ ಜಯರಾಮ್ ಅವರ ಬಗ್ಗೆ ಹಲವು ಸಂಗತಿಗಳು ಹೊರಬರುತ್ತಿರುವ ಹಾಗೂ ಅವರು ಹಣಕಾಸಿನ ಲೇವಾದೇವಿ ವ್ಯವಹಾರ ನಡೆಸುತ್ತಿರುವ ಹಿನ್ನೆಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಿಜಿಸ್ಟ್ರಾರ್ ಜನರಲ್‌ಗೆ ವಕೀಲ ಎನ್ ಪಿ ಅಮೃತೇಶ್ ಮನವಿ ಸಲ್ಲಿಸಿದ್ದಾರೆ.

ಸಾಲದ ಸಹಾಯ ಕೇಳುವ ನೆಪದಲ್ಲಿ ಹೈಕೋರ್ಟ್ ಜಮೇದಾರ್ ಜಯರಾಮ್ ಅವರನ್ನು ಮನೆಗೆ ಕರೆಯಿಸಿಕೊಂಡು, ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಹಣ ಸುಲಿಗೆ ಮಾಡಿದ ಆರೋಪ ಸಂಬಂಧ ಗೊಲ್ಲರಹಟ್ಟಿ ನಿವಾಸಿ ಅನುರಾಧ ಸೇರಿದಂತೆ 10 ಮಂದಿಯನ್ನು ನಗರದ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ಹಿನ್ನೆಲೆಯಲ್ಲಿ ವಕೀಲ ಎನ್. ಪಿ ಅಮೃತೇಶ್, ರಿಜಿಸ್ಟ್ರಾರ್ ಜನರಲ್​ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಹನಿಟ್ರ್ಯಾಪ್ ಹಗರಣದಲ್ಲಿ ಜಮೇದಾರ್ ಜಯರಾಮ್ ಬಗ್ಗೆ ಹಲವು ಸಂಗತಿ ಹೊರಬರುತ್ತಿದೆ. ಅವರು ಹಣಕಾಸಿನ ಲೇವಾದೇವಿ ವ್ಯವಹಾರವನ್ನು ರಾಜಾರೋಷವಾಗಿ ನಡೆಸುತ್ತಿದ್ದಾರೆ. ನ್ಯಾಯಾಲಯದಲ್ಲಿ ಜಮೇದಾರನಾಗಿದ್ದೇನೆಂದು ಹೇಳಿಕೊಂಡು ಬಡ್ಡಿ ವ್ಯವಹಾರ ನಡೆಸುತ್ತಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಓದಿ: ಹೈಕೋರ್ಟ್ ಸಿಬ್ಬಂದಿಗೆ ಹನಿಟ್ರ್ಯಾಪ್, ಎರಡು ಲಕ್ಷಕ್ಕೆ ಡಿಮ್ಯಾಂಡ್: ಇಬ್ಬರು ಮಹಿಳೆಯರು ಸೇರಿ 10 ಜನ ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.